IPL

  • associate partner
HOME » NEWS » Ipl » IPL 2020 SRH VS RR LIVE SCORE SUNRISERS HYDERABAD VS RAJASTHAN ROYALS RAJASTHAN ROYALS WON BY 5 WKTS VB

IPL 2020, SRH vs RR: ಪಂದ್ಯದ ಗತಿಯನ್ನೇ ಬದಲಾಯಿಸಿದ ತೇವಾಟಿಯ-ಪರಾಗ್: ಆರ್​ಆರ್​ಗೆ ರೋಚಕ ಜಯ

IPL 2020, Hyderabad vs Rajasthan: ಈವೇಳೆ ಕ್ರೀಸ್​ಗೆ ಬಂದ ರಾಹುಲ್ ತೇವಾಟಿಯ ಹಾಗೂ ರಿಯಾನ್ ಪರಾಗ್ ಗೆಲುವಿಗೆ ಹೋರಾಟ ನಡೆಸಿದರು. ಸೋಲಿನ ಸುಳಿಯಲ್ಲಿದ್ದ ತಂಡಕ್ಕೆ ಗೆಲುವಿನ ರುಚಿ ನೀಡಿದರು. ಈ ಜೋಡಿ ಕೊನೆ ಹಂತದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿತು.

news18-kannada
Updated:October 11, 2020, 7:21 PM IST
IPL 2020, SRH vs RR: ಪಂದ್ಯದ ಗತಿಯನ್ನೇ ಬದಲಾಯಿಸಿದ ತೇವಾಟಿಯ-ಪರಾಗ್: ಆರ್​ಆರ್​ಗೆ ರೋಚಕ ಜಯ
ರಾಹುಲ್ ತೇವಾಟಿಯ ಹಾಗೂ ರಿಯಾನ್ ಪರಾಗ್
  • Share this:
ದುಬೈ (ಅ. 11): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 26ನೇ ಪಂದ್ಯದಲ್ಲಿ ಸನ್​ರೈರ್ಸ್​ ಹೈದರಾಬಾದ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ರೋಚಕ ಗೆಲುವು ಸಾಧಿಸಿದೆ. ಕೊನೆಯ ಹಂತದಲ್ಲಿ ರಾಹುಲ್ ತೇವಾಟಿಯ ಹಾಗೂ ರಿಯಾನ್ ಪರಾಗ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಸ್ಮಿತ್ ಪಡೆ 5 ವಿಕೆಟ್​ಗಳ ಗೆಲುವು ದಾಖಲಿಸಿ ಪ್ಲೇ ಆಫ್ ಹಾದಿ ಜೀವಂತವಾಗಿರಿಸಿದೆ. ಇತ್ತ ವಾರ್ನರ್ ಪಡೆ ಟೂರ್ನಿಯಲ್ಲಿ 4ನೇ ಸೋಲು ಕಂಡಿದೆ.

ಹೈದರಾಬಾದ್ ನೀಡಿದ್ದ 159 ರನ್​ಗಳ ಸವಾಲಿನ ಗುರಿ ಬೆನ್ನಟ್ಟಿದ ರಾಜಸ್ಥಾನ್ ಆರಂಭದಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಪ್ರಮುಖ ಬ್ಯಾಟ್ಸ್​ಮನ್​ ಬೆನ್ ಸ್ಟೋಕ್ಸ್ ಕೇವಲ 5 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಾಯಕ ಸ್ಟೀವ್ ಸ್ಮಿತ್ ಈ ಬಾರಿಯೂ ವಿಫಲರಾಗಿ ಕೇವಲ 5 ರನ್​ಗೆ ಔಟ್ ಆದರು. ಇದರ ಬೆನ್ನಲ್ಲೇ ಜಾಸ್ ಬಟ್ಲರ್(16) ಕೂಡ ಔಟ್ ಆಗಿ ಶಾಕ್ ನೀಡಿದರು.

ಈ ಸಂದರ್ಭ ಜೊತೆಯಾದ ರಾಬಿನ್ ಉತ್ತಪ್ಪ ಹಾಗೂ ಸಂಜು ಸ್ಯಾಮ್ಸನ್ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದರು. ಆದರೆ, ಸ್ಯಾಮ್ಸನ್​ಗೆ ಉತ್ತಪ್ಪ ಸಾತ್ ನೀಡಲಿಲ್ಲ. ರಾಬಿನ್ 18 ರನ್​ಗೆ ಔಟ್ ಆಗುವ ಮೂಲಕ 37 ರನ್​ಗಳ ಜೊತೆಯಾಟಕ್ಕೆ ಬ್ರೇಕ್ ಬಿತ್ತು.

ಸ್ಯಾಮ್ಸನ್ ಕೂಡ 25 ಎಸೆತಗಳಲ್ಲಿ 26 ರನ್ ಗಳಿಸಿ ನಿರ್ಗಮಿಸಿದರು. ಈವೇಳೆ ಕ್ರೀಸ್​ಗೆ ಬಂದ ರಾಹುಲ್ ತೇವಾಟಿಯ ಹಾಗೂ ರಿಯಾನ್ ಪರಾಗ್ ಗೆಲುವಿಗೆ ಹೋರಾಟ ನಡೆಸಿದರು. ಸೋಲಿನ ಸುಳಿಯಲ್ಲಿದ್ದ ತಂಡಕ್ಕೆ ಗೆಲುವಿನ ರುಚಿ ನೀಡಿದರು. ಈ ಜೋಡಿ ಕೊನೆ ಹಂತದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿತು.





ಕೊನೆಯ ಓವರ್​ನಲ್ಲಿ ಗೆಲ್ಲಲು 8 ರನ್​ಗಳ ಅವಶ್ಯಕತೆಯಿತ್ತು. ತೇವಾಟಿಯ-ಪರಾಗ್ ಸಾಹಸ ನಡೆಸಿ 1 ಬಾಲ್ ಬಾಕಿ ಇರವಂತೆ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ತೇವಾಟಿಯ 28 ಎಸೆತಗಳಲ್ಲಿ 4 ಬೌಂಡರಿ,2 ಸಿಕ್ಸರ್ ಬಾರಿಸಿ ಅಜೇಯ 45 ರನ್ ಬಾರಿಸಿದರೆ, ಪರಾಗ್ 26 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಿಡಿಸಿ ಅಜೇಯ 42 ರನ್ ಗಳಿಸಿದರು.

ಅಂತಿಮವಾಗಿ ಆರ್​ಆರ್​​ 19.5 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿ ಭರ್ಜರಿ ಗೆಲುವು ಕಂಡಿತು. ಹೈದರಾಬಾದ್ ಪರ ಖಲೀಲ್ ಅಹ್ಮದ್ ಹಾಗೂ ರಶೀದ್ ಖಾನ್ ತಲಾ 2 ವಿಕೆಟ್ ಕಿತ್ತರು.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಹೈದರಾಬಾದ್ ತಂಡ ಮೊದಲ 4 ಓವರ್​ನಲ್ಲಿ ಕೇವಲ 13 ರನ್ ಗಳಿಸಿತಷ್ಟೆ. 5ನೇ ಓವರ್​ನ ಕಾರ್ತಿಕ್ ತ್ಯಾಗಿ ಬೌಲಿಂಗ್​ನಲ್ಲಿ ಜಾನಿ ಬೈರ್​ಸ್ಟೋ(16) ಸಿಕ್ಸ್ ಸಿಡಿಸಲೋಗಿ ಔಟ್ ಆದರು.

ಬಳಿಕ ಜೊತೆಯಾದ ನಾಯಕ ಡೇವಿಡ್ ವಾರ್ನರ್ ಹಾಗೂ ಮನೀಶ್ ಪಾಂಡೆ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ತಂಡದ ರನ್ ಗತಿಯನ್ನು ಏರಿಸಿಲು ಸಾಹಸ ಪಟ್ಟ ಈ ಜೋಡಿ 73 ರನ್​ಗಳ ಅಮೋಘ ಜೊತೆಯಾಟ ಆಡಿತು. ಆದರೆ, 38 ಎಸೆತಗಳಲ್ಲಿ 48 ರನ್ ಗಳಿಸಿ ಅರ್ಧಶತಕದ ಅಂಚಿನಲ್ಲಿದ್ದ ವಾರ್ನರ್ ಅವರು ಆರ್ಚರ್ ಬೌಲಿಂಗ್​ನಲ್ಲಿ ಬೌಲ್ಡ್ ಆದರು.





ಡೆತ್ ಓವರ್​ನಲ್ಲಿ ಮನೀಶ್ ಪಾಂಡೆ ಜೊತೆಯಾದ ಕೇನ್ ವಿಲಿಯಮ್ಸನ್ ಅತ್ಯುತ್ತಮ ಆಟವಾಡಿದರು. ಅದರಲ್ಲೂ ತಮ್ಮ ನೈಜ್ಯ ಆಟ ಪ್ರದರ್ಶಿಸಿದ ಪಾಂಡೆ ಆಕರ್ಷಕ ಅರ್ಧಶತಕ ಸಿಡಿಸಿದರು. ಪಾಂಡೆ 44 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಬಾರಿಸಿ 54 ರನ್ ಚಚ್ಚಿದರು. ವಿಲಿಯಮ್ಸನ್ 12 ಎಸೆತಗಳಲ್ಲಿ ಅಜೇಯ 22 ರನ್ ಗಳಿಸಿದರು.

ಅಂತಿಮವಾಗಿ ಹೈದರಾಬಾದ್ 20 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಆರ್​ಆರ್​ ಪರ ಕಾರ್ತಿಕ್ ತ್ಯಾಗಿ, ಉನಾದ್ಕಟ್ ಹಾಗೂ ಜೋಫ್ರಾ ಆರ್ಚರ್ ತಲಾ 1 ವಿಕೆಟ್ ಪಡೆದರು.
Published by: Vinay Bhat
First published: October 11, 2020, 7:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories