ಇಂಡಿಯನ್ ಪ್ರೀಮಿಯರ್ ಲೀಗ್ನ ಬಲಿಷ್ಠ ತಂಡಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಪ್ರದರ್ಶನ ಈ ಬಾರಿ ಹೇಳಿಕೊಳ್ಳುವಂತಿಲ್ಲ. ಇದೇ ಕಾರಣದಿಂದ ಆಡಿರುವ 6 ಪಂದ್ಯಗಳಲ್ಲಿ ಕೇವಲ 2 ರಲ್ಲಿ ಮಾತ್ರ ಜಯಗಳಿಸಿದೆ. ಅದರಲ್ಲೂ KKR ಗೆಲ್ಲಬಹುದಾಗಿದ್ದ ಪಂದ್ಯವನ್ನು ಸಿಎಸ್ಕೆ ಕೈಚೆಲ್ಲಿಕೊಂಡಿತ್ತು. ತಂಡದ ಈ ಪ್ರದರ್ಶನದ ಬಗ್ಗೆ ಅನೇಕ ಮಾಜಿ ಆಟಗಾರರು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಆದರೆ ಟೀಮ್ ಇಂಡಿಯಾ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ಅವರ ಸಿಎಸ್ಕೆ ಸೋಲಿನ ವಿಶ್ಲೇಷಣೆ ಎಲ್ಲರ ಗಮನ ಸೆಳೆಯುತ್ತಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ 10 ರನ್ಗಳ ಸೋಲಿನ ಬಗ್ಗೆ ಮಾತನಾಡಿರುವ ಸೆಹ್ವಾಗ್, ಸಿಎಸ್ಕೆ ತಂಡದ ಕೆಲ ಆಟಗಾರರು ತಾವು ಸರ್ಕಾರಿ ನೌಕರರು ಎಂದು ಭಾವಿಸಿದ್ದಾರೆ. ಇದೇ ಚೆನ್ನೈ ತಂಡಕ್ಕೆ ಮುಳುವಾಗುತ್ತಿದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಕೆಕೆಆರ್ ನೀಡಿದ 168 ರನ್ಗಳ ಟಾರ್ಗೆಟ್ನ್ನು ಓಪನರ್ ಶೇನ್ ವಾಟ್ಸನ್ ಉತ್ತಮವಾಗಿ ಬೆನ್ನಟ್ಟಿದ್ದರು. ಆದರೆ ಇನ್ನೊಂದು ತುದಿಯಲ್ಲಿ ಬ್ಯಾಟ್ ಮಾಡಲು ಬಂದಿದ್ದ ಆಟಗಾರರ ನಿರುತ್ಸಾಹವೇ ಸೋಲಿಗೆ ಕಾರಣವಾಯಿತು ಎಂದಿದ್ದಾರೆ.
ಕೊನೆಯ ಹಂತದಲ್ಲಿ ರವೀಂದ್ರ ಜಡೇಜಾ ಹಾಗೂ ಕೇದರ್ ಜಾಧವ್ ಅವರು ಆಡಿದ ಡಾಟ್ ಬಾಲ್ಗಳು ತಂಡ ಫಲಿತಾಂಶದ ಮೇಲೆ ಪರಿಣಾಮ ಬೀರಿತು ಎಂದಿರುವ ಸೆಹ್ವಾಗ್, ತಂಡದಲ್ಲಿರುವ ಕೆಲವರು ಸಿಎಸ್ಕೆ ಅನ್ನು ಸರ್ಕಾರಿ ನೌಕರಿ ಎಂದು ಭಾವಿಸಿದ್ದಾರೆ. ಪ್ರದರ್ಶನ ನೀಡಿದರೂ, ಇಲ್ಲದಿದ್ದರೂ ಸಂಬಳವಂತು ಬರುತ್ತದೆ ಎಂಬುದು ಅವರಿಗೆ ತಿಳಿದಿದೆ. ಇದುವೇ ಸಿಎಸ್ಕೆ ಪರಿಸ್ಥಿತಿ ಎಂದು ಸೆಹ್ವಾಗ್ ವ್ಯಂಗ್ಯವಾಡಿದ್ದಾರೆ.
ಇನ್ನು ಗೆಲ್ಲಬಹುದಾಗಿದ್ದ ಪಂದ್ಯವನ್ನು ಸಿಎಸ್ಕೆ ಸೋಲುತ್ತಿರುವುದು ಇದು ಎರಡನೇ ಬಾರಿ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ಕೂಡ ಸಿಎಸ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳು ವಿಫಲರಾಗಿದ್ದರು. ಇದರಿಂದ ಧೋನಿ ಪಡೆ 7 ರನ್ಗಳಿಂದ ಸೋತಿತ್ತು. ಇದೀಗ ಕೆಕೆಆರ್ ವಿರುದ್ಧ ಕೂಡ 10 ರನ್ಗಳ ಸೋಲನುಭವಿಸುವ ಮೂಲಕ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL Records: ಇವರೇ ಚೊಚ್ಚಲ ಐಪಿಎಲ್ನ ಹೀರೋಗಳು..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ