• Home
 • »
 • News
 • »
 • ipl
 • »
 • CSK vs RCB: ಇಂದಿನ ಪಂದ್ಯದಲ್ಲಿ ಧೋನಿ, ರೋಹಿತ್​ ದಾಖಲೆಯನ್ನು ಮುರಿಯುತ್ತಾರಾ ಕಿಂಗ್​ ಕೊಹ್ಲಿ?

CSK vs RCB: ಇಂದಿನ ಪಂದ್ಯದಲ್ಲಿ ಧೋನಿ, ರೋಹಿತ್​ ದಾಖಲೆಯನ್ನು ಮುರಿಯುತ್ತಾರಾ ಕಿಂಗ್​ ಕೊಹ್ಲಿ?

ಧೋನಿ-ಕೊಹ್ಲಿ

ಧೋನಿ-ಕೊಹ್ಲಿ

IPL 2020: ಮತ್ತೊಂದೆಡೆ ವಿರಾಟ್​ ಕೊಹ್ಲಿ ದಾಖಲೆಯೊಂದರ ಸಹಿದಲ್ಲಿದ್ದಾರೆ. ಧೋನಿ, ಮತ್ತು ರೋಹಿತ್​ ಶರ್ಮಾ ದಾಖಲೆಯನ್ನು ಉಡಿಸ್​​ ಮಾಡುವ ಲಕ್ಷಣಗಳು ಕಾಣುತ್ತಿದೆ.

 • Share this:

  ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಇಂದು ಚೆನ್ನೈ ಸೂಪರ್​ ಕಿಂಗ್ಸ್​ ತಂಡದೊಂಡಿದೆ ಸೆಣೆಸಾಡಲಿದೆ. ಇತ್ತ ಕಿಂಗ್​ ಕೊಹ್ಲಿ ನಾಯಕತ್ವದ ಆರ್​ಸಿಬಿ, ಅತ್ತ ಮಹೇಂದ್ರ ಸಿಂಗ್​ ಧೋನಿ ನಾಯಕತ್ವದ ಸಿಎಸ್​ಕೆ ತಂಡಗಳ ನಡುವೆ ಜಿದ್ದಾ ಜಿದ್ದಿ ನಡೆಯಲಿದೆ. ಅರಬ್​ ಮೈದಾನದಲ್ಲಿ ಸರಿಯಾಗಿ 7:30 ಇಂದಿನ ರೋಚಕ ಪಂದ್ಯ ನಡೆಯಲಿದೆ. ಕ್ರಿಕೆಟ್​ ಪ್ರಿಯರು ಬಹಳ ನಿರೀಕ್ಷೆಯಿಂದ ಕಾತುರರಾಗಿದ್ದಾರೆ. ಯಾವ ತಂಡ ಜಯಿಸಲಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.


  ಮತ್ತೊಂದೆಡೆ ವಿರಾಟ್​ ಕೊಹ್ಲಿ ದಾಖಲೆಯೊಂದರ ಸಹಿದಲ್ಲಿದ್ದಾರೆ. ಧೋನಿ, ಮತ್ತು ರೋಹಿತ್​ ಶರ್ಮಾ ದಾಖಲೆಯನ್ನು ಉಡಿಸ್​​ ಮಾಡುವ ಲಕ್ಷಣಗಳು ಕಾಣುತ್ತಿದೆ. ಹೌದು. ಐಪಿಎಲ್​ನಲ್ಲಿ ಮಾಹೇಂದ್ರ ಸಿಂಗ್​ ಧೋನಿ ಈವರೆಗೆ 213 ಸಿಕ್ಸ್​ ಬಾರಿಸಿದ್ದು, 3ನೇ ಅತಿ ಹೆಚ್ಚು ಸಿಕ್ಸ್​ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರೋಹಿತ್​ ಶರ್ಮಾ 208 ಸಿಕ್ಸ್​ ಬಾರಿಸಿ 4ನೇ ಸ್ಥಾನದಲ್ಲಿದ್ದಾರೆ. ಹಾಗಿದ್ದರೆ ಕೊಹ್ಲಿ ಬಾರಿಸಿರುವ ಸಿಕ್ಸ್​ ಎಷ್ಟು ಗೊತ್ತಾ?
  ಈವರೆಗೆ ಐಪಿಎಲ್​ ನೆಲದಲ್ಲಿ ಕೊಹ್ಲಿ 193 ಸಿಕ್ಸ್​ ಬಾರಿಸಿದ್ದಾರೆ. ಹಾಗಾಗಿ ಇಂದಿನ ಜಿದ್ದಾಜಿದ್ದಿ ಪಂದ್ಯದಲ್ಲಿ ಧೋನಿ ಬಾರಿಸಿರುವ ದಾಖಲೆಯ ಸಿಕ್ಸ್​ ಅನ್ನು ಮುರಿಯುತ್ತಾರಾ  ಎಂದು ಕಾದು ನೋಡಬೇಕಿದೆ.


  ಇನ್ನು ಕ್ರಿಸ್​ ಗೈಲ್​ ಅತಿ ಹೆಚ್ಚು ಸಿಕ್ಸ್​ (326) ಬಾರಿಸಿರುವ ಪಟ್ಟಿಯಲ್ಲಿ ಮೊದಲಿಗರಾದರೆ, ಎಬಿ ಡಿ ವಿಲಿಯರ್ಸ್​(219) ಎರಡನೇ ಸ್ಥಾನದಲ್ಲಿದ್ದಾರೆ. ಇಂದಿನ ಪಂದ್ಯದಲ್ಲಿ ಧೋನಿ ಕೂಡ ಎಬಿ ಡಿ ದಾಖಲೆಯನ್ನು ಮುರಿದರೆ ಅಚ್ಚರಿಯೇನಿಲ್ಲ!.

  Published by:Harshith AS
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು