IPL

  • associate partner
HOME » NEWS » Ipl » IPL 2020 SCHEDULE SCHEDULE OF IPL 2020 WILL BE RELEASED SEP 6TH IPL CHAIRMAN BRIJESH PATEL VB

IPL 2020 Schedule: ಐಪಿಎಲ್ ವೇಳಾಪಟ್ಟಿ ಬಿಡುಗಡೆಗೆ ಕೊನೆಗೂ ನಿಗದಿ ಆಯಿತು ದಿನ: ಯಾವಾಗ?, ಇಲ್ಲಿದೆ ಮಾಹಿತಿ

2020ರ ಐಪಿಎಲ್‌ ಟೂರ್ನಿಯು ಸೆಪ್ಟೆಂಬರ್ 19 ರಿಂದ ಆರಂಭಗೊಂಡು ನವೆಂಬರ್ 10 ರಂದು ಫೈನಲ್‌ ಮೂಲಕ ಅಂತ್ಯವಾಗಲಿದೆ ಎಂದು ಕಳೆದ ತಿಂಗಳು ಬಿಸಿಸಿಐ ಪ್ರಕಟಿಸಿತ್ತು. ಆದರೆ, ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ ಮಾಡಿರಲಿಲ್ಲ.

news18-kannada
Updated:September 6, 2020, 8:16 AM IST
IPL 2020 Schedule: ಐಪಿಎಲ್ ವೇಳಾಪಟ್ಟಿ ಬಿಡುಗಡೆಗೆ ಕೊನೆಗೂ ನಿಗದಿ ಆಯಿತು ದಿನ: ಯಾವಾಗ?, ಇಲ್ಲಿದೆ ಮಾಹಿತಿ
IPL 2020
  • Share this:
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭ ಹತ್ತಿರವಾಗುತ್ತಿದ್ದರೂ ಬಿಸಿಸಿಐ ಮಾತ್ರ ಇನ್ನೂ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಸೆ.  19 ರಂದು ಈ ಹೊಡಿಬಡಿ ಟೂರ್ನಿಗೆ ಚಾಲನೆ ಸಿಗಲಿದೆ. ಇನ್ನೇನು ಕೇವಲ 12 ದಿನಗಳಷ್ಟೆ ಬಾಕಿ ಉಳಿದಿವೆ. ಅಭಿಮಾನಿಗಳು ಕೂಡ ವೇಳಾಪಟ್ಟಿಗೋಸ್ಕರ ಎದುರು ನೋಡುತ್ತಿದ್ದಾರೆ. ಈ ಹಿಂದೆ ಬಿಸಿಸಿಐ ಹೇಳಿದ ಪ್ರಕಾರ ಶುಕ್ರವಾರ ಅಥವಾ ಶನಿವಾರ ಐಪಿಎಲ್ 2020 ವೇಳಾಪಟ್ಟಿ ಬಿಡುಗಡೆ ಆಗಬೇಕಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಸದ್ಯ ಬಿಸಿಸಿಐಯಿಂದ ಐಪಿಎಲ್ ವೇಳಾಪಟ್ಟಿ ಕುರಿತು ಖಚಿತ ಮಾಹಿತಿ ಹೊರಬಿದ್ದಿದೆ.

ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟಿ-20 ಟೂರ್ನಮೆಂಟ್‌ನ ವೇಳಾಪಟ್ಟಿಯು ಇಂದು ಅಂದರೆ ರವಿವಾರ (ಸೆ.6) ಬಿಡುಗಡೆಯಾಗಲಿದೆ ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

IPL 2020: CSK ತಂಡ ಕೈಬಿಟ್ಟರೆ ಮುಂದಿನ ಐಪಿಎಲ್​ನಲ್ಲಿ ಸುರೇಶ್ ರೈನಾ ಯಾವ ತಂಡಕ್ಕೆ ಗೊತ್ತಾ?



2020ರ ಐಪಿಎಲ್‌ ಟೂರ್ನಿಯು ಸೆಪ್ಟೆಂಬರ್ 19 ರಿಂದ ಆರಂಭಗೊಂಡು ನವೆಂಬರ್ 10 ರಂದು ಫೈನಲ್‌ ಮೂಲಕ ಅಂತ್ಯವಾಗಲಿದೆ ಎಂದು ಕಳೆದ ತಿಂಗಳು ಬಿಸಿಸಿಐ ಪ್ರಕಟಿಸಿತ್ತು. ಆದರೆ, ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ ಮಾಡಿರಲಿಲ್ಲ. ಶನಿವಾರ ಐಪಿಎಲ್‌ ಮುಖ್ಯಸ್ಥ ಬ್ರಿಜೇಶ್‌ ಪಟೇಲ್‌ ಸೆ.6 ರಂದು ಭಾನುವಾರ ಟೂರ್ನಿಯ ಅಂತಿಮ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ನಿನ್ನೆಯಷ್ಟೆ ಐಪಿಎಲ್ ವೇಳಾಪಟ್ಟಿಯನ್ನು ಬಿಸಿಸಿಐ ಎಲ್ಲ ಎಂಟು ಫ್ರಾಂಚೈಸಿಗಳಿಗೆ ನೀಡಿತ್ತು. ಫ್ರಾಂಚೈಸಿಗಳಿಗೆ ನೀಡಿದ ಬಳಿಕ ಐಪಿಎಲ್ ವೇಳಾಪಟ್ಟಿ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಅದರಂತೆ ಇಂದು ಸಂಜೆ ವೇಳೆಗೆ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ ಆಗಲಿದೆ ಎಂದು ಬಿಸಿಸಿಐ ಹೇಳಿದೆ.



ಭಾರತದಲ್ಲಿ ಆಯೋಜನೆಯಾಗಬೇಕಿದ್ದ ಐಪಿಎಲ್ ಟೂರ್ನಿ ಕೊರೋನಾ ಸಾಂಕ್ರಾಮಿಕದಿಂದಾಗಿ ಯುಎಇಗೆ ಶಿಫ್ಟ್ ಆಗಿತ್ತು. ಈಗಾಗಲೇ ಎಲ್ಲ ತಂಡಗಳು ಯುಎಇನಲ್ಲಿ ಬೀಡುಬಿಟ್ಟಿದ್ದು, ಟೂರ್ನಿಗೆ ತಯಾರಿ ನಡೆಸುತ್ತಿವೆ. ಏತನ್ಮಧ್ಯೆ ಐಪಿಎಲ್ ತಂಡಗಳಲ್ಲಿನ ಸಿಬ್ಬಂದಿಗಳು ಮತ್ತು ಆಟಗಾರರು ಕೊರೋನಾ ಸೋಂಕಿಗೆ ತುತ್ತಾಗುತ್ತಿರುವುದು ಫ್ರಾಂಚೈಸಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಚೆನ್ನೈ ಸೂಪರ್​ ಕಿಂಗ್ಸ್​ ತಂಡದಲ್ಲಿ 13 ಮಂದಿಗೆ ಕೋವಿಡ್​ 19 ಪಾಸಿಟಿವ್​ ಕಾಣಿಸಿಕೊಂಡಿದ್ದರಿಂದ ವೇಳಾಪಟ್ಟಿಯನ್ನು ತಡೆ ಹಿಡಿಯಲಾಗಿತ್ತು. ಇದೀಗ ಎಲ್ಲಾ ಸೋಂಕಿತರು ಕ್ವಾರಂಟೈನ್​ ಅವಧಿಯಲ್ಲಿ ನೆಗೆಟಿವ್​ ಪಡೆದಿರುವುದರಿಂದ ಟೂರ್ನಿಯನ್ನು ಯೋಜನೆಯಂತೆ ನಡೆಸಲು ಬಿಸಿಸಿಐ ಮುಂದಾಗಿದೆ.

IPL 2020: ಐಪಿಎಲ್ ಆರಂಭಕ್ಕೆ ಕೇವಲ 13 ದಿನಗಳಷ್ಟೆ ಬಾಕಿ: ನೀವು ತಿಳಿದುಕೊಳ್ಳಲೇ ಬೇಕು ಈ ವಿಚಾರ!

ಐಪಿಎಲ್ ವೇಳಾಪಟ್ಟಿ ವಿಳಂಬಗೊಳ್ಳಲು ಕಾರಣ ಏನೆಂದರೆ ಬಿಸಿಸಿಐಯು ಹೊಂದಾಣಿಕೆಯ ವೇಳಾಪಟ್ಟಿಯತ್ತ ಎದುರು ನೋಡುತ್ತಿದೆ. ಹೊಂದಾಣಿಕೆಯ ವೇಳಾಪಟ್ಟಿ ಅಂದರೆ ಒಂದು ವೇಳೆ, ವೇಳಾಪಟ್ಟಿ ಬದಲಿಸಬೇಕಾಗಿ ಬಂದರೆ ನಿಧಾನವಾಗಿಯಾದರೂ ಬದಲಾಯಿಸಲು ಅವಕಾಶವಿರುವ ವೇಳಾಪಟ್ಟಿ. ಅಂದಹಾಗೆ, ಕಳೆದ ಆಗಸ್ಟ್‌ನಲ್ಲೇ ವೇಳಾಪಟ್ಟಿ ಪ್ರಟಕವಾಗಬೇಕಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿದ್ದರಿಂದ ಬಿಸಿಸಿಐ ಸಮಯ ತೆಗೆದುಕೊಂಡಿತ್ತು.
Published by: Vinay Bhat
First published: September 6, 2020, 8:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories