RR vs MI: ಅಬ್ಬರಿಸಿದ ಪಾಂಡ್ಯ: ರಾಜಸ್ಥಾನ್ ರಾಯಲ್ಸ್​ಗೆ ಕಠಿಣ ಸವಾಲು ನೀಡಿದ ಮುಂಬೈ ಇಂಡಿಯನ್ಸ್

Rajasthan Royals vs Mumbai Indians, Latest Updates: ಐಪಿಎಲ್‌ನಲ್ಲಿ ಇದುವರೆಗೆ ಉಭಯ ತಂಡಗಳು 21 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಅದರಲ್ಲಿ ಮುಂಬೈ 11 ಪಂದ್ಯಗಳನ್ನು ಗೆದ್ದರೆ, ರಾಜಸ್ಥಾನ್ ರಾಯಲ್ಸ್ 10 ರಲ್ಲಿ ವಿಜಯ ಸಾಧಿಸಿದೆ.

Hardik Pandya

Hardik Pandya

 • Share this:
  ಅಬುಧಾಬಿಯ ಶೇಖ್ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ನ 45ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ್ ರಾಯಲ್ಸ್​ಗೆ 196 ರನ್​ಗಳ ಟಾರ್ಗೆಟ್ ನೀಡಿದೆ.  ಇದಕ್ಕೂ ಟಾಸ್ ಗೆದ್ದ ಮುಂಬೈ ಹಂಗಾಮಿ ನಾಯಕ ಕೀರನ್ ಪೊಲಾರ್ಡ್ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಈ ಬಾರಿ ಕ್ವಿಂಟನ್ ಡಿ ಕಾಕ್ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ವೈಯುಕ್ತಿಕ 6 ರನ್​ಗಳಿಸಿದ್ದ ವೇಳೆ ಡಿಕಾಕ್  ಜೋಫ್ರಾ ಆರ್ಚರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರ ನಡೆದರು.

  ಮತ್ತೊಂದೆಡೆ ಗಟ್ಟಿಯಾಗಿ ನೆಲೆಯೂರಿದ್ದ ಇಶಾನ್ ಕಿಶನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅದರೊಂದಿಗೆ ಒನ್​ಡೌನ್​ನಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ಆರಂಭದಿಂದಲೇ ಅಬ್ಬರಿಸಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆಗೆ ತಂಡದ ಮೊತ್ತ 59 ಕ್ಕೆ ಬಂದು ನಿಂತಿತು.

  ಪವರ್​ಪ್ಲೇ ಬಳಿಕ ಉತ್ತಮ ಜೊತೆಯಾಟವಾಡಿದ ಕಿಶನ್-ಸೂರ್ಯ 10 ಓವರ್​ನಲ್ಲಿ ತಂಡದ ಮೊತ್ತವನ್ನು 89ಕ್ಕೇರಿಸಿದರು. ಆದರೆ ಕಾರ್ತಿಕ್ ತ್ಯಾಗಿ ಎಸೆದ 11ನೇ ಓವರ್​ನಲ್ಲಿ ಜೋಫ್ರಾ ಆರ್ಚರ್ ಹಿಡಿದ ಅದ್ಭುತ ಕ್ಯಾಚ್​​ಗೆ ಇಶಾನ್ ಕಿಶನ್ (37) ತಮ್ಮ ಇನಿಂಗ್ಸ್​ ಅಂತ್ಯಗೊಳಿಸಲೇಬೇಕಾಯಿತು. ಇದರ ಬೆನ್ನಲ್ಲೇ ಶ್ರೇಯಸ್ ಗೋಪಾಲ್​ಗೆ ವಿಕೆಟ್ ಒಪ್ಪಿಸಿ ಸೂರ್ಯಕುಮಾರ್ ಯಾದವ್ (40) ಹೊರ ನಡೆದರು. ಬಳಿಕ ಬಂದ ಪೊಲಾರ್ಡ್​ ಒಂದು ಸಿಕ್ಸರ್ ಸಿಡಿಸಿ ಶ್ರೇಯಸ್ ಗೋಪಾಲ್​ ಎಸೆತದಲ್ಲಿ ಕ್ಲೀನ್ ಬೌಲ್ಡ್​ ಆಗಿ ನಿರ್ಗಮಿಸಿದರು. ಈ ಹಂತದಲ್ಲಿ ರಾಜಸ್ಥಾನ್ ರಾಯಲ್ಸ್ ಬೌಲರುಗಳು ಮೇಲುಗೈ ಸಾಧಿಸಿದ್ದರು.

  ಆದರೆ ಅಂತಿಮ ಓವರ್​ಗಳಲ್ಲಿ ಕಂಬ್ಯಾಕ್ ಮಾಡಿದ ಮುಂಬೈ ಬ್ಯಾಟ್ಸ್​ಮನ್​ಗಳಾದ ಸೌರಭ್ ತಿವಾರಿ ಹಾಗೂ ಹಾರ್ದಿಕ್ ಪಾಂಡ್ಯ ಬಿರುಸಿನ ಆಟಕ್ಕೆ ಮುಂದಾದರು. ಅದರಂತೆ ಅಂಕಿತ್ ರಜಪೂತ್ ಎಸೆದ 18ನೇ ಓವರ್​ನಲ್ಲಿ ಪಾಂಡ್ಯ 4​ ಸಿಕ್ಸರ್​ನೊಂದಿಗೆ ಒಟ್ಟು 27 ರನ್ ಕಲೆಹಾಕಿದರು. ಜೋಫ್ರಾ ಆರ್ಚರ್ ಅವರ 19ನೇ ಓವರ್​ನ ಮೊದಲ ಎಸೆತದಲ್ಲೇ ಸೌರಭ್ ತಿವಾರಿ (34) ಕ್ಯಾಚ್ ನೀಡಿ ಹೊರ ನಡೆದರು. ಈ ಓವರ್​ನಲ್ಲಿ ಆರ್ಚರ್ ನೀಡಿದ್ದು ಕೇವಲ 3 ರನ್ ಮಾತ್ರ.

  ಅಂತಿಮ ಓವರ್​ನಲ್ಲಿ ಮತ್ತೆ ಅಬ್ಬರಿಸಿದ ಪಾಂಡ್ಯ ಸಿಕ್ಸ್, ಫೋರ್, ಫೋರ್​, ಸಿಕ್ಸ್​ ಮೂಲಕ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ ಕಾರ್ತಿಕ್ ತ್ಯಾಗಿ ಎಸೆದ ಕೊನೆಯ ಓವರ್​ನಲ್ಲಿ 27 ರನ್​ ಕಲೆಹಾಕುವ ಮೂಲಕ ತಂಡದ ಮೊತ್ತವನ್ನು 195 ಕ್ಕೆ ತಂದು ನಿಲ್ಲಿಸಿದರು. ರಾಜಸ್ಥಾನ್ ರಾಯಲ್ಸ್ ಪರ ಶ್ರೇಯಸ್ ಗೋಪಾಲ್ 4 ಓವರ್​ನಲ್ಲಿ 30 ರನ್ ನೀಡಿ 2 ವಿಕೆಟ್ ಕಬಳಿಸಿ ಗಮನ ಸೆಳೆದರು.  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ: IPL 2020: 3ನೇ ವರ್ಷಕ್ಕೆ CSK ಸುಸ್ತು: ಡ್ಯಾಡಿಸ್ ಆರ್ಮಿ ವಿರುದ್ಧ ಕಿಡಿಕಾರಿದ ಕೋಚ್​
  Published by:zahir
  First published: