IPL

  • associate partner
HOME » NEWS » Ipl » IPL 2020 SRH VS KXIP SIMILAR STRENGTHS AND WEAKNESSES IN FOCUS WHEN KINGS XI PUNJAB TAKE ON SUNRISERS HYDERABAD VB

SRH vs KXIP: ಗೆಲುವಿಗಾಗಿ ಹಾತೊರೆಯುತ್ತಿರುವ ಪಂಜಾಬ್-ಹೈದರಾಬಾದ್ ನಡುವೆ ಇಂದು ಹೈವೋಲ್ಟೇಜ್ ಪಂದ್ಯ!

ನಾಯಕ ವಾರ್ನರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಆದರೂ ಇವರಿಗೆ ಜೋಡಿಯಾಗಿರುವ ಜಾನಿ ಬೈರ್​ಸ್ಟೋ ಬ್ಯಾಟ್​ನಿಂದ ರನ್ ಬರುತ್ತಿಲ್ಲ. ಮನೀಶ್ ಪಾಂಡೆ ಉತ್ತಮ ಇನ್ನಿಂಗ್ಸ್​ ಕಟ್ಟುವಲ್ಲಿ ವಿಫಲರಾಗಿದ್ದಾರೆ.

news18-kannada
Updated:October 8, 2020, 1:55 PM IST
SRH vs KXIP: ಗೆಲುವಿಗಾಗಿ ಹಾತೊರೆಯುತ್ತಿರುವ ಪಂಜಾಬ್-ಹೈದರಾಬಾದ್ ನಡುವೆ ಇಂದು ಹೈವೋಲ್ಟೇಜ್ ಪಂದ್ಯ!
SRHvKXIP
  • Share this:
13ನೇ ಆವೃತ್ತಿಯ ಐಪಿಎಲ್​ನ 22ನೇ ಪಂದ್ಯದಲ್ಲಿಂದು ಡೇವಿಡ್ ವಾರ್ನರ್ ನಾಯಕತ್ವದ ಸನ್​ರೈಸರ್ಸ್​ ಹೈದರಾಬಾದ್ ಹಾಗೂ ಕೆ. ಎಲ್ ರಾಹುಲ್ ನೇತೃತ್ವದ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡ ಮುಖಾಮುಖಿ ಆಗುತ್ತಿದೆ. ಸೋಲಿನಿಂದ ಕಂಗೆಟ್ಟಿರುವ ಉಭಯ ತಂಡಗಳಿಗೆ ಈ ಪಂದ್ಯ ಮುಖ್ಯವಾಗಿದ್ದು, ಮುಂದಿನ ಹಾದಿ ಸುಗಮಗೊಳ್ಳಬೇಕಾದರೆ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಹೀಗಾಗಿ ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಮ್ಯಾಚ್ ಸಾಕಷ್ಟು ಕುತೂಹಲ ಕೆರಳಿಸಿದೆ.

ಪಂಜಾಬ್ ತಂಡ ಆಡಿರುವ 5 ಪಂದ್ಯಗಳಲ್ಲಿ ಕೇವಲ ಒಂದರಲ್ಲಷ್ಟೆ ಗೆದ್ದು ನಾಲ್ಕರಲ್ಲಿ ಸೋಲುಕಂಡಿದೆ. ಇತ್ತ ಹೈದರಾಬಾದ್ ಐದು ಪಂದ್ಯಗಳಲ್ಲಿ ಎರಡು ಗೆದ್ದು ಮೂರರಲ್ಲಿ ಸೋಲುಂಡಿದೆ. ಹೀಗಾಗಿ ಉಭಯ ತಂಡಗಳಿಗೆ ಇಂದಿನ ಪಂದ್ಯ ಮುಖ್ಯವಾಗಿದೆ.

ಕೆ. ಎಲ್ ರಾಹುಲ್ ಪಡೆ ಸಮರ್ಥ ಆಟಗಾರರನ್ನು ಹೊಂದಿದ್ದರೂ ಗೆಲುವು ಸಾಧಿಸುವಲ್ಲಿ ಎಡವುತ್ತಿದೆ. ಉಭಯ ಕನ್ನಡಿಗರಾದ ರಾಹುಲ್‌ ಹಾಗೂ ಮಯಾಂಕ್‌ ಅಗರ್ವಾಲ್‌ ಟೂರ್ನಿಯಲ್ಲಿ ಭರ್ಜರಿ ಆರಂಭ ಒದಗಿಸುತ್ತಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ನಿಕೋಲಸ್ ಪೂರನ್ ಕೂಡ ತಮ್ಮ ನೈಜ್ಯ ಆಟವಾಡುತ್ತಿದ್ದಾರೆ. ಆದರೆ, ಪಂದ್ಯವನ್ನು ಫಿನಿಶ್ ಮಾಡುವ ಆಟಗಾರ ತಂಡದಲ್ಲಿಲ್ಲ.

IPL 2020 Points Table: ಸೋತರೂ ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಉಳಿಸಿಕೊಂಡ ಚೆನ್ನೈ ಸೂಪರ್​ ಕಿಂಗ್ಸ್​

ಗ್ಲೆನ್ ಮ್ಯಾಕ್ಸ್​ವೆಲ್ ಯಾವ ಪಂದ್ಯದಲ್ಲೂ ತಂಡಕ್ಕೆ ನೆರವಾಗಲಿಲ್ಲ. ಹೀಗಾಗಿ ತಂಡದಲ್ಲಿ ಮಹತ್ವದ ಬದಲಾವಣೆ ನಿರೀಕ್ಷಿಸಲಾಗಿದೆ. ಮ್ಯಾಕ್ಸ್​ವೆಲ್ ಬದಲು ಈವರೆಗೆ ಬೆಂಚ್ ಕಾದಿರುವ ಕ್ರಿಸ್ ಗೇಲ್ ಕಣಕ್ಕಿಳಿಯುವ ಅಂದಾಜಿದೆ. ಆದರೆ, ಅವರ ಯಾವ ಕ್ರಮಾಂಕದಲ್ಲಿ ಆಡುತ್ತಾರೆ ಎಂಬುದೆ ಕುತೂಹಲ. ಪಂಜಾಬ್ ಬೌಲಿಂಗ್ ಕೂಡ ಕಳಪೆಯಾಗಿದ್ದು, ಮೊಹಮದ್ ಶಮಿ ಹೊರತುಪಡಿಸಿ ಉಳಿದ ಬೌಲರ್‌ಗಳು ಇದುವರೆಗೂ ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ.

ಇತ್ತ ಹೈದರಾಬಾದ್ ತಂಡ ಕೂಡ ಅನುಭವಿ ಆಟಗಾರರಿಂದ ಕೂಡಿದ್ದರೂ ಗೆಲುವು ಕಾಣುತ್ತಿಲ್ಲ. ಭುವನೇಶ್ವರ್ ಕುಮಾರ್ ಟೂರ್ನಿಂದಲೇ ಹೊರ ನಡೆದಿರುವುದು ತಂಡಕ್ಕೆ ಮತ್ತೊಂದು ಆಘಾತ.

IPL 2020: ಆರೆಂಜ್​, ಪರ್ಪಲ್​ ಕ್ಯಾಪ್​ ಯಾರ ಬಳಿ ಇದೆ?; ಇಲ್ಲಿದೆ ಮಾಹಿತಿ

ನಾಯಕ ವಾರ್ನರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಆದರೂ ಇವರಿಗೆ ಜೋಡಿಯಾಗಿರುವ ಜಾನಿ ಬೈರ್​ಸ್ಟೋ ಬ್ಯಾಟ್​ನಿಂದ ರನ್ ಬರುತ್ತಿಲ್ಲ. ಮನೀಶ್ ಪಾಂಡೆ ಉತ್ತಮ ಇನ್ನಿಂಗ್ಸ್​ ಕಟ್ಟುವಲ್ಲಿ ವಿಫಲರಾಗಿದ್ದಾರೆ.

ಇನ್ನೂ ಸತತವಾಗಿ ವೈಫಲ್ಯ ಅನುಭವಿಸುತ್ತಿರುವ ಕೇನ್ ವಿಲಿಯಮ್ಸನ್ ಇಂದಿನ ಪಂದ್ಯದಲ್ಲಿ ಆಡುವುದು ಅನುಮಾನ. ಇವರ ಬದಲು ಮೊಹಮ್ಮದ್ ನಬಿ ಕಣಕ್ಕಿಳಿಯಬಹುದು. ಬೌಲಿಂಗ್​ನಲ್ಲಿ ನಟರಾಜನ್ ಮತ್ತು ರಶೀದ್ ಕಾನ್ ಹೊರತುಪಡಿಸಿ ಯಾವೊಬ್ಬ ಬೌಲರ್​ಗಳು ಎದುರಾಳಿಗಳ ವಿರುದ್ಧ ಮಿಂಚುತ್ತಿಲ್ಲ.
Youtube Video

ಈವರೆಗೆ ಐಪಿಎಲ್ ಟೂರ್ನಿಯಲ್ಲಿ ಉಭಯ ತಂಡಗಳು 14 ಬಾರಿ ಮುಖಾಮುಖಿಯಾಗಿದ್ದು, 10 ಪಂದ್ಯಗಳಲ್ಲಿ ಹೈದರಾಬಾದ್​ ಜಯದ ನಗೆ ಬೀರಿದ್ರೆ, 4 ಪಂದ್ಯಗಳಲ್ಲಿ ಪಂಜಾಬ್ ಗೆಲುವು ಸಾಧಿಸಿದೆ.
Published by: Vinay Bhat
First published: October 8, 2020, 1:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories