IPL

  • associate partner
HOME » NEWS » Ipl » IPL 2020 SCHEDULE SPIKE IN COVID 19 CASES IN ABU DHABI UAE CAUSES DELAY IN IPL SCHEDULE ANNOUNCEMENT VB

IPL 2020: ಅಬುದಾಬಿಯಲ್ಲಿ ಹೆಚ್ಚುತ್ತಿದೆ ಕೊರೋನಾ: ಬಿಸಿಸಿಐಯಿಂದ ಮಹತ್ವದ ಬದಲಾವಣೆ?: ಇಲ್ಲಿದೆ ಮಾಹಿತಿ

ಯುಎಇನಲ್ಲಿ ಕಳೆದ ಎರಡು ದಿನಗಳಿಂದ ಕೊರೋನಾ ವೈರಸ್ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಐಪಿಎಲ್ ನಡೆಯಲಿರುವ ಅಬುದಾಬಿಯಲ್ಲಿ ಕೊರೋನಾ ಸಂಖ್ಯೆ ಏರುತ್ತಲೇ ಇದೆ.

news18-kannada
Updated:August 26, 2020, 11:22 AM IST
IPL 2020: ಅಬುದಾಬಿಯಲ್ಲಿ ಹೆಚ್ಚುತ್ತಿದೆ ಕೊರೋನಾ: ಬಿಸಿಸಿಐಯಿಂದ ಮಹತ್ವದ ಬದಲಾವಣೆ?: ಇಲ್ಲಿದೆ ಮಾಹಿತಿ
IPL 2020
  • Share this:
ಇಡೀ ವಿಶ್ವವೇ ಸಾಕಷ್ಟು ತಿಂಗಳುಗಳಿಂದ ಕಾತುರದಿಂದ ಕಾಯುತ್ತಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 19 ರಂದು ಈ ಮಿಲಿಯನ್ ಡಾಲರ್ ಟೂರ್ನಿಗೆ ಯುಎಇನಲ್ಲಿ ಚಾಲನೆ ಸಿಗಲಿದೆ. ಮೈದಾನಕ್ಕೆ ಬಂದು ಕ್ರಿಕೆಟ್ ನೋಡಲು ಸಾಧ್ಯವಾಗಿಲ್ಲ ಎಂದಾದರೂ ಟಿವಿ ಮುಂದೆ ಕೂತು ರೋಚಕ ಪಂದ್ಯಗಳ ವೀಕ್ಷಣೆ ಮಾಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಈಗಾಗಲೇ ಆರ್​ಸಿಬಿ, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಸೇರಿ ಎಂಟು ಪ್ರಾಂಚೈಸಿಗಳು ಅರಭ್ ರಾಷ್ಟ್ರಕ್ಕೆ ತಲುಪಿದ್ದು ಕ್ವಾರಂಟೈನ್​ನಲ್ಲಿದೆ. ಇದು ಮುಗಿದ ಬಳಿಕ ಆಟಗಾರರು ಅಭ್ಯಾಸಕ್ಕೆ ಕಣಕ್ಕಿಳಿದ್ದಾರೆ.

England vs Pakistan 2020: ಇತಿಹಾಸ ಬರೆದ ಆಂಡರ್ಸನ್: ಪಾಕ್ ವಿರುದ್ಧ ಇಂಗ್ಲೆಂಡ್​ಗೆ 1-0 ಸರಣಿ ಜಯ

ಐಪಿಎಲ್ ಆರಂಭ ಹತ್ತಿರವಾಗುತ್ತಿದ್ದರೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇನ್ನೂ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿಲ್ಲ. ಮೊನ್ನೆಯಷ್ಟೆ ಐಪಿಎಲ್ ವೇಳಾಪಟ್ಟಿ ಕುರಿತು ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಮಾತನಾಡಿ, ಐಪಿಎಲ್ ಆರಂಭಿಕ ಪಂದ್ಯಗಳಿಗೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಆಟಗಾರರು ಗೈರಾಗಲಿದ್ದಾರೆ. ವಿದೇಶಿ ಸ್ಟಾರ್ ಆಟಗಾರರ ಮೇಲೆ ಹೆಚ್ಚು ಅವಲಂಬಿತವಾಗಿರದ ತಂಡಗಳಿಗೆ ಆರಂಭಿಕ ಪಂದ್ಯ ಆಯೋಜಿಸಲು ನಾವು ತೀರ್ಮಾನ ಮಾಡುತ್ತಿದ್ದೇವೆ ಎಂದಿದ್ದರು.

ಅಲ್ಲದೆ ವಿದೇಶಿ ಸ್ಟಾರ್ ಆಟಗಾರರು ಹೆಚ್ಚು ಇರುವ ತಂಡಗಳ ಪಂದ್ಯವನ್ನು ಅವರು ಬರುವ ಹೊತ್ತಿಗೆ ನಡೆಸುವ ಬಗ್ಗೆ ಯೋಚಿಸುತ್ತಿದ್ದೇವೆ. ಹೀಗಾಗಿ ಟೂರ್ನಿಯ ಸಮತೋಲನ ಕಾಯ್ದುಕೊಳ್ಳಲು ನಿರ್ಧಾರ ಮಾಡಿದ್ದೇವೆ. ಈ ವಾರದ ಅಂತ್ಯದೊಳಗೆ ಐಪಿಎಲ್ 2020 ವೇಳಾಪಟ್ಟಿ ಖಂಡಿತಾ ಬಿಡುಗಡೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.



ಆದರೆ, ಸದ್ಯ ಯುಎಇನಲ್ಲಿ ಕಳೆದ ಎರಡು ದಿನಗಳಿಂದ ಕೊರೋನಾ ವೈರಸ್ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಐಪಿಎಲ್ ನಡೆಯಲಿರುವ ಅಬುದಾಬಿಯಲ್ಲಿ ಕೊರೋನಾ ಸಂಖ್ಯೆ ಏರುತ್ತಲೇ ಇದೆ. ಹೀಗಾಗಿ ಐಪಿಎಲ್ ವೇಳಾಪಟ್ಟಿ ಬಿಡುಗಡೆ ಮತ್ತಷ್ಟು ತಡವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.ಇನ್ನೂ ಅಬುದಾಬಿಯಲ್ಲಿ ಕೊರೋನಾ ಸಂಖ್ಯೆ ಹೆಚ್ಚಿರುವ ಕಾರಣ ಈ ಮೈದಾನದ ಬದಲಿಗೆ ಬೇರೆ ಮೈದಾನದಲ್ಲಿ ಪಂದ್ಯವನ್ನು ಆಯೋಸುವ ಬಗ್ಗೆ ಚಿಂತನೆ ನಡೆಸಿ, ಎಲ್ಲವೂ ಅಂತಿಮವಾಗ ಬಳಿಕ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ.

ಈ ಮೂವರು ಆಟಗಾರರನ್ನು ಕೈಬಿಟ್ಟಿರುವುದು KKR ತಂಡಕ್ಕೆ ಮುಳುವಾದೀತೇ?

ಸೆಪ್ಟೆಂಬರ್ 19ರಂದು ಆರಂಭಗೊಳ್ಳುವ ಐಪಿಎಲ್ 2020 ನವೆಂಬರ್ 10ರಂದು ಫೈನಲ್ನೊಂದಿಗೆ ಕೊನೆಗೊಳ್ಳಲಿದೆ. 2014ರ ಸೀಸನ್ನ ಕೆಲ ಪಂದ್ಯಗಳು ಯುಎಇಯಲ್ಲಿ ನಡೆದಿತ್ತು. ಆದರೆ ಸಂಪೂರ್ಣ ಟೂರ್ನಿ ಯುಎಇಯಲ್ಲಿ ನಡೆಯುತ್ತಿರುವುದು ಇದೇ ಮೊದಲ ಬಾರಿ.

ಯುಎಇಯಲ್ಲಿ ಪಂದ್ಯಗಳನ್ನು ಆಡಿಸಲಾಗುತ್ತಿದ್ದರೂ, ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7: 30 ಕ್ಕೆ ಪ್ರಾರಂಭವಾಗುವಂತೆ ಯೋಜಿಸಲಾಗಿದೆ. ಈ ಪಂದ್ಯಗಳನ್ನು ಐಪಿಎಲ್ ನಿಯಮಿತ ಸಮಯಕ್ಕಿಂತ 30 ನಿಮಿಷ ಮುಂಚಿತವಾಗಿ ನಡೆಸಲು ನಿರ್ಧರಿಸಿದೆ.
Published by: Vinay Bhat
First published: August 26, 2020, 11:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories