IPL 2020 LIVE Score, SRH vs RR: ಅರ್ಧಶತಕದ ಅಂಚಿನಲ್ಲಿ ಎಡವಿದ ವಾರ್ನರ್

IPL 2020, Hyderabad vs Rajasthan Live Score: ಉಭಯ ತಂಡಗಳು ಈವರೆಗೆ 11 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 6 ಪಂದ್ಯಗಳಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಹಾಗೂ 5 ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಜಯ ಸಾಧಿಸಿದೆ.

ಮನೀಶ್ ಪಾಂಡೆ.

ಮನೀಶ್ ಪಾಂಡೆ.

 • Share this:
  ದುಬೈ (ಅ. 11): ಐಪಿಎಲ್​ನ 26ನೇ ಪಂದ್ಯ ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್​ರೈರ್ಸ್​ ಹೈದರಾಬಾದ್ ತಂಡ ಉತ್ತಮ ಮೊತ್ತದತ್ತ ದಾಪುಗಾಲಿಡುತ್ತಿದೆ.

  ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದಿರುವ ಹೈದರಾಬಾದ್ ತಂಡ ಮೊದಲ 4 ಓವರ್​ನಲ್ಲಿ ಕೇವಲ 13 ರನ್ ಗಳಿಸಿತಷ್ಟೆ. 5ನೇ ಓವರ್​ನ ಕಾರ್ತಿಕ್ ತ್ಯಾಗಿ ಬೌಲಿಂಗ್​ನಲ್ಲಿ ಜಾನಿ ಬೈರ್​ಸ್ಟೋ(16) ಸಿಕ್ಸ್ ಸಿಡಿಸಲೋಗಿ ಔಟ್ ಆದರು.

  ಬಳಿಕ ಜೊತೆಯಾದ ನಾಯಕ ಡೇವಿಡ್ ವಾರ್ನರ್ ಹಾಗೂ ಮನೀಶ್ ಪಾಂಡೆ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ತಂಡದ ರನ್ ಗತಿಯನ್ನು ಏರಿಸಿಲು ಸಾಹಸ ಪಟ್ಟ ಈ ಜೋಡಿ 73 ರನ್​ಗಳ ಅಮೋಘ ಜೊತೆಯಾಟ ಆಡಿತು. ಆದರೆ, 38 ಎಸೆತಗಳಲ್ಲಿ 48 ರನ್ ಗಳಿಸಿ ಅರ್ಧಶತಕದ ಅಂಚಿನಲ್ಲಿದ್ದ ವಾರ್ನರ್ ಅವರು ಆರ್ಚರ್ ಬೌಲಿಂಗ್​ನಲ್ಲಿ ಬೌಲ್ಡ್ ಆದರು.

  ಸದ್ಯ ಸೆಟ್ ಬ್ಯಾಟ್ಸ್​ಮನ್ ಮನೀಶ್ ಪಾಂಡೆ ಹಾಗೂ ಕೇನ್ ವಿಲಿಯಮ್ಸನ್ ಕ್ರೀಸ್​ನಲ್ಲಿದ್ದಾರೆ.

  ಇಂದಿನ ಪಂದ್ಯಕ್ಕೆ ಎಸ್​ಆರ್​ಎಚ್ ತಂಡ ಒಂದು ಬದಲಾವಣೆ ಮಾಡಲಾಗಿದ್ದು ಸಮದ್ ಬದಲು ವಿಜಯ್ ಶಂಕರ್ ಕಣಕ್ಕಿಳಿಯುತ್ತಿದ್ದಾರೆ.

  ಸನ್​ರೈಸರ್ಸ್​ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಜಾನಿ ಬೇರ್‌ಸ್ಟೋ (ವಿಕೆಟ್‌ ಕೀಪರ್‌), ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್, ವಿಜಯ್ ಶಂಕರ್, ಅಭಿಷೇಕ್ ಶರ್ಮ, ಪ್ರಿಯಂ ಗಾರ್ಗ್, ರಶೀದ್ ಖಾನ್, ಸಂದೀಪ್ ಶರ್ಮಾ, ಟಿ. ನಟರಾಜನ್, ಖಲೀಲ್ ಅಹ್ಮದ್.

  ಇತ್ತ ಆರ್​ಆರ್​ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದೆ, ಬೆನ್ ಸ್ಟೋಕ್ಸ್​, ರಿಯಾನ್ ಪರಾಗ್ ಹಾಗೂ ರಾಬಿನ್ ಉತ್ತಪ್ಪ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದು ಆನೆಬಲ ಬಂದಂತಾಗಿದೆ.

  ರಾಜಸ್ಥಾನ್ ರಾಯಲ್ಸ್: ಜಾಸ್ ಬಟ್ಲರ್, ರಾಬಿನ್ ಉತ್ತಪ್ಪ, ಸ್ಟೀವ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ಬೆನ್ ಸ್ಟೋಕ್ಸ್, ರಿಯಾನ್ ಪರಾಗ್, ರಾಹುಲ್ ತೇವಾಟಿಯಾ, ಶ್ರೇಯಸ್ ಗೋಪಾಲ್, ಜೋಫ್ರಾ ಆರ್ಚರ್, ಕಾರ್ತಿಕ್ ತ್ಯಾಗಿ, ವರುಣ್ ಆರುಣ್.

  Virat Kohli: ಚೆನ್ನೈ ವಿರುದ್ಧದ ಪಂದ್ಯದಲ್ಲಿ ಎಬಿಡಿಯಾಗಿ ಬದಲಾದ ಕೊಹ್ಲಿ; ಇಲ್ಲಿದೆ ರೋಚಕ ವಿಡಿಯೋ

  ಸತತ ನಾಲ್ಕು ಪಂದ್ಯಗಳನ್ನು ಸೋತು ನಿರಾಸೆ ಅನುಭವಿಸಿರುವ ಸ್ಮಿತ್​ ಪಡೆ ಆಡಿರುವ 6 ಪಂದ್ಯಗಳಲ್ಲಿ 2 ರಲ್ಲಿ ಮಾತ್ರ ಜಯ ಸಾಧಿಸಿದೆ. ಸ್ಫೋಟಕ ಆಟಗಾರಿರುವ ರಾಜಸ್ಥಾನ ತಂಡಕ್ಕೆ ನಾಯಕ ಸ್ಮಿತ್ ಸೇರಿದಂತೆ ಎಲ್ಲಾ ಬ್ಯಾಟ್ಸ್​ಮನ್​ಗಳು ವೈಫಲ್ಯ ಅನುಭವಿಸುತ್ತಿರುವುದು ಹಿನ್ನಡೆಗೆ ಕಾರಣವಾಗಿದೆ. ಆರಂಭದ ಪಂದ್ಯಗಳಲ್ಲಿ ಅಬ್ಬರಿಸಿದ್ದ ಸಂಜು ಸಾಮ್ಸನ್ ಕೂಡ ಸದ್ದು ಮಾಡುತ್ತಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲೇ ಅಬ್ಬರಿಸಬೇಕಾಗಿದೆ.

  ಇತ್ತ ಹೈದರಾಬಾದ್​ ತಂಡ 6 ಪಂದ್ಯಗಳ ಪೈಕಿ 3 ರಲ್ಲಿ ಜಯ ಸಾಧಿಸಿ, 3 ಪಂದ್ಯಗಳಲ್ಲಿ ಸೋಲುಕಂಡಿದೆ. ಜಾನಿ ಬೈರ್​​ಸ್ಟೋ ಮತ್ತು ನಾಯಕ ವಾರ್ನರ್​ ಲಯಕ್ಕೆ ಮರಳಿರುವುದು ತಂಡದ ಶಕ್ತಿ ಹೆಚ್ಚಿಸಿದೆ. ಆದರೆ ಕೇನ್ ವಿಲಿಯಮ್ಸನ್​ ಹೊರತುಪಡಿಸಿ ಮಧ್ಯಮ ಕ್ರಮಾಕದ ಆಟಗಾರರು ಕಳೆದ 2 ಪಂದ್ಯಗಳಿಂದ ತಂಡಕ್ಕೆ ಆಸರೆಯಾಗದಿರುವುದು ಕೊಂಚ ಹಿನ್ನಡೆಯಾಗಿದೆ.

  Virat Kohli: ಉಲ್ಟಾ ಬ್ಯಾಟ್​ನಲ್ಲಿ ಸಿಕ್ಸ್​ ಹೊಡೆದ ವಿರಾಟ್ ಕೊಹ್ಲಿ; ವಿಚಿತ್ರ ಶಾಟ್​ ನೋಡಿ ಸಿಎಸ್​ಕೆ ಬೌಲರ್​ ದಂಗು

  ಭುವಿ ಅನುಪಸ್ಥಿತಿಯಲ್ಲೂ ಟಿ.ನಟರಾಜನ್, ರಶೀದ್ ಖಾನ್, ಖಲೀಲ್ ಅಹಮದ್ ಒಳಗೊಂಡ ಬೌಲಿಂಗ್ ಪಡೆ ತಂಡಕ್ಕೆ ಆಸರೆಯಾಗಿದ್ದಾರೆ.

  ಉಭಯ ತಂಡಗಳು ಇಲ್ಲಿಯವರೆಗೆ 11 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 6 ಪಂದ್ಯಗಳಲ್ಲಿ ಹೈದರಾಬಾದ್ ತಂಡ ಗೆಲುವು ಕಂಡಿರೆ, 5 ಪಂದ್ಯಗಳಲ್ಲಿ ರಾಜಸ್ಥಾನ ತಂಡ ಜಯ ಸಾಧಿಸಿದೆ.
  Published by:Vinay Bhat
  First published: