IPL

  • associate partner
HOME » NEWS » Ipl » IPL 2020 SRH VS DC PREVIEW IYERS DELHI NEED TO BOUNCE BACK TO SEAL PLAY OFF BERTH VB

IPL 2020, SRH vs DC: ವಾರ್ನರ್ ಪಡೆಗೆ ಗೆದ್ದರಷ್ಟೆ ಉಳಿಗಾಲ: ಡೆಲ್ಲಿ ಗೆದ್ದರೆ ಪ್ಲೇ ಆಫ್ ಖಚಿತ

ಇಂಜುರಿಯಿಂದ ಕಮ್​ಬ್ಯಾಕ್ ಮಾಡಿದ ಬಳಿಕ ರಿಷಭ್ ಪಂತ್ ಬ್ಯಾಟ್ ಕೂಡ ಸದ್ದು ಮಾಡುತ್ತಿಲ್ಲ. ಹೀಗಾಗಿ ಬ್ಯಾಟ್ಸ್​ಮನ್​ಗಳು ಅಬ್ಬರಿಸಬೇಕಾದ ಅಗತ್ಯವಿದೆ.

news18-kannada
Updated:October 27, 2020, 1:52 PM IST
IPL 2020, SRH vs DC: ವಾರ್ನರ್ ಪಡೆಗೆ ಗೆದ್ದರಷ್ಟೆ ಉಳಿಗಾಲ: ಡೆಲ್ಲಿ ಗೆದ್ದರೆ ಪ್ಲೇ ಆಫ್ ಖಚಿತ
SRH vs DC
  • Share this:
ದುಬೈ (ಅ. 27): 13ನೇ ಆವೃತ್ತಿಯ ಐಪಿಎಲ್​ನಲ್ಲಿಂದು ನಡೆಯಲಿರುವ 47ನೇ ಪಂದ್ಯದಲ್ಲಿ ಡೇವಿಡ್ ವಾರ್ನರ್ ನಾಯಕತ್ವದ ಸನ್​ರೈಸರ್ಸ್​ ಹೈದರಾಬಾದ್ ಹಾಗೂ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಮುಖಾಮುಖಿ ಆಗಲಿವೆ. ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಎಸ್​ಆರ್​ಹೆಚ್​ಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಇತ್ತ ಡೆಲ್ಲಿ ಗೆದ್ದರೆ ಅಗ್ರಸ್ಥಾನಕ್ಕೇರಿ ಪ್ಲೇ ಆಫ್ ಹಂತವನ್ನು ಖಚಿತಪಡಿಸಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಆಡಿರುವ 11 ಪಂದ್ಯಗಳ ಪೈಕಿ 7ರಲ್ಲಿ ಗೆಲುವು ಸಾಧಿಸಿ, ನಾಲ್ಕರಲ್ಲಿ ಸೋಲುಂಡಿದೆ. ಸದ್ಯ 2ನೇ ಸ್ಥಾನದಲ್ಲಿದೆ. ಇತ್ತ ಹೈದರಾಬಾದ್ 11 ಪಂದ್ಯಗಳಲ್ಲಿ ಕೇವಲ 4ರಲ್ಲಿ ಜಯ ಸಾಧಿಸಿ 7 ಪಂದ್ಯಗಳಲ್ಲಿ ಸೋಲು ಕಂಡಿದೆ. ಅಯ್ಯರ್ ಪಡೆ ಈ ಹಿಂದಿನ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವುದು ತಂಡಕ್ಕೆ ಸ್ವಲ್ಪ ಹಿನ್ನಡೆಯಾಗಿದೆ. ಆದರೆ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರುವ ಇರಾದೆಯಲ್ಲಿದೆ.

IPL 2020: ವರುಣ್ ಚಕ್ರವರ್ತಿ ಪ್ರದರ್ಶನದಿಂದ ನಾನು ಪ್ರಭಾವಿತನಾಗಿದ್ದೇನೆ; ಸಚಿನ್ ತೆಂಡೂಲ್ಕರ್​


ಡೆಲ್ಲಿ ಪರ ಬ್ಯಾಟ್ಸ್​ಮನ್​ಗಳು ಮತ್ತೊಮ್ಮೆ ವೈಫಲ್ಯ ಅನುಭವಿಸುತ್ತಿದ್ದಾರೆ. ಅಜಿಂಕ್ಯಾ ರಹಾನೆ ಫಾರ್ಮ್​ನಲ್ಲಿಲ್ಲ. ನಾಯಕ ಶ್ರೇಯಸ್ ಅಯ್ಯರ್ ಕೂಡ ಮಂಕಾಗಿದ್ದಾರೆ. ಇಂಜುರಿಯಿಂದ ಕಮ್​ಬ್ಯಾಕ್ ಮಾಡಿದ ಬಳಿಕ ರಿಷಭ್ ಪಂತ್ ಬ್ಯಾಟ್ ಕೂಡ ಸದ್ದು ಮಾಡುತ್ತಿಲ್ಲ. ಹೀಗಾಗಿ ಬ್ಯಾಟ್ಸ್​ಮನ್​ಗಳು ಅಬ್ಬರಿಸಬೇಕಾದ ಅಗತ್ಯವಿದೆ. ಬೌಲಿಂಗ್ ವಿಭಾಗವೂ ಬಲಿಷ್ಠವಾಗಬೇಕಿದೆ. ಇಂದಿನ ಪಂದ್ಯಕ್ಕೆ ತಂಡದಲ್ಲಿ ಪ್ರಮುಖ ಬದಲಾವಣೆ ನಿರೀಕ್ಷಿಸಲಾಗಿದೆ.

ಇತ್ತ ಉಳಿದಿರುವ ಮೂರು ಪಂದ್ಯವನ್ನೂ ಗೆದ್ದರು ಹೈದರಾಬಾದ್ ಪ್ಲೇ ಆಫ್​ಗೆ ಏರುವುದು ಖಚಿತವಿಲ್ಲ. ಇತರೆ ತಂಡಗಳ ಪ್ರದರ್ಶನದ ಮೇಲೆ ವಾರ್ನರ್ ಪಡೆಯ ಭವಿಷ್ಯ ನಿರ್ಧಾರವಾಗಲಿದೆ. ಮಧ್ಯಮ ಕ್ರಮಾಂಕವೇ ಎಸ್​ಆರ್​ಹೆಚ್​ಗೆ ಮುಳುವಾಗಿದೆ. ಆರಂಭದಲ್ಲಿ ವಾರ್ನರ್, ಬೈರ್​ಸ್ಟೋ, ಮನೀಶ್ ಪಾಂಡೆ ಹಾಗೂ ವಿಜಯ್ ಶಂಕರ್ ಬಿಟ್ಟರೆ ನಂತರದ ಸ್ಥಾನದಲ್ಲಿ ಅಬ್ಬರಿಸುವ ಬ್ಯಾಟ್ಸ್​ಮನ್ ಯಾರೂ ಇಲ್ಲ.

Mandeep Singh: ಅಪ್ಪನನ್ನು ಕಳೆದುಕೊಂಡ ನೋವಿನಲ್ಲೇ ಅಬ್ಬರಿಸಿದ ಮಂದಿಪ್​ ಸಿಂಗ್; ಅರ್ಧಶತಕವನ್ನು ತಂದೆಗೆ ಅರ್ಪಿಸಿದ KXIP​ ಆಟಗಾರ

ಜೇಸನ್ ಹೋಲ್ಡರ್ ಬೌಲಿಂಗ್​ನಲ್ಲಿ ಕಮಾಲ್ ಮಾಡುತ್ತಿದ್ದಾರೆ ಬಿಟ್ಟರೆ ಬ್ಯಾಟಿಂಗ್​ನಲ್ಲಿ ಲಾಭತಂದಿಲ್ಲ. ಬೌಲಿಂಗ್​ನಲ್ಲಿ ಹೈದರಾಬಾದ್ ಅಷ್ಟೊಂದು ಮಾರಕವಾಗಿ ಗೋಚರಿಸುತ್ತಿಲ್ಲ. ಇಂದಿನ ಪಂದ್ಯ ಗೆಲ್ಲಲೇ ಬೇಕಾಗಿರುವುದರಿಂದ ಪ್ಲೇಯಿಂಗ್ 11 ನಲ್ಲಿ ಬದಲಾವಣೆ ಆಗುವುದು ಖಚಿತ.
Youtube Video

ಉಭಯ ತಂಡಗಳು ಈವರೆಗೆ ಐಪಿಎಲ್​ನಲ್ಲಿ ಒಟ್ಟು 16 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 6 ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ತಂಡ 10 ಪಂದ್ಯಗಳಲ್ಲಿ ಜಯ ಸಾಧಿಸಿದ ಇತಿಹಾಸವಿದೆ.
Published by: Vinay Bhat
First published: October 27, 2020, 1:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories