ಐಪಿಎಲ್ 14ನೇ ಆವೃತ್ತಿಯ ಹರಾಜಿಗೆ ದಿನಗಣನೆ ಶುರುವಾಗಿದೆ. ಇದೇ ಫೆಬ್ರವರಿ 18 ರಂದು ಚೆನ್ನೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಎಲ್ಲ ಫ್ರಾಂಚೈಸಿ ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ಅಲ್ಲದೆ ಬಿಡ್ಡಿಂಗ್ನಲ್ಲಿ ಭಾಗಿಯಾಗಲು ಒಟ್ಟು 1097 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಐಪಿಎಲ್ 2021 ಟೂರ್ನಿಗೆ ಆಟಗಾರರು ಅರ್ಜಿ ಸಲ್ಲಿಸಲು ಫೆಬ್ರವರಿ 4 ಕೊನೆಯ ದಿನಾಂಕವಾಗಿತ್ತು. ಅಂತೆಯೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೆಸರು ನೋಂದಾಯಿಸಿಕೊಂಡಿರುವ 1097 ಆಟಗಾರರ ಪಟ್ಟಿಯನ್ನು ಶುಕ್ರವಾರ (ಫೆ.5ರಂದು) ಬಿಡುಗಡೆ ಮಾಡಿದೆ.
ಇದರಲ್ಲಿ 814 ಮಂದಿ ಭಾರತೀಯ ಆಟಗಾರರು ಇದ್ದು, 283 ವಿದೇಶಿ ಆಟಗಾರರ ಅರ್ಜಿಗಳಿವೆ. ವೆಸ್ಟ್ ಇಂಡೀಸ್ನ 56, ಆಸ್ಟ್ರೇಲಿಯಾದ 42 ಹಾಗೂ ದಕ್ಷಿಣ ಆಫ್ರಿಕಾದ 38 ಪ್ಲೇಯರ್ಸ್ ತಮ್ಮ ಹೆಸರು ದಾಖಲು ಮಾಡಿದ್ದಾರೆ. ಒಮ್ಮೆಯೂ ಐಪಿಎಲ್‌ನಲ್ಲಿ ಆಡದ ಒಟ್ಟು 863 ಆಟಗಾರರು ಕಣದಲ್ಲಿದ್ದಾರೆ. ಒಟ್ಟು 61 ಆಟಗಾರರ ಖರೀದಿಗೆ ಮಾತ್ರವೇ ಅವಕಾಶವಿದ್ದು, ಪ್ರತಿ ಫ್ರಾಂಚೈಸಿ ತಂಡವು ಗರಿಷ್ಠ 25 ಆಟಗಾರರನ್ನು ಮಾತ್ರವೇ ಹೊಂದಬಹುದಾಗಿದೆ.
Ind vs Eng 1st Test, Day 2 Live Score
NEWS 🚨: 1097 players register for IPL 2021 Player Auction
More details👉 https://t.co/DSZC5ZzTWG pic.twitter.com/BLSAJcBhES
— IndianPremierLeague (@IPL) February 5, 2021
ಜನವರಿ 3, 2005 ರಂದು ಜನಿಸಿದ ನೂರ್ ಅಹ್ಮದ್ ಸ್ಲೋ ಲೆಫ್ಟ್ ಆರ್ಮ್ ಚೈನಾಮನ್ ಬೌಲರ್ ಆಗಿದ್ದಾರೆ. ಟಿ-20 ಈವರೆಗೆ 7 ಪಂದ್ಯಗಳನ್ನು ಇವರು ಆಡಿದ್ದು 8 ವಿಕೆಟ್ ಕಿತ್ತಿದ್ದಾರೆ. ಕೇವಲ 12 ರನ್ ನೀಡಿ 3 ವಿಕೆಟ್ ಪಡೆದಿರುವುದು ಅಹ್ಮದ್ರ ಶ್ರೇಷ್ಠ ಸಾಧನೆಯಾಗಿದೆ.
India vs England: ಜೋ ರೂಟ್ ಇಂಜುರಿಗೆ ತುತ್ತಾದಾಗ ಓಡಿ ಬಂದು ಟ್ರೀಟ್ಮೆಂಟ್ ಕೊಟ್ಟ ವಿರಾಟ್ ಕೊಹ್ಲಿ
ಇನ್ನೂ ಅಮೆರಿಕದಿಂದಲೂ 2 ಅರ್ಜಿಗಳು ಬಂದಿದ್ದು, ಶ್ರೀಲಾಂಕಾದಿಂದ 31 ಮತ್ತು ದಕ್ಷಿಣ ಆಫ್ರಿಕಾದಿಂದ 39 ಆಟಗಾರರು ಐಪಿಎಲ್ 2021 ಟೂರ್ನಿಯ ಭಾಗವಾಗಲು ಆಸಕ್ತಿ ತೋರಿದ್ದಾರೆ.
ಐಪಿಎಲ್ 2021 ಆಟಗಾರರ ಹರಾಜಿನಲ್ಲಿ 2 ಕೋಟಿ ರೂ. ಮೂಲ ಬೆಲೆ ಪಡೆದಿರುವ ಆಟಗಾರರು:
ಹರ್ಭಜನ್ ಸಿಂಗ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇದಾರ್ ಜಾಧವ್, ಸ್ಟೀವನ್ ಸ್ಮಿತ್, ಶಕಿಬ್ ಅಲ್ ಹಸನ್, ಮೊಯೀನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್, ಲಿಯಾಮ್ ಪ್ಲಂಕೆಟ್, ಜೇಸನ್ ರಾಯ್, ಮಾರ್ಕ್ ವುಡ್, ಕಾಲಿನ್ ಇಂಗ್ರಮ್.
ಈ ಸಲದ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲಿರುವ ಫ್ರಾಂಚೈಸಿಗಳ ಪೈಕಿ ಅತಿ ಹೆಚ್ಚು ಹಣ ವಿರುವುದು ಪಂಜಾಬ್ ಪರ. ಇವರ ಬಳಿ 53.20 ಕೋಟಿ ರೂ. ಬಾಕಿಯಿದೆ. ಎರಡನೇ ಸ್ಥಾನದಲ್ಲಿ ಆರ್ಸಿಬಿ ಇದ್ದು 35.90 ಕೋಟಿ ರೂಪಾಯಿದೆ. ರಾಜಸ್ಥಾನ 34.85 ಕೋಟಿ, ಚೆನ್ನೈ 22.90 ಕೋಟಿ, ಮುಂಬೈ ಇಂಡಿಯನ್ಸ್ 15.35 ಕೋಟಿ, ಡೆಲ್ಲಿ 12.9 ಕೋಟಿ ಹಾಗೂ ಕೆಕೆಆರ್ ಮತ್ತು ಹೈದರಾಬಾದ್ ಬಳಿ ಕ್ರಮವಾಗಿ 10.75 ಕೋಟಿ ರೂ. ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ