IPL 2020, SRH vs RR: ಪಾಂಡೆ 54, ವಾರ್ನರ್ 48: ರಾಜಸ್ಥಾನಕ್ಕೆ 159 ರನ್​ಗಳ ಟಾರ್ಗೆಟ್

IPL 2020, Hyderabad vs Rajasthan: ನಾಯಕ ಡೇವಿಡ್ ವಾರ್ನರ್ ಹಾಗೂ ಮನೀಶ್ ಪಾಂಡೆ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ತಂಡದ ರನ್ ಗತಿಯನ್ನು ಏರಿಸಿಲು ಸಾಹಸ ಪಟ್ಟ ಈ ಜೋಡಿ 73 ರನ್​ಗಳ ಅಮೋಘ ಜೊತೆಯಾಟ ಆಡಿತು.

ಮನೀಶ್ ಪಾಂಡೆ

ಮನೀಶ್ ಪಾಂಡೆ

 • Share this:
  ದುಬೈ (ಅ. 11): ಐಪಿಎಲ್​ನ 26ನೇ ಪಂದ್ಯ ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್​ರೈರ್ಸ್​ ಹೈದರಾಬಾದ್ ತಂಡ ಸವಾಲಿನ ಮೊತ್ತ ಕಲೆಹಾಕಿದೆ. ಮನೀಶ್ ಪಾಂಡೆ ಅವರ ಆಕರ್ಷಕ ಅರ್ಧಶತಕ ಹಾಗೂ ನಾಯಕ ಡೇವಿಡ್ ವಾರ್ನರ್ ಅವರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಎಸ್​ಆರ್​ಎಚ್ ತಂಡ 158 ರನ್ ಗಳಿಸಿದೆ.

  ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಹೈದರಾಬಾದ್ ತಂಡ ಮೊದಲ 4 ಓವರ್​ನಲ್ಲಿ ಕೇವಲ 13 ರನ್ ಗಳಿಸಿತಷ್ಟೆ. 5ನೇ ಓವರ್​ನ ಕಾರ್ತಿಕ್ ತ್ಯಾಗಿ ಬೌಲಿಂಗ್​ನಲ್ಲಿ ಜಾನಿ ಬೈರ್​ಸ್ಟೋ(16) ಸಿಕ್ಸ್ ಸಿಡಿಸಲೋಗಿ ಔಟ್ ಆದರು.

  ಬಳಿಕ ಜೊತೆಯಾದ ನಾಯಕ ಡೇವಿಡ್ ವಾರ್ನರ್ ಹಾಗೂ ಮನೀಶ್ ಪಾಂಡೆ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ತಂಡದ ರನ್ ಗತಿಯನ್ನು ಏರಿಸಿಲು ಸಾಹಸ ಪಟ್ಟ ಈ ಜೋಡಿ 73 ರನ್​ಗಳ ಅಮೋಘ ಜೊತೆಯಾಟ ಆಡಿತು. ಆದರೆ, 38 ಎಸೆತಗಳಲ್ಲಿ 48 ರನ್ ಗಳಿಸಿ ಅರ್ಧಶತಕದ ಅಂಚಿನಲ್ಲಿದ್ದ ವಾರ್ನರ್ ಅವರು ಆರ್ಚರ್ ಬೌಲಿಂಗ್​ನಲ್ಲಿ ಬೌಲ್ಡ್ ಆದರು.

  ಡೆತ್ ಓವರ್​ನಲ್ಲಿ ಮನೀಶ್ ಪಾಂಡೆ ಜೊತೆಯಾದ ಕೇನ್ ವಿಲಿಯಮ್ಸನ್ ಅತ್ಯುತ್ತಮ ಆಟವಾಡಿದರು. ಅದರಲ್ಲೂ ತಮ್ಮ ನೈಜ್ಯ ಆಟ ಪ್ರದರ್ಶಿಸಿದ ಪಾಂಡೆ ಆಕರ್ಷಕ ಅರ್ಧಶತಕ ಸಿಡಿಸಿದರು. ಪಾಂಡೆ 44 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಬಾರಿಸಿ 54 ರನ್ ಚಚ್ಚಿದರು. ವಿಲಿಯಮ್ಸನ್ 12 ಎಸೆತಗಳಲ್ಲಿ ಅಜೇಯ 22 ರನ್ ಗಳಿಸಿದರು.

  ಅಂತಿಮವಾಗಿ ಹೈದರಾಬಾದ್ 20 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಆರ್​ಆರ್​ ಪರ ಕಾರ್ತಿಕ್ ತ್ಯಾಗಿ, ಉನಾದ್ಕಟ್ ಹಾಗೂ ಜೋಫ್ರಾ ಆರ್ಚರ್ ತಲಾ 1 ವಿಕೆಟ್ ಪಡೆದರು.

  ಸನ್​ರೈಸರ್ಸ್​ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಜಾನಿ ಬೇರ್‌ಸ್ಟೋ (ವಿಕೆಟ್‌ ಕೀಪರ್‌), ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್, ವಿಜಯ್ ಶಂಕರ್, ಅಭಿಷೇಕ್ ಶರ್ಮ, ಪ್ರಿಯಂ ಗಾರ್ಗ್, ರಶೀದ್ ಖಾನ್, ಸಂದೀಪ್ ಶರ್ಮಾ, ಟಿ. ನಟರಾಜನ್, ಖಲೀಲ್ ಅಹ್ಮದ್.

  ರಾಜಸ್ಥಾನ್ ರಾಯಲ್ಸ್: ಜಾಸ್ ಬಟ್ಲರ್, ರಾಬಿನ್ ಉತ್ತಪ್ಪ, ಸ್ಟೀವ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ಬೆನ್ ಸ್ಟೋಕ್ಸ್, ರಿಯಾನ್ ಪರಾಗ್, ರಾಹುಲ್ ತೇವಾಟಿಯಾ, ಶ್ರೇಯಸ್ ಗೋಪಾಲ್, ಜೋಫ್ರಾ ಆರ್ಚರ್, ಕಾರ್ತಿಕ್ ತ್ಯಾಗಿ, ವರುಣ್ ಆರುಣ್.
  Published by:Vinay Bhat
  First published: