IPL

  • associate partner
HOME » NEWS » Ipl » IPL 2020 SRH VS DC SUNRISERS HYDERABAD VS DELHI CAPITALS SRH 219 2 VB

SRH vs DC, IPL 2020: ಹೈದರಾಬಾದ್ ಬ್ಯಾಟ್ಸ್​ಮನ್​ಗಳ ಸ್ಫೋಟಕ ಆಟ: ಡೆಲ್ಲಿಗೆ 220 ರನ್ಸ್ ಟಾರ್ಗೆಟ್

IPL 2020, Sunrisers Hyderabad vs Delhi Capitals: ವಾರ್ನರ್ ನಿರ್ಗಮನದ ಬಳಿಕ ಶುರುವಾಗಿದ್ದು ಸಾಹ ಆಟ. ಮನೀಶ್ ಪಾಂಡೆ ಜೊತೆಸೇರಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ವೃದ್ದಿಮಾನ್ 14 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 170ಕ್ಕೆ ತಂದಿಟ್ಟು ಔಟ್ ಆದರು.

news18-kannada
Updated:October 27, 2020, 9:04 PM IST
SRH vs DC, IPL 2020: ಹೈದರಾಬಾದ್ ಬ್ಯಾಟ್ಸ್​ಮನ್​ಗಳ ಸ್ಫೋಟಕ ಆಟ: ಡೆಲ್ಲಿಗೆ 220 ರನ್ಸ್ ಟಾರ್ಗೆಟ್
SRH
  • Share this:
ದುಬೈ (ಅ. 27): 13ನೇ ಆವೃತ್ತಿ ಐಪಿಎಲ್​ನ 47ನೇ ಪಂದ್ಯ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್ ತಂಡ ಬೃಹತ್ ಮೊತ್ತ ಕಲೆಹಾಕಿದೆ. ವೃದ್ದಿಮಾನ್ ಸಾಹ, ಡೇವಿಡ್ ವಾರ್ನರ್ ಹಾಗೂ ಮನೀಶ್ ಪಾಂಡೆ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಎಸ್​ಆರ್​ಹೆಚ್ ತಂಡ 20 ಓವರ್​ಗಳಲ್ಲಿ 219 ರನ್ ಚಚ್ಚಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಹೈದರಾಬಾದ್ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್​ಗಳಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಹಾಗೂ ವೃದ್ದಿಮಾನ್ ಸಾಹ ಬೌಂಡರಿ-ಸಿಕ್ಸರ್​ಗಳ ಮಳೆ ಸುರಿಸಿದರು. ಕೇವಲ 6 ಓವರ್​ಗೂ ಮುನ್ನವೇ ತಂಡದ ಮೊತ್ತವನ್ನು 70ರ ಗಡಿ ದಾಟಿಸಿದರು.

ಹುಟ್ಟುಹಬ್ಬದ ದಿನ ಅಬ್ಬರಿಸಿದ ವಾರ್ನರ್ ಕೇವಲ 25 ಎಸೆತಗಳಲ್ಲಿ 50 ರನ್ ಪೂರೈಸಿದರು. ಇವರ ಸ್ಫೋಟಕ ಆಟಕ್ಕೆ ಬ್ರೇಕ್ ಹಾಕಿದ್ದು ಆರ್. ಅಶ್ವಿನ್. 10ನೇ ಓವರ್​ನಲ್ಲಿ ಸಿಕ್ಸ್​ ಸಿಡಿಸುವಲ್ಲಿ ಎಡವಿದ ಡೇವಿಡ್ 34 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ 66 ರನ್ ಚಚ್ಚಿದರು.


ವಾರ್ನರ್ ನಿರ್ಗಮನದ ಬಳಿಕ ಶುರುವಾಗಿದ್ದು ಸಾಹ ಆಟ. ಮನೀಶ್ ಪಾಂಡೆ ಜೊತೆಸೇರಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ವೃದ್ದಿಮಾನ್ 14 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 170ಕ್ಕೆ ತಂದಿಟ್ಟು ಔಟ್ ಆದರು. ಸಾಹ ಸ್ಫೋಟಕ ಆಟದಲ್ಲಿ 12 ಬೌಂಡರಿ, 2 ಸಿಕ್ಸರ್ ಸೇರಿ 87 ರನ್ ಬಾರಿಸಿದರು.

ಬಳಿಕ ಕೇನ್ ವಿಲಿಯಮ್ಸನ್ ಜೊತೆಯಾದ ಪಾಂಡೆ ಮತ್ತೊಂದು ಅಮೋಘ ಇನ್ನಿಂಗ್ಸ್​ ಕಟ್ಟಿದರು. ಮನೀಶ್ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದರೆ, ಕೇನ್ ಉತ್ತಮ ಸಾತ್ ನೀಡಿದರು. ಅಂತಿಮವಾಗಿ ಹೈದರಾಬಾದ್ 20 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತು. ಪಾಂಡೆ 31 ಎಸೆತಗಳಲ್ಲಿ ಅಜೇಯ 44 ಹಾಗೂ ಕೇನ್ ಅಜೇಯ 11 ರನ್ ಗಳಿಸಿದರು. ಡೆಲ್ಲಿ ಪರ ಆರ್. ಅಶ್ವಿನ್ ಹಾಗೂ ಆನ್ರಿಚ್ ನಾರ್ಟ್ಜೆ ತಲಾ 1 ವಿಕೆಟ್ ಪಡೆದರು.

ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್, ಶಿಮ್ರೋನ್ ಹೆಟ್ಮೇರ್, ಮಾರ್ಕಸ್ ಸ್ಟೊಯಿನಿಸ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ತುಷಾರ್ ದೇಶಪಾಂಡೆ, ಕಗಿಸೊ ರಬಡಾ, ಆನ್ರಿಚ್ ನಾರ್ಟ್ಜೆ.

ಸನ್​ರೈಸರ್ಸ್​ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಕೇನ್ ವಿಲಿಯಮ್ಸನ್, ಮನೀಷ್ ಪಾಂಡೆ, ವಿಜಯ್ ಶಂಕರ್, ವೃದ್ದಿಮಾನ್ ಸಾಹ, ಜೇಸನ್ ಹೋಲ್ಡರ್, ಶಹ್ಬಾಜ್ ನದೀಂ, ರಶೀದ್ ಖಾನ್, ಅಬ್ದುಲ್ ಸಮದ್, ಸಂದೀಪ್ ಶರ್ಮಾ, ಟಿ. ನಟರಾಜನ್.
Published by: Vinay Bhat
First published: October 27, 2020, 9:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories