IPL 2020: (Video) ವಿಕೆಟ್ ಕಟ್ ಕಟ್: ಅಭ್ಯಾಸದ ವೇಳೆ ಅಬ್ಬರಿಸಿದ ಈ ಮಾರಕ ವೇಗಿ ಯಾರು ಗೊತ್ತೇ?

ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬೌಲರ್ ಒಬ್ಬರು ಬೌಲಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಇದರಲ್ಲಿ ವಿಶೇಷತೆಯೊಂದಿದೆ. ಅದೇನೆಂದರೆ ಬೌಲಿಂಗ್ ಅಭ್ಯಾಸ ಮಾಡುತ್ತಿರುವ ವೇಳೆ ಇವರು ಎಸೆದ ಚೆಂಡಿನ ವೇಗಕ್ಕೆ ವಿಕೆಟ್ ತುಂಡು ತುಂಡಾಗಿ ಹೋಗಿದೆ.

news18-kannada
Updated:September 13, 2020, 9:59 AM IST
IPL 2020: (Video) ವಿಕೆಟ್ ಕಟ್ ಕಟ್: ಅಭ್ಯಾಸದ ವೇಳೆ ಅಬ್ಬರಿಸಿದ ಈ ಮಾರಕ ವೇಗಿ ಯಾರು ಗೊತ್ತೇ?
IPL 2020
  • Share this:
ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟಿ-20 ಟೂರ್ನಮೆಂಟ್​ಗೆ ಇನ್ನೇನು ಕೇವಲ 6 ದಿನಗಳಷ್ಟೆ ಬಾಕಿಯಿದೆ. ಎಲ್ಲ ಫ್ರಾಂಚೈಸಿ ತಂಡದ ಆಟಗಾರರು ಮೈದಾನದಲ್ಲಿ ಭರ್ಜರಿ ಆಗಿ ಅಭ್ಯಾಸ ನಡೆಸುತ್ತಾ ಬೆವರು ಹರಿಸುತ್ತಿದ್ದಾರೆ. ಅದರಲ್ಲೂ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಭಾರೀ ಸುದ್ದಿ ಮಾಡುತ್ತಿದೆ. ಇತ್ತೀಚೆಗಷ್ಟೆ ಮಾರಕ ವೇಗಿ ಜಸ್​ಪ್ರೀತ್ ಬುಮ್ರಾ ನೆಟ್​ನಲ್ಲಿ ಕೆಲವು ಬೌಲರ್​ಗಳ ಅನುಕರಣೆ ಮಾಡು ಸುದ್ದಿ ಆಗಿದ್ದರು. ಅಲ್ಲದೆ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಅಭ್ಯಾಸದ ವೇಳೆ ಚೆಂಡನ್ನು ಸಿಕ್ಸರ್​ಗೆ ಅಟ್ಟಿ ಆ ಚೆಂಡು ಚಲಿಸುತ್ತಿದ್ದ ಬಸ್​ ಮೇಲೆ ಬಿದ್ದ ವಿಚಾರ ಭಾರೀ ವೈರಲ್ ಆಗಿತ್ತು.

ಸದ್ಯ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬೌಲರ್ ಒಬ್ಬರು ಬೌಲಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಇದರಲ್ಲಿ ವಿಶೇಷತೆಯೊಂದಿದೆ. ಅದೇನೆಂದರೆ ಬೌಲಿಂಗ್ ಅಭ್ಯಾಸ ಮಾಡುತ್ತಿರುವ ವೇಳೆ ಇವರು ಎಸೆದ ಚೆಂಡಿನ ವೇಗಕ್ಕೆ ವಿಕೆಟ್ ತುಂಡು ತುಂಡಾಗಿ ಹೋಗಿದೆ.

IPL 2020: ಐಪಿಎಲ್​ನಲ್ಲಿ ಮಿಂಚು ಹರಿಸಲು ಬಂದ ಅಮೆರಿಕ ವೇಗಿ: ಯಾವ ತಂಡಕ್ಕೆ?; ಇಲ್ಲಿದೆ ಮಾಹಿತಿ
ಕಳೆದ ಐಪಿಎಲ್​ ಪಂದ್ಯಗಳಲ್ಲಿ ಅಷ್ಟೊಂದು ಮಿಂಚದ ನ್ಯೂಜಿಲೆಂಟ್ ಸ್ಟಾರ್ ವೇಗಿ ಟ್ರೆಂಟ್ ಬೋಲ್ಟ್ ಈ ಬಾರಿ ಮುಂಬೈ ಪರ ಅಬ್ಬರಿಸಲು ತಯಾರಾಗಿದ್ದಾರೆ. ಅದಕ್ಕಾಗಿ ನೆಟ್​ನಲ್ಲಿ ಭರ್ಜರಿ ಅಭ್ಯಾಸ ಕೂಡ ನಡೆಸುತ್ತಿದ್ದಾರೆ. ಅದು ಎಷ್ಟರ ಮಟ್ಟಿಗೆ ಎಂದರೆ ಬೌಲ್ಟ್ ಬೌಲಿಂಗ್​ ಅಭ್ಯಾಸದ ವೇಳೆ ಎಸೆತದ ಚೆಂಡು ವಿಕೆಟ್​ಗೆ ತಾಗಿದ್ದಲ್ಲದೆ ವಿಕೆಟ್ ತುಂಡು ತುಂಡಾಗಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

IPL 2020: ಸುರೇಶ್ ರೈನಾ ಜಾಗಕ್ಕೆ ವಿಶ್ವದ ನಂಬರ್ 1 ಆಟಗಾರ: CSK ಆಯ್ಕೆ ಮಾಡಿದ್ದು ಯಾರನ್ನ ಗೊತ್ತಾ?

ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಕಳೆದ ಸಲಕ್ಕಿಂತ ಮತ್ತಷ್ಟು ಬಲಿಷ್ಠವಾಗಿದೆ. ರೋಹಿತ್ ಶರ್ಮಾ ಜೊತೆ ಸ್ಫೋಟಕ ಆಟಗಾರರ ಸಾಲೇ ಇದೆ. ಕ್ವಿಂಟನ್ ಡಿಕಾಕ್, ಕ್ರಿಸ್‌ ಲಿನ್‌, ಯುವ ಆಟಗಾರ ಇಶಾನ್ ಕಿಶನ್‌ ಹಾಗೂ ಸ್ಟಾರ್‌ ಆಲ್‌ರೌಂಡರ್‌ಗಳಾದ ಕಿರೊನ್‌ ಪೊಲಾರ್ಡ್ ಮತ್ತು ಹಾರ್ದಿಕ್‌ ಪಾಂಡ್ಯ ಎಲ್ಲರೂ ಸಿಕ್ಸರ್‌ ಕಿಂಗ್‌ಗಳೇ. ಜೊತೆಗೆ ಬೌಲಿಂಗ್‌ನಲ್ಲಿ ಟ್ರೆಂಟ್ ಬೌಲ್ಟ್‌ ಮತ್ತು ಜಸ್‌ಪ್ರೀತ್‌ ಬುಮ್ರಾ ಅವರಂತಹ ಅಪಾಯದ ದಾಂಡಿಗರಿದ್ದಾರೆ.

ಸೆಪ್ಟೆಂಬರ್ 19 ರಂದು ಐಪಿಎಲ್​ 2020 ಗೆ ಚಾಲನೆ ಸಿಗಲಿದ್ದು ಮುಂಬೈ ಇಂಡಿಯನ್ಸ್ ಜೊತೆ ಮತ್ತೊಂದು ಬಲಿಷ್ಠ ತಂಡ ಚೆನ್ನೈ ಸೂಪರ್ ಕಿಂಗ್ಸ್​ ಮುಖಾಮುಖಿ ಆಗಲಿದೆ.
Published by: Vinay Bhat
First published: September 13, 2020, 9:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading