IPL

  • associate partner
HOME » NEWS » Ipl » IPL 2020 YUVRAJ SINGH THANKS RAHUL TEWATIA FOR MISSING ONE BALL ZP

IPL 2020: ಪಂಜಾಬ್ ವಿರುದ್ಧ 7 ಸಿಕ್ಸರ್ ಸಿಡಿಸಿದ ರಾಹುಲ್​ಗೆ ಯುವಿ ಧನ್ಯವಾದ ತಿಳಿಸಿದ್ದೇಕೆ?

ಯುವರಾಜ್ ಸಿಂಗ್ ತೇವಾಠಿಯಾ ಅವರಿಗೆ ಒಂದು ಬಾಲ್ ಮಿಸ್ ಮಾಡಿದಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ. ಇಲ್ಲದಿದ್ರೆ ನನ್ನ ದಾಖಲೆಯನ್ನು ನೀನು ಸರಿಗಟ್ಟುತ್ತಿದ್ದೆ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಐಪಿಎಲ್​ನಲ್ಲಿ ಹೀರೋ ಎನಿಸಲು ಒಂದೇ ಒಂದು ಪಂದ್ಯ ಸಾಕು ಎಂಬುದಕ್ಕೆ ತಾಜಾ ಉದಾಹರಣೆಯಾಗಿ ಇದೀಗ ರಾಹುಲ್ ತೇವಾಠಿಯಾ ಇದ್ದಾರೆ. ಮುಂದೆ ಯಾರು...ಕಾದು ನೋಡೋಣ.

news18-kannada
Updated:September 29, 2020, 7:19 AM IST
IPL 2020: ಪಂಜಾಬ್ ವಿರುದ್ಧ 7 ಸಿಕ್ಸರ್ ಸಿಡಿಸಿದ ರಾಹುಲ್​ಗೆ ಯುವಿ ಧನ್ಯವಾದ ತಿಳಿಸಿದ್ದೇಕೆ?
yuvraj_tewatia
  • Share this:
IPL...ಇಲ್ಲಿ ಒಂದೇ ಒಂದು ಪಂದ್ಯದಲ್ಲಿ ಹೀರೋ ಆಗಬಹುದು. ಹಾಗೆಯೇ ಒಂದೇ ಒಂದು ಪಂದ್ಯದಲ್ಲಿ ಝೀರೋ ಕೂಡ ಆಗಬಹುದು. ಇದಕ್ಕೆ ತಾಜಾ ಉದಾಹರಣೆ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಣ ಐಪಿಎಲ್​-2020ರ 9ನೇ ಪಂದ್ಯ. ಹೌದು ಕಿಂಗ್ಸ್ ಹುಡುಗರು ನೀಡಿದ 223 ರನ್​ಗಳ ಟಾರ್ಗೆಟ್​ನ್ನು ರಾಯಲ್ಸ್ ಬಾಯ್ಸ್​ ಚೇಸ್ ಮಾಡಲಿದ್ದಾರೆ ಎಂಬುದನ್ನು ಯಾರೂ ಕೂಡ ಊಹಿಸಿರಲಿಲ್ಲ. ಆದರೆ ಕೊನೆಯ ಮೂರು ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣವೇ ಬದಲಾಯಿತು. ಹೌದು, ರಾಹುಲ್ ತೇವಾಠಿಯಾರ ಕೊನೆಯ ಓವರ್​ಗಳಲ್ಲಿನ ಅಬ್ಬರ ಒಂದೇ ದಿನಕ್ಕೆ ಸೂಪರ್ ಸ್ಟಾರ್ ಸ್ಥಾನಕ್ಕೇರಿಸಿತ್ತು. ಕಾಟ್ರೆಲ್ ಎಸೆದ 18ನೇ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್​ ಸುರಿಮಳೆಗೈದ ತೇವಾಠಿಯಾ ಪಂಜಾಬ್ ಪರವಿದ್ದ ಪಂದ್ಯವನ್ನು ತನ್ನ ತೆಕ್ಕೆಗೆ ಎಳೆದುಕೊಂಡಿದ್ದರು. ಅತ್ತ ಒಂದು ಓವರ್​ನಲ್ಲಿ 30 ರನ್​ ನೀಡಿದ ಸೆಲ್ಯೂಟ್ ಸೆಬ್ರೇಷನ್ ವೇಗಿ ಶೆಲ್ಡೆನ್ ಕಾಟ್ರೆಲ್ ಪಂಜಾಬ್ ಅಭಿಮಾನಿಗಳ ಪಾಲಿಗೆ ವಿಲನ್ ಆದರು.

ಒಟ್ಟು 7 ಸಿಕ್ಸರ್ ಬಾರಿಸುವ ಮೂಲಕ ರಾಹುಲ್ ತೇವಾಠಿಯಾ ಗೇಮ್ ಚೇಂಜರ್ ಎನಿಸಿಕೊಂಡರು. ಈ ಸ್ಪೋಟಕ ಇನಿಂಗ್ಸ್ ನೋಡಿದ ಪ್ರತಿಯೊಬ್ಬರು ಇದೀಗ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರನ್ನು ಹಾಡಿ ಹೊಗಳುತ್ತಿದ್ದಾರೆ. ಆದರೆ ಮತ್ತೊಂದೆಡೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮಾಜಿ ನಾಯಕ ಯುವರಾಜ್ ಸಿಂಗ್ ಮಾತ್ರ ತೇವಾಠಿಯಾ ಒಂದು ಸ್ಪೆಷಲ್ ಥ್ಯಾಂಕ್ಸ್ ತಿಳಿಸಿದ್ದಾರೆ.ಹೌದು, ರಾಹುಲ್ ತೇವಾಠಿಯಾ ಬ್ಯಾಕ್ ಟು ಬ್ಯಾಕ್ ಸಿಕ್ಸರ್​ಗಳ ಸುರಿಮಳೆ ನೋಡಿದ್ದ ಯುವಿ, ಇನ್ನೇನು ತಮ್ಮ ದಾಖಲೆ ಬ್ರೇಕ್ ಮಾಡುತ್ತಾರೆ ಅಂದುಕೊಂಡಿದ್ದರು. ಟಿ20 ಕ್ರಿಕೆಟ್​ನಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸ್ ಸಿಡಿಸಿರುವ ಈ ದಾಖಲೆ ನಿನ್ನೆ ಅಳಿಸಿ ಹಾಕಲಿದ್ದಾರೆ ಎಂದೇ ಭಾವಿಸಿದ್ದರು. ಆದರೆ ಕಾಟ್ರೆಲ್ ಅವರ ಒಂದು ಎಸೆತವನ್ನು ಮಿಸ್ ಮಾಡಿಕೊಂಡ ಕಾರಣ ಸಿಕ್ಸರ್ ಸಿಂಗ್ ಹೆಸರಿನಲ್ಲಿರುವ ದಾಖಲೆಯನ್ನು ಸರಿಗಟ್ಟಲಾಗಲಿಲ್ಲ.

ಹೀಗಾಗಿಯೇ ಯುವರಾಜ್ ಸಿಂಗ್ ತೇವಾಠಿಯಾ ಅವರಿಗೆ ಒಂದು ಬಾಲ್ ಮಿಸ್ ಮಾಡಿದಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ. ಇಲ್ಲದಿದ್ರೆ ನನ್ನ ದಾಖಲೆಯನ್ನು ನೀನು ಸರಿಗಟ್ಟುತ್ತಿದ್ದೆ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಐಪಿಎಲ್​ನಲ್ಲಿ ಹೀರೋ ಎನಿಸಲು ಒಂದೇ ಒಂದು ಪಂದ್ಯ ಸಾಕು ಎಂಬುದಕ್ಕೆ ತಾಜಾ ಉದಾಹರಣೆಯಾಗಿ ಇದೀಗ ರಾಹುಲ್ ತೇವಾಠಿಯಾ ಇದ್ದಾರೆ. ಮುಂದೆ ಯಾರು...ಕಾದು ನೋಡೋಣ.:

SCHEDULE TIME TABLE: ORANGE CAP:

PURPLE CAP:

RESULT DATA:

MOST SIXES:

KL Rahul: ಕನ್ನಡಿಗನ ಕಮಾಲ್: ಸಿಡಿಲಬ್ಬರದ ಒಂದು ಸೆಂಚುರಿಗೆ 8 ದಾಖಲೆಗಳು ಉಡೀಸ್..!
Published by: zahir
First published: September 28, 2020, 9:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories