ಕೊರೋನಾ ಕಾರಣದಿಂದ ಈ ಸಲ ಐಪಿಎಲ್ನಲ್ಲಿ ಒಟ್ಟು 29 ಪಂದ್ಯಗಳನ್ನು ಮಾತ್ರ ಆಡಲಾಗಿದೆ. ಇನ್ನು 31 ಪಂದ್ಯಗಳು ಉಳಿದಿದ್ದು, ಈ ಪಂದ್ಯಗಳನ್ನು ಪೂರ್ಣಗೊಳಿಸಲು ಬಿಸಿಸಿಐ ಬಿಗ್ ಪ್ಲ್ಯಾನ್ ರೂಪಿಸುತ್ತಿದೆ. ಅತ್ತ 6 ಗೆಲುವು ದಾಖಲಿಸಿ ಡೆಲ್ಲಿ ಕ್ಯಾಪಿಟಲ್ಸ್ ಅಗ್ರಸ್ಥಾನದಲ್ಲಿದ್ದರೆ, 5 ಗೆಲುವುಗಳನ್ನು ಸಾಧಿಸಿರುವ ಸಿಎಸ್ಕೆ ಹಾಗೂ ಆರ್ಸಿಬಿ 2ನೇ ಮತ್ತು 3ನೇ ಸ್ಥಾನದಲ್ಲಿದೆ.
ಇನ್ನು ಈ ಸಲ ಕೂಡ ಐಪಿಎಲ್ನಲ್ಲಿ ಸಿಕ್ಸರ್‌ಗಳ ಸುರಿಮಳೆಯಾಗಿದ್ದು, ಹಲವು ತಂಡಗಳು ಸಿಕ್ಸರ್‌ಗಳ ಸಹಾಯದಿಂದ ಗೆಲುವು ದಾಖಲಿಸಿದೆ. ಹಾಗಿದ್ರೆ 29 ಪಂದ್ಯಗಳಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿರುವ ಟಾಪ್ 4 ತಂಡ ಯಾವುದು ಎಂದು ನೋಡುವುದಾದರೆ...
#4 ಕೋಲ್ಕತಾ ನೈಟ್ ರೈಡರ್ಸ್: ಈ ಸೀಸನ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರದರ್ಶನ ಹೇಳಿಕೊಳ್ಳುವಂತಿರಲಿಲ್ಲ. ಇದಾಗ್ಯೂ ಆಂಡ್ರೆ ರಸೆಲ್, ಪ್ಯಾಟ್ ಕಮಿನ್ಸ್ ಸಿಕ್ಸರ್‌ಗಳೊಂದಿಗೆ ಅಬ್ಬರಿಸಿದ್ದರು. ಪರಿಣಾಮ ಕೆಕೆಆರ್ ತಂಡ 48 ಸಿಕ್ಸರ್‌ಗಳೊಂದಿಗೆ ಗರಿಷ್ಠ ಸಿಕ್ಸರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ರಸ್ಸೆಲ್, ನಿತೀಶ್ ರಾಣಾ ಮತ್ತು ಪ್ಯಾಟ್ ಕಮ್ಮಿನ್ಸ್ ಕೆಕೆಆರ್‌ಗೆ ಹೆಚ್ಚಿನ ಕೊಡುಗೆ ನೀಡಿದರು.
#3 ರಾಜಸ್ಥಾನ್ ರಾಯಲ್ಸ್: ಈ ಸೀಸನ್ನಲ್ಲಿನ ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಏಳು ಸಿಕ್ಸರ್‌ಗಳನ್ನು ಬಾರಿಸಿ ಶತಕ ಸಿಡಿಸಿದ್ದರು. ಇನ್ನು ಜೋಸ್ ಬಟ್ಲರ್ 7 ಪಂದ್ಯಗಳಿಂದ 13 ಸಿಕ್ಸರ್ ಬಾರಿಸಿದ್ದರು. ಅದರಂತೆ ರಾಜಸ್ಥಾನ್ ರಾಯಲ್ಸ್ ಒಟ್ಟು 52 ಸಿಕ್ಸರ್‌ಗಳೊಂದಿಗೆ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
#2 ಪಂಜಾಬ್ ಕಿಂಗ್ಸ್: ಈ ಸಲ ಪಂಜಾಬ್ ಕಿಂಗ್ಸ್ ತಂಡವು ಒಟ್ಟು 57 ಸಿಕ್ಸರ್‌ಗಳನ್ನು ಬಾರಿಸಿ ಎರಡನೇ ಸ್ಥಾನದಲ್ಲಿದೆ. ಕ್ಯಾಪ್ಟನ್ ಕೆಎಲ್ ರಾಹುಲ್ 16 ಸಿಕ್ಸರ್ ಬಾರಿಸಿ ಪಂಜಾಬ್ ಪರ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ