Gautam Gambhir: RCB ನಾಯಕತ್ವದಿಂದ ವಿರಾಟ್‌ ಕೊಹ್ಲಿಯನ್ನು ಕಿತ್ತು ಹಾಕಿ..!

ಸತತ ಸೋಲುಗಳ ಮೂಲಕ ಐಪಿಎಲ್​ನ ಕಳಪೆ ತಂಡ ಎನಿಸಿಕೊಂಡಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 2011 ರಿಂದ ಮುನ್ನಡೆಸಿದ್ದ ಗೌತಮ್ ಗಂಭೀರ್, ಕೆಕೆಆರ್ ತಂಡವನ್ನು 2012 ಮತ್ತು 2014 ರಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.

virat kohli

virat kohli

  • Share this:
    ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊರಬಿದ್ದಿದೆ. ಇದರ ಬೆನ್ನಲ್ಲೇ ಕಳೆದ 8 ವರ್ಷಗಳಿಂದ ತಂಡವನ್ನು ಮುನ್ನಡೆಸುತ್ತಿರುವ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಟೀಕೆಗಳು ಕೇಳಿ ಬರುತ್ತಿವೆ. ಅದರಲ್ಲೂ ಆರ್​ಸಿಬಿ ನಾಯಕನನ್ನು ಕಿತ್ತು ಹಾಕಿ ಎಂದು ಮಾಜಿ ಟೀಮ್ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಒತ್ತಾಯಿಸಿದ್ದಾರೆ.

    ಶುಕ್ರವಾರ ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಆರ್​ಸಿಬಿ ಸೋಲಿನ ಬಳಿಕ ಪ್ರತಿಕ್ರಿಯಿಸಿದ ಗೌತಮ್‌ ಗಂಭೀರ್‌, ಕೊಹ್ಲಿ ಕಪ್ತಾನಗಿರಿ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಐಪಿಎಲ್​ ಇತಿಹಾಸದಲ್ಲಿ ಯಶಸ್ವಿ ನಾಯಕರೆನಿಸಿದ ಧೋನಿ ಹಾಗೂ ರೋಹಿತ್ ಶರ್ಮಾ ಸಾಲಿನಲ್ಲಿ ಕೊಹ್ಲಿಯನ್ನು ಎಂದಿಗೂ ಸೇರಿಸಲು ಸಾಧ್ಯವಿಲ್ಲ. ಏಕೆಂದರೆ ಕಳೆದ 8 ವರ್ಷ ತಂಡವನ್ನು ಮುನ್ನಡೆಸಿದರೂ ಒಮ್ಮೆಯೂ ಅವರು ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ ಎಂದು ಗಂಭೀರ್ ಹೇಳಿದರು.

    8 ವರ್ಷಗಳಿಂದಲೂ ಯಶಸ್ವಿಯಾಗದಿದ್ದರೂ ಅವರನ್ನೇ ಮುಂದುವರೆಸುತ್ತಿದ್ದಾರೆ. ಎರಡು ಸೀಸನ್​ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸಿದರೂ ಆರ್​.ಅಶ್ವಿನ್ ಅವರನ್ನು ಕೈ ಬಿಡಲಾಗಿತ್ತು. ಆದರೆ ಸತತ ವೈಫಲ್ಯದ ಹೊರತಾಗಿಯೂ ಆರ್​ಸಿಬಿ ಫ್ರಾಂಚೈಸಿ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಹೀಗಾಗಿ ಆರ್​ಸಿಬಿ ಪ್ರಶಸ್ತಿ ಗೆಲ್ಲದಿರಲು ವಿರಾಟ್ ಕೊಹ್ಲಿಯನ್ನು ಹೊಣೆಗಾರನ್ನಾಗಿಸಬೇಕು ಎಂದು ಗಂಭೀರ್ ತಿಳಿಸಿದರು.

    ಏಕೆಂದರೆ ತಂಡ ಗೆದ್ದಾಗ ನೀವು ಕ್ರೆಡಿಟ್ ಪಡೆಯುತ್ತೀರಿ. ಹಾಗೆಯೇ ಸೋತಾಗ ಟೀಕೆಗಳನ್ನು ಸ್ವೀಕರಿಸಬೇಕು. ಹೀಗಾಗಿ ನೀವೇ ನಾಯಕರಾಗಿ ತಂಡ ಗೆಲುವು ಮತ್ತು ಸೋಲಲು ಹೊಣೆಗಾರರಾಗಬೇಕಾಗುತ್ತದೆ ಎಂದು ಗಂಭೀರ್ ಅಭಿಪ್ರಾಯಪಟ್ಟರು. ಅಂದಹಾಗೆ ಸತತ ಸೋಲುಗಳ ಮೂಲಕ ಐಪಿಎಲ್​ನ ಕಳಪೆ ತಂಡ ಎನಿಸಿಕೊಂಡಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 2011 ರಿಂದ ಮುನ್ನಡೆಸಿದ್ದ ಗೌತಮ್ ಗಂಭೀರ್, ಕೆಕೆಆರ್ ತಂಡವನ್ನು 2012 ಮತ್ತು 2014 ರಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಇತ್ತ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 2016 ರಲ್ಲಿ ಫೈನಲ್​ ಪ್ರವೇಶಿಸಿರುವುದೇ ಸಾಧನೆ.
    POINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    ಇದನ್ನೂ ಓದಿ: IPL 2020: ಇಲ್ಲಿವರೆಗೂ ಈತ ಹೇಳಿದ ಭವಿಷ್ಯ ನಿಜವಾಗಿದೆ: ಈ ಬಾರಿ ಕಪ್ ಗೆಲ್ಲುವ ತಂಡವನ್ನೂ ತಿಳಿಸಿದ್ದಾನೆ..!
    Published by:zahir
    First published: