SRH vs RCB: ಚೊಚ್ಚಲ ಪಂದ್ಯದಲ್ಲೇ ಒಂದಲ್ಲಾ ಎರಡಲ್ಲಾ ಮೂರು ದಾಖಲೆ ಬರೆಯಲು ಕಿಂಗ್ ಕೊಹ್ಲಿ ರೆಡಿ

IPL 2020, SRH vs RCB: ಸಾಕಷ್ಟು ವಿಚಾರಗಳಿಂದ ಇಂದಿನ ಪಂದ್ಯ ರೋಚಕತೆ ಪಡೆದಿದೆ. ರಾಯಲ್ ಚಾಜೆಂಜರ್ಸ್​ ಬೆಂಗಳೂರು ಅಭಿಮಾನಿಗಳಂತು ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್​​ ಬ್ಯಾಟಿಂಗ್ ನೋಡಲು ಹಾತೊರೆಯುತ್ತಿದ್ದಾರೆ.

ವಿರಾಟ್ ಕೊಹ್ಲಿ.

ವಿರಾಟ್ ಕೊಹ್ಲಿ.

 • Share this:
  ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಬಹುನಿರೀಕ್ಷಿತ ಪಂದ್ಯ ಇಂದು ದುಬೈನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಡೇವಿಡ್ ವಾರ್ನರ್ ನಾಯಕನಾಗಿರುವ ಸನ್​ರೈಸರ್ಸ್​ ಹೈದರಾಬಾದ್ ತಂಡ ಐಪಿಎಲ್ 2020 ಮೂರನೇ ಪಂದ್ಯದಲ್ಲಿ ಮುಖಾಮುಖಿ ಆಗುತ್ತಿದೆ. ಉಭಯ ತಂಡಗಳು ಸಾಕಷ್ಟು ಬಲಿಷ್ಠವಾಗಿದ್ದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಈ ಪಂದ್ಯ ಸಾಕಷ್ಟು ಮಹತ್ವದ್ದಾಗಿದೆ. ಯಾಕೆ ಅಂತೀರಾ?.

  ಇಂದಿನ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಒಂದಲ್ಲಾ ಎರಡಲ್ಲ ಮೂರು ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಹೌದು, ವಾರ್ನರ್ ಪಡೆಯನ್ನು ಆರ್​ಸಿಬಿ ಬಗ್ಗುಬಡಿದರೆ ವಿರಾಟ್ ಕೊಹ್ಲಿ ಆರ್​ಸಿಬಿ ನಾಯಕನಾಗಿ 50ನೇ ಪಂದ್ಯವನ್ನು ಗೆದ್ದ ಸಾಧನೆ ಮಾಡಲಿದ್ದಾರೆ.

  Danish Sait: ನಿಮ್ಮ ಬಳಿ ಕಪ್​ ಇಲ್ಲವೆ ಎಂದ ಚೆನ್ನೈ ಅಭಿಮಾನಿಗೆ ಮುಟ್ಟಿನೋಡುವಂಥ ಉತ್ತರ ಕೊಟ್ಟ ಕನ್ನಡಿಗ ದ್ಯಾನಿಶ್

  ಹೀಗಾಗಿ ಇಂದಿನ ಪಂದ್ಯ ಗೆದ್ದರೆ ಕೊಹ್ಲಿ ಈ ಸಾಧನೆ ಮಾಡಿದ ನಾಲ್ಕನೇ ನಾಯಕ ಆಗಲಿದ್ದಾರೆ. ಈ ಪಟ್ಟಿಯ ಮೊದಲ ಸ್ಥಾನದಲ್ಲಿ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ(101) ಅವರಿದ್ದು, ಎರಡನೇ ಸ್ಥಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡದ ಮಾಜಿ ನಾಯಕ ಗೌತಮ್ ಗಂಭೀರ್(71) ಹಾಗೂ ಮೂರನೇ ಸ್ಥಾನದಲ್ಲಿ ಮುಂಬೈ ನಾಯಕ ರೋಹಿತ್ ಶರ್ಮಾ(60) ಇದ್ದಾರೆ.

  ಇನ್ನೂ ಹೈದರಾಬಾದ್ ತಂಡದ ಪರ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರ ಎಂಬ ಖ್ಯಾತಿಯೂ ಕೊಹ್ಲಿ ಹೆಸರಿಗಾಗಲು ಕೇವಲ 20 ರನ್​ಗಳ ಅವಶ್ಯಕತೆಯಿದೆ. ಸದ್ಯ ಶೇನ್ ವಾಟ್ಸನ್ ಎಸ್​​ಆರ್​ಎಚ್ ಪರ ಗರಿಷ್ಠ ರನ್ ಕಲೆಹಾಕಿದ ಆಟಗಾರನಾಗಿದ್ದಾರೆ.

  ಅಷ್ಟೇ ಅಲ್ಲದೆ ಕೊಹ್ಲಿ ತಮ್ಮ ಬ್ಯಾಟ್​ನಿಂದ ಕೇವಲ 10 ಸಿಕ್ಸರ್ ಸಿಡಿದರೆ ಐಪಿಎಲ್​ನಲ್ಲಿ 200 ಸಿಕ್ಸ ಬಾರಿಸಿದ ದಾಖಲೆ ಮಾಡಲಿದ್ದಾರೆ. ಸದ್ಯ ಈ ಪಟ್ಟಿಯ ಮೊದಲ ಸ್ಥಾನದಲ್ಲಿ ಕ್ರಿಸ್ ಗೇಲ್(326) ಇದ್ದರೆ, ಎರಡನೇ ಸ್ಥಾನದಲ್ಲಿ ಎಬಿಡಿ ವಿಲಿಯರ್ಸ್​(212) ಹಾಗೂ ಮೂರನೇ ಸ್ಥಾನದಲ್ಲಿ ಎಂ ಎಸ್ ಧೋನಿ(209) ಇದ್ದಾರೆ.

  SRH vs RCB: ಮೊದಲ ಸವಾಲಿಗ ಆರ್​​ಸಿಬಿ ರೆಡಿ: ಕೊಹ್ಲಿ ಪಡೆಯಲ್ಲಿ ಕಣಕ್ಕಿಳಿಯುವವರು ಯಾರು?, ಇಲ್ಲಿದೆ ಮಾಹಿತಿ

  ಒಟ್ಟಾರೆ ಸಾಕಷ್ಟು ವಿಚಾರಗಳಿಂದ ಇಂದಿನ ಪಂದ್ಯ ರೋಚಕತೆ ಪಡೆದಿದೆ. ಆರ್​ಸಿಬಿ ಅಭಿಮಾನಿಗಳಂತು ಕೊಹ್ಲಿ, ಎಬಿಡಿ ಬ್ಯಾಟಿಂಗ್ ನೋಡಲು ಹಾತೊರೆಯುತ್ತಿದ್ದಾರೆ. ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದ್ದು, 7:30ಕ್ಕೆ ಪಂದ್ಯ ಆರಂಭವಾಗಲಿದೆ.

  2016ರಲ್ಲಿ ಆರ್​ಸಿಬಿ ಫೈನಲ್​ಗೆ ಏರಿತ್ತು. ಅದಾದ ನಂತರದ ಮೂರು ಆವೃತ್ತಿಗಳಲ್ಲಿ ಆರ್​ಸಿಬಿ ಹೀನಾಯ ಪ್ರದರ್ಶನ ನೀಡುವ ಮೂಲಕ ಈ ಸಲ ಕಪ್​ ನಮ್ದೇ ಎನ್ನುತ್ತಿದ್ದ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಹೀಗಾಗಿ, ಈ ಬಾರಿ ಕಪ್​ ಎತ್ತುವ ತವಕದಲ್ಲಿ ಆರ್​ಸಿಬಿ ಇದೆ.

  ಈವರೆಗೆ ಐಪಿಎಲ್​ನಲ್ಲಿ ಆರ್​ಸಿಬಿ ಹಾಗೂ ಸನ್​ರೈಸರ್ಸ್​ 14 ಬಾರಿ ಮುಖಾಮುಖಿ ಆಗಿದೆ. ಆರ್​ಸಿಬಿ 6 ಹಾಗೂ ಸನ್​ರೈಸರ್ಸ್​ 7 ಪಂದ್ಯವನ್ನು ಗೆದ್ದರೆ, ಒಂದು ಪಂದ್ಯ ರದ್ದಾಗಿದೆ. ಹೀಗಾಗಿ, ಬಲಾಬಲದಲ್ಲಿ ಇಬ್ಬರೂ ಬಹುತೇಕ ಸಮವಾಗಿದ್ದಾರೆ.
  Published by:Vinay Bhat
  First published: