news18-kannada Updated:October 28, 2020, 4:15 PM IST
RCB
13ನೇ ಆವೃತ್ತಿಯ ಐಪಿಎಲ್ನಲ್ಲಿಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನದಲ್ಲಿರುವ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಹಾಗೂ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಅಬುಧಾಬಿಯ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ಸೆಣೆಸಾಟ ನಡೆಸಲಿವೆ. ಮುಂದಿನ ಹಂತಕ್ಕೇರಲು ಉಭಯ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದೆ. ಹೀಗಾಗಿ ಸಾಕಷ್ಟು ರೋಚಕತೆ ಸೃಷ್ಟಿಸಿದೆ.
ಮುಂಬೈ ಹಾಗೂ ಆರ್ಸಿಬಿ ತಮ್ಮ ಹಿಂದಿನ ಪಂದ್ಯಗಳಲ್ಲಿ ತಲಾ 8 ವಿಕೆಟ್ಗಳ ಹೀನಾಯ ಸೋಲು ಅನುಭಿವಿತ್ತು. ಹೀಗಾಗಿ ತಮ್ಮ ಪಾಲಿನ ಉಳಿದ 3 ಲೀಗ್ ಪಂದ್ಯಗಳನ್ನು ಗೆದ್ದು, ಗೆಲುವಿನ ಅಲೆಯಲ್ಲಿ ಪ್ಲೇ ಆಫ್ಸ್ಗೆ ಕಾಲಿಡುವ ಲೆಕ್ಕಾಚಾರ ಹೊಂದಿವೆ. ಉಭಯ ತಂಡಗಳಿಗೆ ಇನ್ನೊಂದು ಗೆಲುವು ಸಿಕ್ಕರೂ ನಾಕ್ಔಟ್ ಹಂತದ ಟಿಕೆಟ್ ಸಿಗಲಿದೆ.
IPL 2020, MI vs RCB: ರೋಹಿತ್-ಕೊಹ್ಲಿ: ಟಾಪ್ ಎರಡು ತಂಡಗಳ ನಡುವೆ ಹೈವೋಲ್ಟೇಜ್ ಕದನ
ಆರ್ಸಿಬಿ ಈಗಾಗಲೇ ಆಡಿರುವ 11 ಪಂದ್ಯಗಳಲ್ಲಿ ಏಳರಲ್ಲಿ ಜಯ ಸಾಧಿಸಿ 4ರಲ್ಲಿ ಸೋಲು ಕಂಡಿದೆ. ಒಟ್ಟು 14 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ. ಮುಂಬೈ ಸ್ಥಿತಿಕೂಡ ಇದೇರೀತಿ ಇದ್ದು ರನ್ರೇಟ್ ಆಧಾರದ ಮೇಲೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಹೀಗಾಗಿ ಪ್ಲೇ-ಆಫ್ ಖಾತ್ರಿ ದೃಷ್ಟಿಯಿಂದ ಎರಡು ತಂಡಗಳಿಗೂ ಈ ಪಂದ್ಯ ಮಹತ್ವದಾಗಿದೆ.
ಅದರಲ್ಲೂ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ವಿರಾಟ್ ಕೊಹ್ಲಿ ಪಡೆ ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪ್ಲೇ ಆಫ್ಸ್ಗೆ ಅಧಿಕೃತವಾಗಿ ಅರ್ಹತೆ ಪಡೆಯಲು ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲುವ ಲೆಕ್ಕಚಾರ ಹೊಂದಿಗೆ.
ಎಲ್ಲಾದರು ಇಂದಿನ ಪಂದ್ಯದಲ್ಲಿ ಆರ್ಸಿಬಿ ಗೆದ್ದರೆ 16 ಅಂಕದೊಂದಿಗೆ ಪ್ಲೇ ಆಫ್ ಹೊಸಿಲು ತಾಕಲಿದೆ. ಇಂದಿನ ಪಂದ್ಯದ ಬಳಿಕ ಆರ್ಸಿಬಿಗೆ ಎರಡು ಪಂದ್ಯ ಬಾಕಿಯಿದೆ. ಈ ಪೈಕಿ ಒಂದರಲ್ಲಿ ಗೆದ್ದರೆ ಆರ್ಸಿಬಿ ಅಧಿಕೃತವಾಗಿ ಪ್ಲೇ ಆಫ್ ಟಿಕೆಟ್ ಪಡೆಯಲಿದೆ. ಹೀಗಾಗಿ ಮುಂದಿನ ಎರಡು ಪಂದ್ಯ ಆರ್ಸಿಬಿ ಪಾಲಿಗೆ ಮಹತ್ವದ್ದಾಗಿದೆ.
KL Rahul: ಟೀಮ್ ಇಂಡಿಯಾಗೆ ಕೆಎಲ್ ರಾಹುಲ್ ಆಯ್ಕೆ ಬಗ್ಗೆ ಮಾಜಿ ಕ್ರಿಕೆಟಿಗ ಅಪಸ್ವರಅಂತಿಮ ಹಂತದಲ್ಲಿ ಸೋಲು- ಗೆಲುವಿನ ಮೇಲೆ ಕಾಲಿಡುತ್ತಾ ಸಾಗುತ್ತಿರುವ ಆರ್ಸಿಬಿಗೆ ಇದು ಪ್ರಮುಖ ಪಂದ್ಯ. ಕಳೆದ ಸಿಎಸ್ಕೆ ವಿರುದ್ಧ ಕೊಹ್ಲಿ ಹುಡುಗರ ಪ್ರದರ್ಶನ ತೀರ ಕಳಪೆಯಿಂದ ಕೂಡಿತ್ತು. ತಂಡ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಮತ್ತೆ ಎಡವುತ್ತಿದೆ. ಆ್ಯರೋನ್ ಫಿಂಚ್ ಬ್ಯಾಟ್ ಸಿಡಿಯುತ್ತಿಲ್ಲ.
ಇನ್ನೂ ಎಬಿ ಡಿವಿಲಿಯರ್ಸ್ ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಿದೆ. ಕೊಹ್ಲಿ, ಎಬಿಡಿ ನಿರ್ಗಮನದ ಬಳಿಕ ಪಂದ್ಯವನ್ನು ಫಿನಿಶ್ ಮಾಡುವ ಹೊಣೆಯನ್ನು ಯಾರೂ ಹೊರುತ್ತಿಲ್ಲ. ಮೊಯೀನ್ ಅಲಿ ಕೂಡ ವೈಫಲ್ಯ ಅನುಭವಿಸುತ್ತಿದ್ದಾರೆ. ಹೀಗಾಗಿ ಇಂದಿನ ಪಂದ್ಯಕ್ಕೆ ಆರ್ಸಿಬಿ ತಂಡದಲ್ಲಿ ಮಹತ್ವದ ಬದಲಾವಣೆ ನಿರೀಕ್ಷಿಸಲಾಗಿದೆ.
Published by:
Vinay Bhat
First published:
October 28, 2020, 4:15 PM IST