ದುಬೈ (ಅ. 13): ಐಪಿಎಲ್ನಲ್ಲಿ ಇಂದು ನಡೆಯಲಿರುವ 29ನೇ ಪಂದ್ಯದಲ್ಲಿ ಡೇವಿಡ್ ವಾರ್ನರ್ ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್ ಹಾಗೂ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣೆಸಾಟ ನಡೆಸಲಿವೆ. ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದ್ದು ಗೆಲ್ಲಲೇ ಬೇಕಾದ ಒತ್ತಡದಲ್ಲಿ ಉಭಯ ತಂಡಗಳಿರುವ ಕಾರಣ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.
ಐಪಿಎಲ್ನ ಮೂರು ಬಾರಿ ಚಾಂಪಿಯನ್ ಆಗಿದ್ದ ಸಿಎಸ್ಕೆ ಈ ಬಾರಿ ಮಾತ್ರ ಹಿಂದೆಂದೂ ನೀಡದ ಕಳಪೆ ಪ್ರದರ್ಶನ ತೋರುತ್ತಿದೆ. ಏಳು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಧೋನಿ ಪಡೆ ಪ್ಲೇ ಆಫ್ ಹಂತಕ್ಕೆ ತಲುಪಬೇಕಾದರೆ ಗೆಲುವೊಂದೇ ಮಾರ್ಗವಾಗಿದೆ.
ಇಂದಿನ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ಸೋತರೆ ಧೋನಿ ಬಳಗದ ಮುಂದಿನ ಹಾದಿ ಬಹುತೇಕ ಅಂತ್ಯವಾಗಲಿದೆ. ಹೀಗಾಗಿ ಸಿಎಸ್ಕೆಗೆ ಈ ಪಂದ್ಯ ಅಗ್ನಿಪರೀಕ್ಷೆಯಾಗಿದೆ. ಮುಂದಿನ 7 ಪಂದ್ಯಗಳಲ್ಲಿ ಕನಿಷ್ಠ 6ರಲ್ಲಿ ಜಯಿಸಬೇಕಾದ ಒತ್ತಡದಲ್ಲಿರುವ ಸಿಎಸ್ಕೆ ಪಾಲಿಗೆ ಪ್ರತಿ ಪಂದ್ಯವೂ ಪ್ರಮುಖವಾಗಿದೆ.
RCB vs KKR: ಕೆಕೆಆರ್ ವಿರುದ್ಧ ಆರ್ಸಿಬಿ ಗೆಲ್ಲೋಕೆ ಸಿರಾಜ್ ಮಾಡಿದ ಆ ಒಂದು ಚಮತ್ಕಾರ ಕಾರಣ
ಶೇನ್ ವಾಟ್ಸನ್, ಫಾಫ್ ಡುಪ್ಲೆಸಿಸ್, ಅಂಬಟಿ ರಾಯುಡು, ಎಂ ಎಸ್ ಧೋನಿ, ಡ್ವೇನ್ ಬ್ರಾವೋ ಹೀಗೆ ವಿಶ್ವ ಶ್ರೇಷ್ಠ ಆಟಗಾರರು ತಂಡದಲ್ಲಿದ್ದರೂ ಚೆನ್ನೈಗೆ ಗೆಲುವು ಒಲಿಯುತ್ತಿಲ್ಲ.
ರವೀಂದ್ರ ಜಡೇಜಾ, ಡ್ವೇನ್ ಬ್ರಾವೋನಂತಹ ಆಲ್ರೌಂಡರ್ಗಳು ಕೂಡ ತಂಡಕ್ಕೆ ಗೆಲುವು ತರಲು ಹಾಕುತ್ತಿರುವ ಶ್ರಮ ಸಫಲವಾಗುತ್ತಿಲ್ಲ. ಬೌಲರ್ಗಳು ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಬ್ಯಾಟ್ಸ್ಮನ್ಗಳು ಸಂಪೂರ್ಣ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ.
ಇತ್ತ ಸನ್ರೈಸರ್ಸ್ ಹೈದರಾಬಾದ್ ಗೆಲುವಿನ ಹಳಿಗೇರುವ ತವಕದಲ್ಲಿದೆ. ಸದ್ಯ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ವಾರ್ನರ್ ಪಡೆ, ಮುಂದಿನ ಪಂದ್ಯಗಳನ್ನು ಒತ್ತಡ ರಹಿತವಾಗಿ ಆಡುವ ದೃಷ್ಟಿಯಿಂದ ಗೆಲುವು ಅನಿವಾರ್ಯವಾಗಿದೆ.
IPL 2020: ಈ ಬಾರಿ ಆರೆಂಜ್ ಕ್ಯಾಪ್ ಧರಿಸಿರುವ ರಾಹುಲ್ ಗಳಿಸಿದ ರನ್ಗಳೆಷ್ಟು ಗೊತ್ತಾ?
ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಸ್ಆರ್ಹೆಚ್ ಮತ್ತೆ ಎಡವುತ್ತಿದೆ. ಕಳೆದ ಪಂದ್ಯದಲ್ಲಿ ಮನೀಶ್ ಪಾಂಡೆ ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ವಾರ್ನರ್ ಕೂಡ ಉತ್ತಮ ಆಟವಾಡಿದ್ದರು. ಕೇನ್ ವಿಲಿಮ್ಸನ್ ನಿರೀಕ್ಷೆಗೆ ತಕ್ಕಂತೆ ಆಡುತ್ತಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಅನುಭವಿಗಳ ಕೊರತೆ ಎದ್ದು ಕಾಣುತ್ತಿದೆ.
ಭುವನೇಶ್ವರ್ ಕುಮಾರ್ ಅಲಭ್ಯತೆಯಿಂದಾಗಿ ಟಿ.ನಟರಾಜನ್, ಖಲೀಲ್ ಅಹಮದ್ ಅವರ ಮೇಲೆ ಒತ್ತಡ ಹೆಚ್ಚಾಗಲಿದೆ.
ಉಭಯ ತಂಡಗಳು ಈವರೆಗೆ 13 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ 4 ಹಾಗೂ ಚೆನ್ನೈ ಸೂಪರ್ ಕಿಂಗ್ಸ್ 9 ಪಂದ್ಯಗಳಲ್ಲಿ ಗೆಲುವು ಕಂಡ ಇತಿಹಾಸವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ