ಐಪಿಎಲ್ನಲ್ಲಿಂದು ಎರಡು ಮಹತ್ವದ ಪಂದ್ಯ ನಡೆಯಲಿದೆ. ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಡೇವಿಡ್ ವಾರ್ನರ್ ನಾಯಕತ್ವದ ಸನ್ರೈರ್ಸ್ ಹೈದರಾಬಾದ್ ಹಾಗೂ ಸ್ಟೀವ್ ಸ್ಮಿತ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ. ಮತ್ತೊಂದು ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಮುಂಬೈ ಇಂಡಿಯನ್ಸ್ ಹಾಗೂ ಶ್ರೇಯಸ್ ಅಯ್ಯರ್ ನಾಯಜತ್ವದ ಡೆಲ್ಲಿ ಕ್ಯಾಪಿಟಲ್ಸ್ ಸೆಣೆಸಾಟ ನಡೆಸಲಿವೆ.
ಸತತ ನಾಲ್ಕು ಪಂದ್ಯಗಳನ್ನು ಸೋತು ನಿರಾಸೆ ಅನುಭವಿಸಿರುವ ಸ್ಮಿತ್ ಪಡೆ ಆಡಿರುವ 6 ಪಂದ್ಯಗಳಲ್ಲಿ 2 ರಲ್ಲಿ ಮಾತ್ರ ಜಯ ಸಾಧಿಸಿದೆ. ಸ್ಫೋಟಕ ಆಟಗಾರಿರುವ ರಾಜಸ್ಥಾನ ತಂಡಕ್ಕೆ ನಾಯಕ ಸ್ಮಿತ್ ಸೇರಿದಂತೆ ಎಲ್ಲಾ ಬ್ಯಾಟ್ಸ್ಮನ್ಗಳು ವೈಫಲ್ಯ ಅನುಭವಿಸುತ್ತಿರುವುದು ಹಿನ್ನಡೆಗೆ ಕಾರಣವಾಗಿದೆ. ಆರಂಭದ ಪಂದ್ಯಗಳಲ್ಲಿ ಅಬ್ಬರಿಸಿದ್ದ ಸಂಜು ಸಾಮ್ಸನ್ ಸದ್ದು ಮಾಡುತ್ತಿಲ್ಲ.
Virat Kohli: ಚೆನ್ನೈ ವಿರುದ್ಧದ ಪಂದ್ಯದಲ್ಲಿ ಎಬಿಡಿಯಾಗಿ ಬದಲಾದ ಕೊಹ್ಲಿ; ಇಲ್ಲಿದೆ ರೋಚಕ ವಿಡಿಯೋ
ಆದರೆ, ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ತಂದೆಯನ್ನು ನೋಡುವ ಸಲುವಾಗಿ ನ್ಯೂಜಿಲೆಂಡ್ಗೆ ತೆರಳಿದ್ದ ಬೆನ್ಸ್ಟೋಕ್ಸ್, ಕಳೆದ ವಾರವಷ್ಟೇ ಯುಎಇಗೆ ಬಂದಿಳಿದರು. ಇದೀಗ 6 ದಿನಗಳ ಕಾಲ ಕ್ವಾರಂಟೈನ್ ಅವಧಿ ಮುಕ್ತಾಯಗೊಳಿಸಿರುವ ಸ್ಟೋಕ್ಸ್, ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಇದರೊಂದಿಗೆ ರಾಯಲ್ಸ್ ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗಗಳಲ್ಲಿ ಶಕ್ತಿ ಬಂದಂತಾಗಿದೆ.
ಇತ್ತ ಹೈದರಾಬಾದ್ ತಂಡ 6 ಪಂದ್ಯಗಳ ಪೈಕಿ 3ರಲ್ಲಿ ಜಯ ಸಾಧಿಸಿ, 3 ಪಂದ್ಯಗಳಲ್ಲಿ ಸೋಲುಕಂಡಿದೆ. ಜಾನಿ ಬೈರ್ಸ್ಟೋ ಮತ್ತು ನಾಯಕ ವಾರ್ನರ್ ಲಯಕ್ಕೆ ಮರಳಿರುವುದು ತಂಡದ ಶಕ್ತಿ ಹೆಚ್ಚಿಸಿದೆ. ಆದರೆ ಕೇನ್ ವಿಲಿಯಮ್ಸನ್ ಹೊರತುಪಡಿಸಿ ಮಧ್ಯಮ ಕ್ರಮಾಕದ ಆಟಗಾರರು ಕಳೆದ 2 ಪಂದ್ಯಗಳಿಂದ ತಂಡಕ್ಕೆ ಆಸರೆಯಾಗದಿರುವುದು ಕೊಂಚ ಹಿನ್ನಡೆಯಾಗಿದೆ.
ಭುವಿ ಅನುಪಸ್ಥಿತಿಯಲ್ಲೂ ಟಿ.ನಟರಾಜನ್, ರಶೀದ್ ಖಾನ್, ಖಲೀಲ್ ಅಹಮದ್ ಒಳಗೊಂಡ ಬೌಲಿಂಗ್ ಪಡೆ ತಂಡಕ್ಕೆ ಆಸರೆಯಾಗಿದ್ದಾರೆ.
ಉಭಯ ತಂಡಗಳು ಇಲ್ಲಿಯವರೆಗೆ 11 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 6 ಪಂದ್ಯಗಳಲ್ಲಿ ಹೈದರಾಬಾದ್ ತಂಡ ಗೆಲುವು ಕಂಡಿದ್ರೆ, 5 ಪಂದ್ಯಗಳಲ್ಲಿ ರಾಜಸ್ಥಾನ ತಂಡ ಜಯ ಸಾಧಿಸಿದೆ.
ಇನ್ನೂ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಬಲಿಷ್ಠ ತಂಡವಾಗಿರುವ ಮುಂಬೈ ಹಾಗೂ ಡೆಲ್ಲಿ ಮುಖಾಮುಖಿ ಆಗಲಿದೆ. ಶೇಖ್ ಝಯೇದ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದ್ದು ಅಗ್ರಸ್ಥಾನಕ್ಕಾಗಿ ಕಾದಾಟ ನಡೆಯಲಿದೆ.
Virat Kohli: ಉಲ್ಟಾ ಬ್ಯಾಟ್ನಲ್ಲಿ ಸಿಕ್ಸ್ ಹೊಡೆದ ವಿರಾಟ್ ಕೊಹ್ಲಿ; ವಿಚಿತ್ರ ಶಾಟ್ ನೋಡಿ ಸಿಎಸ್ಕೆ ಬೌಲರ್ ದಂಗು
ಡೆಲ್ಲಿ ಗೆದ್ದರೆ ಅಗ್ರಸ್ಥಾನ ಉಳಿಸಿಕೊಳ್ಳಲಿದೆ. ಮುಂಬೈ ಗೆದ್ದರೆ ಉತ್ತಮ ರನ್ರೇಟ್ ಆಧಾರದಲ್ಲಿ ಅಗ್ರಸ್ಥಾನಕ್ಕೇರಲಿದೆ. ಹ್ಯಾಟ್ರಿಕ್ ಗೆಲುವಿನಿಂದ ಬೀಗುತ್ತಿರುವ ಉಭಯ ತಂಡಗಳು, ಲೀಗ್ನಲ್ಲಿ ಇದುವರೆಗೆ ಸ್ಥಿರ ನಿರ್ವಹಣೆಯಿಂದ ಗಮನಸೆಳೆದಿವೆ. ಉಭಯ ತಂಡಗಳ ಆಟಗಾರರು ಭರ್ಜರಿ ಫಾರ್ಮ್ನಲ್ಲಿದ್ದು ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.
ಉಭಯ ತಂಡಗಳು ಇಲ್ಲಿಯವರೆಗೆ 24 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 12 ಪಂದ್ಯಗಳಲ್ಲಿ ಮುಂಬೈ ತಂಡ ಗೆಲುವು ಕಂಡಿದ್ರೆ, ಇತ್ತ ಡೆಲ್ಲಿ ಕೂಡ 12 ಪಂದ್ಯಗಳಲ್ಲಿ ಜಯ ಸಾಧಿಸಿ ಸಮಬಲದಿಂದ ಕೂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ