• Home
 • »
 • News
 • »
 • ipl
 • »
 • Virender Sehwag: ಕನ್ನಡಿಗರಿಬ್ಬರು ಆರಂಭಿಕರು: ಇದು ಸೆಹ್ವಾಗ್ ಅವರ IPL ಟೀಮ್..!

Virender Sehwag: ಕನ್ನಡಿಗರಿಬ್ಬರು ಆರಂಭಿಕರು: ಇದು ಸೆಹ್ವಾಗ್ ಅವರ IPL ಟೀಮ್..!

Virender Sehwag

Virender Sehwag

IPL 2020: ಬೌಲಿಂಗ್‌ ವಿಭಾಗದಲ್ಲಿ ವೇಗಿಗಳಾಗಿ ಕಗಿಸೊ ರಬಾಡ, ಜಸ್​ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್‌ ಶಮಿ ಅವರನ್ನು ಆಯ್ಕೆ ಮಾಡಲಾಗಿದೆ. ಹಾಗೆಯೇ ಸ್ಪಿನ್ನರ್​ಗಳಾಗಿ ಯುಜುವೇಂದ್ರ ಚಹಲ್‌ ಹಾಗೂ ರಶೀದ್‌ ಖಾನ್‌ ಅವರನ್ನು ಆರಿಸಿಕೊಳ್ಳಲಾಗಿದೆ.

 • Share this:

  ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಸೀಸನ್ ಮುಕ್ತಾಯವಾಗಿದೆ. ಹಲವರ ಲೆಕ್ಕಚಾರದಂತೆ ಈ ಬಾರಿ ಕೂಡ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅತ್ತ 14 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ 670 ರನ್ ಕಲೆಹಾಕಿದ ಕೆಎಲ್ ರಾಹುಲ್ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಇತ್ತ 30 ವಿಕೆಟ್ ಪಡೆದ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ ಕಗಿಸೋ ರಬಾಡ ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ. ವಿದೇಶಿ ಪಿಚ್​ನಲ್ಲಿ ನಡೆದ ಈ ಬಾರಿಯ ಐಪಿಎಲ್​ನಲ್ಲಿ ಹಲವು ಆಟಗಾರರು ಮಿಂಚಿದ್ದರು. ಕೆಲವು ಆಟಗಾರರು ಅಬ್ಬರಿಸಿದ್ದರು. ಇವರನ್ನೆಲ್ಲಾ ಒಳಗೊಂಡ ತಮ್ಮ ನೆಚ್ಚಿನ ಐಪಿಎಲ್ 2020 ತಂಡವನ್ನು ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಪ್ರಕಟಿಸಿದ್ದಾರೆ.


  ಈ ತಂಡದಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಪಡೆದಿರುವುದು ವಿಶೇಷ. ಸೆಹ್ವಾಗ್ ಅವರ ನೆಚ್ಚಿನ ಐಪಿಎಲ್ ತಂಡದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್ ರಾಹುಲ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂದ ದೇವದತ್ ಪಡಿಕ್ಕಲ್ ಅವರನ್ನು ಆಯ್ಕೆ ಮಾಡಲಾಗಿದೆ. ಅದರಲ್ಲೂ ಇವರಿಬ್ಬರನ್ನು ಆರಂಭಿಕರಾಗಿ ಸೆಹ್ವಾಗ್ ಆರಿಸಿದ್ದಾರೆ.


  ಇನ್ನು ಮೂರನೇ ಕ್ರಮಾಂಕದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್​ಮನ್ ಸೂರ್ಯಕುಮಾರ್‌ ಯಾದವ್‌ ಅವರನ್ನು ಆಯ್ಕೆ ಮಾಡಲಾಗಿದ್ದು, ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್‌ ಕೊಹ್ಲಿ ಇದ್ದಾರೆ. ಇನ್ನು ಸನ್​ರೈಸರ್ಸ್ ಹೈದರಬಾದ್ ತಂಡದ ನಾಯಕ, ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರನ್ನೂ ಸಹ ವೀರು ಆಯ್ಕೆ ಮಾಡಿಕೊಂಡಿದ್ದು, ಅವರಿಗೆ 5ನೇ ಕ್ರಮಾಂಕವನ್ನು ನೀಡಿದ್ದಾರೆ.


  ಕಳೆದ ಮೂರೂ ಆವೃತ್ತಿಗಳಲ್ಲಿ ಸೂರ್ಯಕುಮಾರ್‌ ಯಾದವ್‌ ಸ್ಥಿರ ಪ್ರದರ್ಶನವನ್ನು ತೋರುತ್ತಿದ್ದು, ಇದೇ ಕಾರಣದಿಂದ ಅವರಿಗೆ ಮೂರನೇ ಕ್ರಮಾಂಕ ನೀಡಲಾಗಿದೆ ಎಂದಿದ್ದಾರೆ ಸೆಹ್ವಾಗ್. ಹಾಗೆಯೇ ನಾಯಕನಾಗಿ ವಿರಾಟ್ ಕೊಹ್ಲಿಯನ್ನು ಆರಿಸಿದ್ದು, ಅವರ ಆಕ್ರಮಣಕಾರಿ ಬ್ಯಾಟ್ಸ್​ಮನ್ ಯಾವಾಗ ಬೇಕಿದ್ದರೂ ರನ್​ಗಳಿಸುತ್ತಾರೆ ಎಂದು ವೀರು ತಿಳಿಸಿದರು.


  ವಾರ್ನರ್ ಅತ್ಯುತ್ತಮ ಲಯದಲ್ಲಿರುವ ಕಾರಣ ಅವರನ್ನು 5ನೇ ಕ್ರಮಾಂಕದಲ್ಲಿ ಆಯ್ಕೆ ಮಾಡಲಾಗಿದ್ದು, ಇದರ ಹೊರತಾಗಿ ಅವರಿಗೆ ನಾಯಕತ್ವ ನೀಡುವ ಬಗ್ಗೆ ಕೂಡ ಚಿಂತಿಸಿದ್ದೇನೆ. ಆದರೆ ಕೊನೆಗೆ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಸೆಹ್ವಾಗ್ ತಿಳಿಸಿದರು. 6ನೇ ಕ್ರಮಾಂಕಕ್ಕೆ ಮುಂಬೈ ಇಂಡಿಯನ್ಸ್ ಆಲ್​ರೌಂಡರ್ ಕೀರನ್ ಪೊಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ನಡುವೆ ಸ್ಫರ್ಧೆಯಿತ್ತು. ಆದರೆ ಒಟ್ಟಾರೆ ಪ್ರದರ್ಶನವನ್ನು ಗಮನದಲ್ಲಿರಿಸಿ ಅಂತಿಮವಾಗಿ ಎಬಿ ಡಿವಿಲಿಯರ್ಸ್​ ಅವರನ್ನು ಆಯ್ಕೆ ಮಾಡಿದ್ದೇನೆ ಎಂದರು.


  ಇನ್ನು ಬೌಲಿಂಗ್‌ ವಿಭಾಗದಲ್ಲಿ ವೇಗಿಗಳಾಗಿ ಕಗಿಸೊ ರಬಾಡ, ಜಸ್​ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್‌ ಶಮಿ ಅವರನ್ನು ಆಯ್ಕೆ ಮಾಡಲಾಗಿದೆ. ಹಾಗೆಯೇ ಸ್ಪಿನ್ನರ್​ಗಳಾಗಿ ಯುಜುವೇಂದ್ರ ಚಹಲ್‌ ಹಾಗೂ ರಶೀದ್‌ ಖಾನ್‌ ಅವರನ್ನು ಆರಿಸಿಕೊಳ್ಳಲಾಗಿದೆ. ಇದರ ಹೊರತಾಗಿ 12ನೇ ಆಟಗಾರನಾಗಿ ಮುಂಬೈ ಇಂಡಿಯನ್ಸ್ ತಂಡದ ಪಾಕೆಟ್ ಡೈನಾಮೊ ಇಶಾನ್‌ ಕಿಶಾನ್​ ಅವರಿಗೆ ಸ್ಥಾನ ನೀಡಲಾಗಿದೆ.


  ಸೆಹ್ವಾಗ್ ಆರಿಸಿದ ಐಪಿಎಲ್​ 2020 ತಂಡ ಹೀಗಿದೆ:
  ವಿರಾಟ್ ಕೊಹ್ಲಿ (ನಾಯಕ), ದೇವದತ್‌ ಪಡಿಕ್ಕಲ್‌, ಕೆ.ಎಲ್‌ ರಾಹುಲ್‌ (ವಿಕೆಟ್ ಕೀಪರ್), ಸೂರ್ಯಕುಮಾರ್‌ ಯಾದವ್‌, ಡೇವಿಡ್‌ ವಾರ್ನರ್, ಎಬಿ ಡಿವಿಲಿಯರ್ಸ್, ರಶೀದ್‌ ಖಾನ್‌, ಕಗಿಸೊ ರಬಾಡ, ಮೊಹಮ್ಮದ್ ಶಮಿ, ಯುಜುವೇಂದ್ರ ಚಹಲ್‌, ಜಸ್​ಪ್ರೀತ್ ಬುಮ್ರಾ


  POINTS TABLE:  SCHEDULE TIME TABLE:  ORANGE CAP:  PURPLE CAP:  RESULT DATA:  MOST SIXES:

  ಇದನ್ನೂ ಓದಿ: Yuvraj Singh: ಈತ ಭವಿಷ್ಯದ ವಿಶೇಷ ಆಟಗಾರ: ಯುವರಾಜ್ ಸಿಂಗ್

  Published by:zahir
  First published: