IPL

  • associate partner

SRH vs DC, IPL 2020: ಬ್ಯಾಟಿಂಗ್-ಬೌಲಿಂಗ್​ನಲ್ಲಿ ಎಸ್​ಆರ್​ಹೆಚ್ ಮಿಂಚು: ವಾರ್ನರ್ ಹುಟ್ಟುಹಬ್ಬಕ್ಕೆ ಗೆಲುವಿನ ಉಡುಗೊರೆ

IPL 2020, Sunrisers Hyderabad vs Delhi Capitals: ಹುಟ್ಟುಹಬ್ಬದ ದಿನ ಅಬ್ಬರಿಸಿದ ವಾರ್ನರ್ ಕೇವಲ 25 ಎಸೆತಗಳಲ್ಲಿ 50 ರನ್ ಪೂರೈಸಿದರು. ಬಳಿಕ ಶುರುವಾಗಿದ್ದು ಸಾಹ ಆಟ. ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ವೃದ್ದಿಮಾನ್ 14 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 170ಕ್ಕೆ ತಂದಿಟ್ಟರು.

news18-kannada
Updated:October 27, 2020, 10:59 PM IST
SRH vs DC, IPL 2020: ಬ್ಯಾಟಿಂಗ್-ಬೌಲಿಂಗ್​ನಲ್ಲಿ ಎಸ್​ಆರ್​ಹೆಚ್ ಮಿಂಚು: ವಾರ್ನರ್ ಹುಟ್ಟುಹಬ್ಬಕ್ಕೆ ಗೆಲುವಿನ ಉಡುಗೊರೆ
SRH
  • Share this:
ದುಬೈ (ಅ. 27): ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 47ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್ ತಂಡ ಭರ್ಜರಿ ಗೆಲುವು ಕಂಡಿದೆ. ಬ್ಯಾಟಿಂಗ್-ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ತೋರಿದ ವಾರ್ನರ್ ಪಡೆ 88 ರನ್​ಗಳ ಜಯ ಸಾಧಿಸಿ ಪ್ಲೇ ಆಫ್ ರೇಸ್​ಗೆ ಕಾಲಿಟ್ಟಿದೆ. ಇತ್ತ ಡೆಲ್ಲಿ 5ನೇ ಸೋಲುಕಂಡಿದೆ.

ಹೈದರಾಬಾದ್ ನೀಡಿದ್ದ 220 ರನ್​ಗಳ ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಅಜಿಂಕ್ಯಾ ರಹಾನೆ ಜೊತೆ ಓಪನರ್ ಆಗಿ ಕಣಕ್ಕಿಳಿದ ಶಿಖರ್ ಧವನ್ ಶೂನ್ಯಕ್ಕೆ ನಿರ್ಗಮಿಸಿದರೆ ಟಾಪ್ ಆರ್ಡರ್​ನಲ್ಲಿ ಕಣಕ್ಕಿಳಿಸಿದ ಮಾರ್ಕಸ್ ಸ್ಟಾಯಿನಿಸ್ 5 ರನ್​ಗೆ ಔಟ್ ಆದರು. ಹೆಟ್ಮೇರ್ ಆಟ 16 ರನ್​ಗೆ ಅಂತ್ಯವಾಯಿತು.

ಅಡಲೇ ಬೇಕಾದ ಪಂದ್ಯದಲ್ಲಿ ಮತ್ತೆ ವೈಫಲ್ಯ ಅನುಭವಿಸಿದ ರಹಾನೆ 19 ಎಸೆತಗಳಲ್ಲಿ 26 ರನ್ ಗಳಿಸಿ ಬ್ಯಾಟ್ ಕೆಳಗಿಟ್ಟರು. ನಾಯಕ ಶ್ರೇಯಸ್ ಅಯ್ಯರ್ ಕೂಡ 7 ರನ್​ ಹಾಗೂ ಅಕ್ಷರ್ ಪಟೇಲ್ ಕೇವಲ 1 ರನ್​ಗೆ ಸುಸ್ತಾದರು. ರಿಷಭ್ ಪಂತ್ ಹೋರಾಟ 36(35 ಎಸೆತ) ರನ್​ಗೆ ಕೊನೆಗೊಂಡಿತು. ತುಶಾರ್ ದೇಶಪಾಂಡೆ 9 ಎಸೆತಗಳಲ್ಲಿ ಅಜೇಯ 20 ರನ್ ಗಳಿಸಿದರು.




ಅಂತಿಮವಾಗಿ ಡೆಲ್ಲಿ 19 ಓವರ್​ಗಳಲ್ಲಿ 131 ರನ್​ಗೆ ಸರ್ವಪತನ ಕಂಡಿತು. ಎಸ್​ಆರ್​ಹೆಚ್ ಪರ ಮಾರಕ ದಾಳಿ ಸಂಘಟಿಸಿದ ರಶೀದ್ ಖಾನ್ 4 ಓವರ್​ಗೆ ಕೇವಲ 7 ರನ್ ನೀಡಿ 3 ವಿಕೆಟ್ ಕಿತ್ತರೆ, ಸಂದೀಪ್ ಶರ್ಮಾ ಮತ್ತು ಟ. ನಟರಾಜನ್ 2, ವಿಜಯ್ ಶಂಕರ್, ಜೇಸನ್ ಹೋಲ್ಡರ್ ಹಾಗೂ ಶಹ್ಬಾಜ್ ನದೀಂ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಹೈದರಾಬಾದ್ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್​ಗಳಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಹಾಗೂ ವೃದ್ದಿಮಾನ್ ಸಾಹ ಬೌಂಡರಿ-ಸಿಕ್ಸರ್​ಗಳ ಮಳೆ ಸುರಿಸಿದರು. ಕೇವಲ 6 ಓವರ್​ಗೂ ಮುನ್ನವೇ ತಂಡದ ಮೊತ್ತವನ್ನು 70ರ ಗಡಿ ದಾಟಿಸಿದರು.

ಹುಟ್ಟುಹಬ್ಬದ ದಿನ ಅಬ್ಬರಿಸಿದ ವಾರ್ನರ್ ಕೇವಲ 25 ಎಸೆತಗಳಲ್ಲಿ 50 ರನ್ ಪೂರೈಸಿದರು. ಇವರ ಸ್ಫೋಟಕ ಆಟಕ್ಕೆ ಬ್ರೇಕ್ ಹಾಕಿದ್ದು ಆರ್. ಅಶ್ವಿನ್. 10ನೇ ಓವರ್​ನಲ್ಲಿ ಸಿಕ್ಸ್​ ಸಿಡಿಸುವಲ್ಲಿ ಎಡವಿದ ಡೇವಿಡ್ 34 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ 66 ರನ್ ಚಚ್ಚಿದರು.





ವಾರ್ನರ್ ನಿರ್ಗಮನದ ಬಳಿಕ ಶುರುವಾಗಿದ್ದು ಸಾಹ ಆಟ. ಮನೀಶ್ ಪಾಂಡೆ ಜೊತೆಸೇರಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ವೃದ್ದಿಮಾನ್ 14 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 170ಕ್ಕೆ ತಂದಿಟ್ಟು ಔಟ್ ಆದರು. ಸಾಹ ಸ್ಫೋಟಕ ಆಟದಲ್ಲಿ 12 ಬೌಂಡರಿ, 2 ಸಿಕ್ಸರ್ ಸೇರಿ 87 ರನ್ ಬಾರಿಸಿದರು.

ಬಳಿಕ ಕೇನ್ ವಿಲಿಯಮ್ಸನ್ ಜೊತೆಯಾದ ಪಾಂಡೆ ಮತ್ತೊಂದು ಅಮೋಘ ಇನ್ನಿಂಗ್ಸ್​ ಕಟ್ಟಿದರು. ಮನೀಶ್ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದರೆ, ಕೇನ್ ಉತ್ತಮ ಸಾತ್ ನೀಡಿದರು. ಅಂತಿಮವಾಗಿ ಹೈದರಾಬಾದ್ 20 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತು. ಪಾಂಡೆ 31 ಎಸೆತಗಳಲ್ಲಿ ಅಜೇಯ 44 ಹಾಗೂ ಕೇನ್ ಅಜೇಯ 11 ರನ್ ಗಳಿಸಿದರು. ಡೆಲ್ಲಿ ಪರ ಆರ್. ಅಶ್ವಿನ್ ಹಾಗೂ ಆನ್ರಿಚ್ ನಾರ್ಟ್ಜೆ ತಲಾ 1 ವಿಕೆಟ್ ಪಡೆದರು.
Published by: Vinay Bhat
First published: October 27, 2020, 10:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading