• Home
 • »
 • News
 • »
 • ipl
 • »
 • IPL 2020: ಐಪಿಎಲ್ ಪ್ರಿಯರಿಗೆ ಬಿಗ್ ಶಾಕ್: ಇಬ್ಬರು ಸ್ಟಾರ್ ಭಾರತೀಯರು ಟೂರ್ನಿಯಿಂದಲೇ ಔಟ್!

IPL 2020: ಐಪಿಎಲ್ ಪ್ರಿಯರಿಗೆ ಬಿಗ್ ಶಾಕ್: ಇಬ್ಬರು ಸ್ಟಾರ್ ಭಾರತೀಯರು ಟೂರ್ನಿಯಿಂದಲೇ ಔಟ್!

IPL 2020

IPL 2020

Amit Mishra: ಮುಂದಿನ ಕೆಲವು ಸಮಯ ಅಮಿತ್ ಮಿಶ್ರಾ ವಿಶ್ರಾಂತಿ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಅವರು ಈ ಆವೃತ್ತಿಯ ಮುಂದಿನ ಪಂದ್ಯಗಳಿಗೆ ಲಭ್ಯರಿರುವುದಿಲ್ಲ.

 • Share this:

  13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ರೋಚಕತೆ ಸೃಷ್ಟಿಸುತ್ತಿದೆ ಎಂಬೊತ್ತಿಗೆ ತಂಡಕ್ಕೆ ಹಾಗೂ ಅಭಿಮಾನಿಗಳಿಗೆ ದೊಡ್ಡ ಆಘಾತ ಎದುರಾಗಿದೆ. ಭಾರತ ಕ್ರಿಕೆಟ್ ತಂಡದ ಇಬ್ಬರು ಸ್ಟಾರ್ ಆಟಗಾರರು ಟೂರ್ನಿಯಿಂದಲೇ ಹೊರ ಹೋಗಿದ್ದಾರೆ. ಸನ್​ರೈಸರ್ಸ್​ ಹೈದರಾಬಾದ್ ತಂಡದ ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಸ್ಪಿನ್ನರ್ ಅಮಿತ್ ಮಿಶ್ರಾ ಐಪಿಎಲ್ 2020 ಟೂರ್ನಿಯಿಂದ ಔಟ್ ಆಗಿದ್ದಾರೆ.


  ಕಳೆದ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಪಂದ್ಯದ ಮಧ್ಯೆ ಭುವನೇಶ್ವರ್​ ಕುಮಾರ್ ಸೊಂಟದ ಉಳುಕಿಗೆ ಒಳಗಾಗಿ ಮೈದಾನದಿಂದ ಹೊರನಡೆದಿದ್ದರು. ಆ ಸಂದರ್ಭ ಅವರು ಸಂಪೂರ್ಣ ಓವರ್​ ಕೋಟಾವನ್ನೂ ಮುಗಿಸಿರಲಿಲ್ಲ. ಅಲ್ಲದೆ ಕಳೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲೂ ಭುವಿ ಕಣಕ್ಕಿಳಿದಿರಲಿಲ್ಲ.


  IPL 2020 LIVE Score, RCB vs DC


  ಸದ್ಯ ಎಎನ್​ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಎಸ್​ಆರ್​ಹೆಚ್​ ಮೂಲ, ಗಾಯದ ಕಾರಣ ವೇಗಿ ಶ್ರೀಮಂತ ಕ್ರಿಕೆಟ್​ ಲೀಗ್​ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ. ಹೀಗಾಗಿ ಭುವಿ ಮುಂದಿನ ಯಾವುದೇ ಐಪಿಎಲ್ ಪಂದ್ಯಗಳಿಗೆ ಲಭ್ಯ ಇರುವುದಿಲ್ಲ. ಇದು ಹೈದರಾಬಾದ್ ತಂಡಕ್ಕೆ ಬಹುದೊಡ್ಡ ಹೊಡೆತವಾಗಿದೆ.


  ಹೈದರಾಬಾದ್ ತಂಡದ ಬೌಲಿಂಗ್ ಪಡೆಯನ್ನು ಮುನ್ನಡೆಸುತ್ತಿದ್ದ ಬೌಲರ್ ಭುವನೇಶ್ವರ್​ ತಂಡದಲ್ಲಿಲ್ಲ ಎಂದರೆ ಅದು ಊಹಿಸಿಕೊಳ್ಳಲು ಅಸಾಧ್ಯ. ಅಲ್ಲದೇ ಅವರು ಕೇವಲ ಬೌಲರ್​ ಅಲ್ಲದೇ ತಂಡದ ನಾಯಕತ್ವದ ಒಂದು ಪ್ರಮುಖ ಭಾಗವಾಗಿದ್ದರು ಎಂದು ಎಸ್​ಆರ್​ಹೆಚ್​ ಸುದ್ದಿ ಮೂಲ ತಿಳಿಸಿದೆ.  ಇನ್ನೂ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಹಿರಿಯ ಸ್ಪಿನ್​ ಬೌಲರ್​ ಅಮಿತ್​ ಮಿಶ್ರಾ ಕೂಡ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇವರು ಬೆರಳಿನ ಗಾಯಕ್ಕೆ ತುತ್ತಾಗಿದ್ದಾರೆ. ಕೆಕೆಆರ್​ ವಿರುದ್ಧದ ಪಂದ್ಯದ ವೇಳೆ ಇವರು ತೀವ್ರ ಗಾಯಕ್ಕೆ ತುತ್ತಾಗಿದ್ದರು. ನಿತೀಶ್​ ರಾಣಾ ರಿಟರ್ನ್ ಕ್ಯಾಚ್​ ಹಿಡಿಯುವ ಪ್ರಯತ್ನದ ವೇಳೆ ಇವರ ಬೆರಳಿಗೆ ಗಂಭೀರ ಗಾಯವಾಗಿತ್ತು.


  ಮುಂದಿನ ಕೆಲವು ಸಮಯ ಅಮಿತ್ ಮಿಶ್ರಾ ವಿಶ್ರಾಂತಿ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಅವರು ಈ ಆವೃತ್ತಿಯ ಮುಂದಿನ ಪಂದ್ಯಗಳಿಗೆ ಲಭ್ಯರಿರುವುದಿಲ್ಲ. ಅವರ ಬದಲಿ ಆಟಗಾರನಿಗಾಗಿ ನಾವು ಎದುರು ನೋಡುತ್ತಿದ್ದೇವೆ. ಆದರೆ ಕೆಟ್ಟ ವಿಷಯವೆಂದರೆ ಅವರು ಉತ್ತಮ ಲಯದಲ್ಲಿದ್ದರು, ನಿಜವಾಗಿಯೂ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದರು. ಯುಎಇ ವಾತಾವರಣದಲ್ಲಿ ಅವರ ಅನುಭವ ತಂಡದಲ್ಲಿ ಪ್ರಮುಖವಾಗಿತ್ತು. ಆದರೂ ತಂಡದಲ್ಲಿ ಯುವ ಸ್ಪಿನ್ನರ್​ಗಳಿರುವುದೇ ನಮಗೆ ಸಮಾಧಾನ ಎಂದು ಡೆಲ್ಲಿ ಫ್ರಾಂಚೈಸಿ ಹೇಳಿದೆ.

  Published by:Vinay Bhat
  First published: