news18-kannada Updated:October 4, 2020, 11:42 AM IST
IPL 2020
ಈ ಬಾರಿಯ ಐಪಿಎಲ್ ಆವೃತ್ತಿಯ 13 ಹಾಗೂ 14ನೇ ಪಂದ್ಯಗಳು ಇಂದು ನಡೆಯಲಿವೆ. ಮಧ್ಯಾಹ್ನ 3:30ಕ್ಕೆ ಆರಂಭವಾಗುವ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸನ್ ರೈಸರ್ಸ್ ಹೈದರಾಬಾದ್ ಅನ್ನು ಎದುರಿಸಲಿದೆ. ಬ್ಯಾಟಿಂಗ್ನಲ್ಲಿ ಮುಂಬೈ ಹೆಚ್ಚು ಬಲ ಹೊಂದಿದ್ದರೆ, ಸನ್ ರೈಸರ್ಸ್ ಹೈದರಾಬಾದ್ ಬೌಲಿಂಗ್ನಲ್ಲಿ ಪ್ರಾಬಲ್ಯ ಸಾಧಿಸಿದೆ. ಹೀಗಾಗಿ ಶಾರ್ಜಾದಲ್ಲಿ ನಡೆಯುವ ಇಂದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಆರಂಭಿಕರಾದ ಕ್ವಿಂಟನ್ ಡಿಕಾಕ್ ವಿಫಲಾಗುತ್ತಿದ್ದರೂ ತಂಡದಲ್ಲಿ ಬದಲಾವಣೆ ನಿರೀಕ್ಷೆ ಕಡಿಮೆ. ಹೀಗಾಗಿ ಹಿಂದಿನ ಪಂದ್ಯದ ತಂಡವನ್ನೇ ನಿರೀಕ್ಷೆ ಮಾಡಲಾಗಿದೆ. ಗಾಯದ ಸಮಸ್ಯೆಯಿಂದ ಭುವನೇಶ್ವರ್ ಕುಮಾರ್ ಸನ್ ರೈಸರ್ಸ್ಗೆ ಅಲಭ್ಯರಾಗಿದ್ದಾರೆ. ಹೀಗಾಗಿ, ಟಿ. ನಟರಾಜನ್, ಖಲೀಲ್ ಅಹಮದ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.
ಪಂಜಾಬ್-ಸಿಎಸ್ಕೆ ಮುಖಾಮುಖಿ
ಸೋಲು ಹಾಗೂ ಗೆಲುವಿನಲ್ಲಿ ಸಮವಿರುವ ಪಂಜಾಬ್ ಹಾಗೂ ಚೆನ್ನೈ ಇಂದಿನ ಎರಡನೇ ಪಂದ್ಯದಲ್ಲಿ ಮುಖಾಮುಖಿ ಆಗುತ್ತಿವೆ. ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ರಾತ್ರಿ 7:30ಕ್ಕೆ ಆರಂಭವಾಗುವ ಈ ಪಂದ್ಯ ಎರಡೂ ತಂಡಕ್ಕೆ ತುಂಬಾನೇ ಪ್ರಮುಖವಾಗಿದೆ. ಎರಡೂ ಟೀಂಗಳು ಒಂದರಲ್ಲಿ ಗೆದ್ದು ಮೂರರಲ್ಲಿ ಸೋತಿವೆ.
ಕೆ. ಗೌತಮ್ ಬದಲಿಗೆ ಎಂ . ಅಶ್ವಿನ್ ಪಂಜಾಬ್ ತಂಡಕ್ಕೆ ವಾಪಾಸಾಗುವ ಸಾಧ್ಯತೆ ಇದೆ. ಸತತವಾಗಿ ವಿಫಲಾಗಿರುವ ಮ್ಯಾಕ್ಸ್ವೆಲ್ ಬದಲಿಗೆ ಕ್ರಿಸ್ ಗೇಲ್ ಹಾಗೂ ಜೇಮ್ಸ್ ನಿಶಾಮ್ ಬದಲಿಗೆ ಮುಜೀಬ್ ಉರ್ ರೆಹ್ಮಾನ್ ತಂಡ ಸೇರಿಕೊಳ್ಳಬಹುದು. ಇನ್ನು, ಚೆನ್ನೈನಲ್ಲಿ ಶೇನ್ ವ್ಯಾಟ್ಸನ್ ಸತತ ವಿಫಲತೆ ಅನುಭವಿಸಿದ್ದರೂ ಬದಲಾವಣೆ ಸಾಧ್ಯತೆ ಕಡಿಮೆ. ರೈನಾ-ಹರ್ಭಜನ್ ಗೈರಿನಿಂದಾಗಿ ತಂಡಕ್ಕೆ ಭಾರೀ ಹಿನ್ನಡೆ ಆಗುತ್ತಿದೆ.
Published by:
Rajesh Duggumane
First published:
October 4, 2020, 11:42 AM IST