HOME » NEWS » Ipl » IPL 2021 3 MEMBERS OF CHENNAI SUPER KINGS IPL CONTINGENT TEST COVID 19 POSITIVE ZP

IPL 2021: CSK ಗೆ ಕೊರೋನಾಂತಕ: ತಂಡದ ಮೂವರಲ್ಲಿ ಸೋಂಕಿನ ಲಕ್ಷಣ ಪತ್ತೆ..!

ಒಂದೆಡೆ ಕೋಲ್ಕತಾ ನೈಟ್ ರೈಡರ್ಸ್​ನ ಎಲ್ಲಾ ಆಟಗಾರರಿಗೂ ಪರೀಕ್ಷೆ ನಡೆಸಲಾಗಿದೆ. ಅದರ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಆಟಗಾರರು ಕೂಡ ಕೊರೋನಾ ಟೆಸ್ಟ್​​ಗೆ ಒಳಗಾಗಬೇಕಾದ ಅನಿವಾರ್ಯ ಎದುರಾಗಿದೆ. ಸ್ವಲ್ಪ ಯಾಮಾರಿದೂ ಕೋವಿಡ್ ಆವರಿಸಿಕೊಳ್ಳುತ್ತದೆ ಎಂಬುದಕ್ಕೆ ಐಪಿಎಲ್ ಸಾಕ್ಷಿಯಾಗಿದೆ.

news18-kannada
Updated:May 3, 2021, 3:59 PM IST
IPL 2021: CSK ಗೆ ಕೊರೋನಾಂತಕ: ತಂಡದ ಮೂವರಲ್ಲಿ ಸೋಂಕಿನ ಲಕ್ಷಣ ಪತ್ತೆ..!
Chennai Super Kings
  • Share this:
ಐಪಿಎಲ್ ಸೀಸನ್​ಗೆ 14ಗೆ ಕೊರೋನಾಂತಕ ಎದುರಾಗಿದೆ. ಕೊಲ್ಕತ್ತಾ ನೈಟ್ ರೈಡರ್ಸ್​ ತಂಡದ ಆಟಗಾರರು ಕೊರೋನಾ ಸೋಂಕಿಗೆ ಒಳಗಾಗಿರುವ ಸುದ್ದಿಯ ಬೆನ್ನಲ್ಲೇ ಇದೀಗ ಸಿಎಸ್​ಕೆ ಆಟಗಾರರು ಕೂಡ ಆತಂಕಗೊಂಡಿದ್ದಾರೆ. ಇದಕ್ಕೆ ಕಾರಣ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಮೂವರು ಸದಸ್ಯರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿರುವುದು.

ಕೆಕೆಆರ್ ತಂಡದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಇತ್ತೀಚೆಗಷ್ಟೇ ಸಕಲ ಮುಂಜಾಗ್ರತೆಯಿಂದಲೇ ಐಪಿಎಲ್ ಬಯೋಬಬಲ್ ವ್ಯವಸ್ಥೆಯಿಂದ ಹೊರಬಂದು ಹೊರಗೆ ತಮ್ಮ ಭುಜದ ಸ್ಕ್ಯಾನಿಂಗ್ ಮಾಡಿಸಿಕೊಂಡಿದ್ದರು. ಈ ವೇಳೆ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಸಿಎಸ್​ಕೆ ತಂಡದ ಮೂವರು ಸದಸ್ಯರ ಕೊರೋನಾ ರಿಪೋರ್ಟ್ ಪಾಸಿಟಿವ್ ಬಂದಿದೆ.

ಸಿಎಸ್​ಕೆ ತಂಡದ ಬಸ್ ಕ್ಲೀನರ್, ಬೌಲಿಂಗ್ ಕೋಚ್ ಬಾಲಾಜಿ ಹಾಗೂ ತಂಡದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಶಿ ವಿಶ್ವನಾಥನ್ ಅವರು ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಈ ಮೂವರನ್ನು ತಂಡದಿಂದ ಪ್ರತ್ಯೇಕವಾಗಿರಿಸಲಾಗಿದೆ. ಅಷ್ಟೇ ಅಲ್ಲದೆ ಸಿಎಸ್​ಕೆ ತಂಡದ ಎಲ್ಲಾ ಆಟಗಾರರನ್ನು ಕೋವಿಡ್ ಟೆಸ್ಟ್​ಗೆ ಒಳಪಡಿಸಲಾಗಿದೆ.

ಇತ್ತ ತಂಡದ ಸದಸ್ಯರು ಕೊರೋನಾ ಪಾಸಿಟಿವ್ ಆಗಿರುವ ಸುದ್ದಿ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸೋಮವಾರ ಅಭ್ಯಾಸವನ್ನು ರದ್ದುಗೊಳಿಸಿದೆ. ಅಲ್ಲದೆ ಇದೀಗ ಸಿಎಸ್​ಕೆ ತಂಡದ ಎಲ್ಲಾ ಆಟಗಾರರು ಆತಂಕಗೊಂಡಿದ್ದಾರೆ. ಇನ್ನು ಕೊರೋನಾ ಸೋಂಕಿಗೆ ಒಳಗಾದ ಮೂವರನ್ನು 10 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇರಿಸಲಾಗುತ್ತದೆ. ಇವರು ಮತ್ತೆ ತಂಡವನ್ನು ಸೇರಿಕೊಳ್ಳಬೇಕಿದ್ದರೆ, 2 ಬಾರಿ ಕೋವಿಡ್ ಟೆಸ್ಟ್ ನೆಗೆಟಿವ್ ಬರಬೇಕು.

ಒಂದೆಡೆ ಕೋಲ್ಕತಾ ನೈಟ್ ರೈಡರ್ಸ್​ನ ಎಲ್ಲಾ ಆಟಗಾರರಿಗೂ ಪರೀಕ್ಷೆ ನಡೆಸಲಾಗಿದೆ. ಅದರ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಆಟಗಾರರು ಕೂಡ ಕೊರೋನಾ ಟೆಸ್ಟ್​​ಗೆ ಒಳಗಾಗಬೇಕಾದ ಅನಿವಾರ್ಯ ಎದುರಾಗಿದೆ. ಸ್ವಲ್ಪ ಯಾಮಾರಿದೂ ಕೋವಿಡ್ ಆವರಿಸಿಕೊಳ್ಳುತ್ತದೆ ಎಂಬುದಕ್ಕೆ ಐಪಿಎಲ್ ಸಾಕ್ಷಿಯಾಗಿದೆ. ಕೋವಿಡ್ ಸೋಂಕು ಸುಳಿಯದ ರೀತಿಯಲ್ಲಿ ಐಪಿಎಲ್ ಟೂರ್ನಿಗೆ ಬಯೋಬಬಲ್ ವ್ಯವಸ್ಥೆ ಮಾಡಲಾಗಿದೆ.

ಇಲ್ಲಿ ಆಟಗಾರರು ಮತ್ತು ಐಪಿಎಲ್ ಸಿಬ್ಬಂದಿ ಎಲ್ಲರಿಗೂ ಹೊರಗಿನ ವಾತಾವರಣ ಸೋಂಕದ ರೀತಿ ಬಯೋಬಬಲ್ ರೂಪಿಸಲಾಗಿದೆ. ಪ್ರತಿಯೊಬ್ಬ ಆಟಗಾರರಿಗೂ ನಿಯಮಿತವಾಗಿ ಕೋವಿಡ್ ಪರೀಕ್ಷೆಗಳನ್ನ ನಡೆಸಲಾಗುತ್ತಿದೆ. ಸದ್ಯ ಐಪಿಎಲ್ ಮೇಲೆ ಕೊರೋನಾ ಕರಿಛಾಮೆ ಆವರಿಸಿದ್ದು, ಅದರಂತೆ ಆರ್​​ಸಿಬಿ-ಕೆಕೆಆರ್ ಪಂದ್ಯ ಮುಂದೂಡಲಾಗಿದೆ. ಇದೀಗ ಸಿಎಸ್​ಕೆ ಸದಸ್ಯರಲ್ಲೂ ಕೊರೋನಾ ಲಕ್ಷಣಗಳು ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
Published by: zahir
First published: May 3, 2021, 3:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories