(VIDEO): IPL 2020 ರಲ್ಲಿ ಇದೇ ಮೊದಲು: ಮೈದಾನದಲ್ಲೇ ಗಲಾಟೆಗಿಳಿದ ತೇವಾಟಿಯ- ಖಲೀಲ್ ಅಹ್ಮದ್

Rahul Tewatia: ಈ ಸಂದರ್ಭ 4ನೇ ಎಸೆತದಲ್ಲಿ ಒಂದು ರನ್ ಗಳಿಸಿ ನಾನ್​ ಸ್ಟ್ರೈಕ್​ಗೆ ಹೋದ ತೇವಾಟಿಯಾ ಮತ್ತೊಂದು ರನ್ ಕದಿಯಲು ಮುಂದಾದರು. ಇದೇವೇಳೆ ಆಕ್ಷೇಪಾರ್ಹ ವಿಷಯದ ಬಗ್ಗೆ ಖಲೀಲ್ ಹಾಗೂ ತೇವಾಟಿಯ ನಡುವೆ ವಾಗ್ವಾದ ಶುರುವಾಯಿತು.

SRH vs RR

SRH vs RR

 • Share this:
  13ನೇ ಆವೃತ್ತಿಯ ಐಪಿಎಲ್​ನಲ್ಲಿ ನಿನ್ನೆ ಭಾನುವಾರ ನಡೆದ 26ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ರೋಚಕ ಜಯ ಸಾಧಿಸಿತು. ಗೆಲುವಿನ ಅಂಚಿನಲ್ಲಿದ್ದ ಎಸ್​ಆರ್​ಹೆಚ್ ತಂಡಕ್ಕೆ ಶಾಕ್ ನೀಡಿದ ರಾಹುಲ್ ತೇವಾಟಿಯಾ ಹಾಗೂ ರಿಯಾನ್ ಪರಾಗ್ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಇವರಿಬ್ಬರು ಸ್ಮಿತ್ ಪಡೆಗೆ 5 ವಿಕೆಟ್​ಗಳ ಗೆಲುವು ತಂದಿಟ್ಟರು.

  ಸಾಕಷ್ಟು ವಾವ್ ಮೂಮೆಂಟ್​ಗಳಿಗೆ ಈ ಪಂದ್ಯ ಸಾಕ್ಷಿಯಾಗಿತ್ತು. ಅದರಲ್ಲೂ ಸ್ಫೋಟಕ ಆಟವಾಡುತ್ತಿದ್ದ ರಾಹುಲ್ ತೇವಾಟಿಯಾ ಹಾಗೂ ಎಸ್​ಆರ್​ಹೆಚ್ ಬೌಲರ್ ಖಲೀಲ್ ಅಹ್ಮದ್ ನಡುವಣ ಗಲಾಟೆ ಈ ಪಂದ್ಯದಲ್ಲಿ ಕಪ್ಪು ಚುಕ್ಕೆಯಂತಾಯಿತು.

  RCB vs KKR: ಇಂದಿನ ಪಂದ್ಯಕ್ಕೆ ಆರ್​ಸಿಬಿ ತಂಡದಲ್ಲಿ ಒಂದು ಮಹತ್ವದ ಬದಲಾವಣೆ?: ಇಲ್ಲಿದೆ ಸಂಭಾವ್ಯ XI

  ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್​ ಮನೀಶ್ ಪಾಂಡೆ ಅವರ 54 ಹಾಗೂ ನಾಯಕ ಡೇವಿಡ್ ವಾರ್ನರ್ ಅವರ 48 ರನ್​ಗಳ ನೆರವಿನಿಂದ 20 ಓವರ್​ನಲ್ಲಿ 158 ರನ್ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಪಂದ್ಯವನ್ನು ಗೆಲ್ಲಲೇ ಬೇಕೆಂದು ಟೊಂಕಕಟ್ಟಿ ನಿಂತ ರಾಹುಲ್ ತೇವಾಟಿಯ ಹಾಗೂ ರಿಯಾನ್ ಪರಾಗ್ ಸಾಹಸ ಮಾಡಿದರು.

  ಈ ಜೋಡಿಯ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಆರ್​ಆರ್​ ತಂಡಕ್ಕೆ ಕೊನೆಯ ಓವರ್​ನಲ್ಲಿ ಗೆಲ್ಲಲು 8 ರನ್​ಗಳ ಅವಶ್ಯಕತೆಯಿತ್ತು. ಬೌಲಿಂಗ್ ಮಾಡಲು ಬಂದಿದ್ದು ಖಲೀಲ್ ಅಹ್ಮದ್. ಮೊದಲ ಎಸೆತದಲ್ಲಿ ರಿಯಾನ್ ಪರಾಗ್ 2 ರನ್ ಮತ್ತು ಎರಡನೇ ಎಸೆತದಲ್ಲಿ ಒಂದು ರನ್ ಗಳಿಸಿದರು. ತೇವಟಿಯಾ ಮೂರನೇ ಎಸೆತದಲ್ಲಿ ಎರಡು ರನ್ ಗಳಿಸಿದರು.

  ಈ ಸಂದರ್ಭ 4ನೇ ಎಸೆತದಲ್ಲಿ ಒಂದು ರನ್ ಗಳಿಸಿ ನಾನ್​ ಸ್ಟ್ರೈಕ್​ಗೆ ಹೋದ ತೇವಾಟಿಯಾ ಮತ್ತೊಂದು ರನ್ ಕದಿಯಲು ಮುಂದಾದರು. ಇದೇವೇಳೆ ಆಕ್ಷೇಪಾರ್ಹ ವಿಷಯದ ಬಗ್ಗೆ ಖಲೀಲ್ ಹಾಗೂ ತೇವಾಟಿಯ ನಡುವೆ ವಾಗ್ವಾದ ಶುರುವಾಯಿತು.

  5ನೇ ಎಸೆತದಲ್ಲಿ ವಿನ್ನಿಂಗ್ ಶಾಟ್ ಹೊಡೆದ ಪರಾಗ್ ಗೆಲುವಿನ ಸಂಭ್ರಮಾಚರಣೆ ಮಾಡಿದರು. ಈ ಸಂದರ್ಭ ಖಲೀಲ್ ಏನೋ ಹೇಳಿದ್ದ ವಿಚಾರಕ್ಕೆ ತೇವಾಟಿಯಾ ಬೆರಳು ತೂರಿಸಿ ಮಾತನಾಡಿದರು. ಆ ಬಳಿಕ ಸನ್‌ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಮತ್ತು ಕೇನ್ ವಿಲಿಯಮ್ಸನ್ ತೇವಾಟಿಯಾ ಅವರನ್ನು ಸಮಧಾನ ಮಾಡಿದರು.

  IPL 2020, RCB vs KKR: ಇಂದಿನ ಐಪಿಎಲ್​​ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಆರ್​ಸಿಬಿ ಗೆದ್ದರೆ ಏನಾಗಲಿದೆ?

  ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಆರ್​ಆರ್​​ 19.5 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿ ಭರ್ಜರಿ ಗೆಲುವು ಕಂಡಿತು. ತೇವಾಟಿಯ 28 ಎಸೆತಗಳಲ್ಲಿ 4 ಬೌಂಡರಿ,2 ಸಿಕ್ಸರ್ ಬಾರಿಸಿ ಅಜೇಯ 45 ರನ್ ಬಾರಿಸಿದರೆ, ಪರಾಗ್ 26 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಿಡಿಸಿ ಅಜೇಯ 42 ರನ್ ಗಳಿಸಿದರು.
  Published by:Vinay Bhat
  First published: