ಶುಕ್ರವಾರ ಅಬುಧಾಬಿಯಲ್ಲಿ ನಡೆದ ಐಪಿಎಲ್ 2020ರ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡ 6 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಮತ್ತೆ ಕಳಪೆ ಪ್ರದರ್ಶನ ತೋರಿದ ಆರ್ಸಿಬಿ ಈ ಬಾರಿಯೂ ಕಪ್ ಗೆಲ್ಲಲಾಗದೆ ಟೂರ್ನಿಯಿಂದ ಹೊರಬಿದ್ದಿತು. ಲೋ ಸ್ಕೋರ್ ಗೇಮ್ನಲ್ಲಿ ಕೊನೆಯ ಓವರ್ ವರೆಗೂ ನಡೆದ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿತ್ತು.
ಆರ್ಸಿಬಿ ನೀಡಿದ್ದ 132 ರನ್ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ಆರಂಭದಲ್ಲಿ ರನ್ ಕಲೆಹಾಕಲು ಪರದಾಡಿತು. ಜೊತೆಗೆ ಶ್ರೀವತ್ಸ್ ಗೋಸ್ವಾಮಿ ಹಾಗೂ ನಾಯಕ ಡೇವಿಡ್ ವಾರ್ನರ್ ವಿಕೆಟ್ ಬೇಗನೆ ಕಳೆದುಕೊಂಡಿತು. ಹೀಗಾಗಿ ಎಚ್ಚರಿಯಿಂದ ಬ್ಯಾಟ್ ಬೀಸಲು ಹೊರಟ ಎಸ್ಆರ್ಹೆಚ್ ಬ್ಯಾಟ್ಸ್ಮನ್ಗಳು ನಿಧಾನಗತಿಯಲ್ಲಿ ರನ್ ಕಲೆಹಾಕುತ್ತಿದ್ದರು.
IPL 2020, RCB: ಕಣ್ಣಲ್ಲಿ ನೀರು ತರಿಸುತ್ತೆ ಆರ್ಸಿಬಿ ಹಂಚಿಕೊಂಡ ಈ ಕೊನೆಯ ವಿಡಿಯೋ..!
ಈ ಸಂದರ್ಭ ಮನೀಶ್ ಪಾಂಡೆ ಅವರಿಗೆ ಸ್ಲೆಡ್ಜ್ ಮಾಡಲು ಹೋದ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ತಾವೇ ಕೈಸುಟ್ಟುಕೊಂಡರು. ಮೂರನೇ ಓವರ್ನ ಮೊಹಮ್ಮದ್ ಸಿರಾಜ್ ಬೌಲಿಂಗ್ನ ಎರಡನೇ ಎಸೆತದಲ್ಲಿ ಮನೀಶ್ ಪಾಂಡೆಗೆ ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಈ ವೇಳೆ ಕೊಹ್ಲಿ 'ಇವತ್ತು ಇವನ ಆಟ ನಡೆಯಲ್ಲ', ಇವನ ಬ್ಯಾಟ್ನಿಂದ ಯಾವುದೆ ಶಾಟ್ ಬರಲ್ಲ ಎಂದು ಸ್ಲೆಡ್ಜ್ ಮಾಡಿದರು.
ಆದರೆ, ಇದಕ್ಕೆ ಸರಿಯಾಗಿ ತಿರುಗೇಟು ನೀಡಿದ ಪಾಂಡೆ, ನಾಲ್ಕನೇ ಎಸೆತದಲ್ಲಿ ಚೆಂಡನ್ನು ಸಿಕ್ಸರ್ಗೆ ಅಟ್ಟಿ ಕೊಹ್ಲಿ ಬಾಯಿಮುಚ್ಚಿಸಿದರು. ಸದ್ಯ ಈ ವಿಡಿಯೋ ತುಣುಕು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.
— Simran (@CowCorner9) November 7, 2020
IPL 2020, RCB: ಎಲಿಮಿನೇಟರ್ನಲ್ಲಿ ಸೋತ ಆರ್ಸಿಬಿಗೆ ಸಿಕ್ಕಿದ್ದು ಒಟ್ಟು ಎಷ್ಟು ಹಣ ಗೊತ್ತೇ?: ಇಲ್ಲಿದೆ ಮಾಹಿತಿ
ಸುಲಭ ಟಾರ್ಗೆಟ್ ಬೆನ್ನಟ್ಟಿದ ಎಸ್ಆರ್ಹೆಚ್ ಕೂಡ ಆರಂಭದಲ್ಲಿ ಮುಗ್ಗರಿಸಿತಾದರೂ ನಂತರದಲ್ಲಿ ಕ್ರೀಸ್ ಕಚ್ಚಿ ಆಡಿದ ಕೇನ್ ವಿಲಿಯಮ್ಸನ್ ಭರ್ಜರಿ ಅರ್ಧಶತಕ ಸಿಡಿಸಿ ಜೇಸನ್ ಹೋಲ್ಡರ್ ಜೊತೆಗೂಡಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಈ ಮೂಲಕ ಹೈದರಾಬಾದ್ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ