• Home
  • »
  • News
  • »
  • ipl
  • »
  • ಐಪಿಎಲ್​ ಫೈನಲ್​ ನಡೆಯೋದು ಯಾವ ಸ್ಟೇಡಿಯಂನಲ್ಲಿ ಗೊತ್ತಾ?; ಇಲ್ಲಿದೆ ವಿವರ

ಐಪಿಎಲ್​ ಫೈನಲ್​ ನಡೆಯೋದು ಯಾವ ಸ್ಟೇಡಿಯಂನಲ್ಲಿ ಗೊತ್ತಾ?; ಇಲ್ಲಿದೆ ವಿವರ

ದುಬೂ ಸ್ಟೇಡಿಯಂ

ದುಬೂ ಸ್ಟೇಡಿಯಂ

ಮುಂಬೈ, ಡೆಲ್ಲಿ ಹಾಗೂ ಬೆಂಗಳೂರು ಫೈನಲ್​ಗೆ ಏರುವುದು ಬಹುತೇಕ ಖಚಿತವಾಗಿದೆ. ನಾಲ್ಕನೇ ಸ್ಥಾನಕ್ಕೆ ಭಾರೀ ಪೈಪೋಟಿ ನಡೆಯುತ್ತಿದೆ.

  • Share this:

    13ನೇ ಆವೃತ್ತಿಯ ಐಪಿಎಲ್​ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಇನ್ನು 15 ದಿನಗಳಲ್ಲಿ ಫೈನಲ್​ ಕೂಡ ನಡೆಯಲಿದೆ. ಕೊರೋನಾ ವೈರಸ್​ ಹಿನ್ನೆಲೆಯಲ್ಲಿ ಯುಎಇನಲ್ಲಿ ಐಪಿಎಲ್​ ನಡೆಯುತ್ತಿದೆ. ಈ ಮೊದಲು ಲೀಗ್​ ಹಂತರ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಸಿಸಿಐ ರಿಲೀಸ್​ ಮಾಡಿತ್ತು. ಈಗ ಪ್ಲೇ ಆಫ್​ ಹಾಗೂ ಫೈನಲ್​ ಎಲ್ಲಿ ನಡೆಯಲಿದೆ ಎಂಬುದನ್ನು ಅಧಿಕೃತಗೊಳಿಸಲಾಗಿದೆ.


    ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನವೆಂಬರ್​ 10ರಂದು ಫೈನಲ್​ ಪಂದ್ಯ ನಡೆಯಲಿದೆ. ರಾತ್ರಿ 7:30ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಇದಕ್ಕೂ ಮೊದಲು ನವೆಂಬರ್​ 5ರಂದು ಕ್ವಾಲಿಫೈರ್- 1ನೇ ಪಂದ್ಯ ದುಬೈನಲ್ಲಿ ನಡೆಯಲಿದೆ. ಅಂಕಪಟ್ಟಿಯಲ್ಲಿರುವ ಮೊದಲೆರಡು ಸ್ಥಾನಗಳಲ್ಲಿರುವ  ಟೀಂಗಳ ಮಧ್ಯೆ ಈ ಮ್ಯಾಚ್​ ನಡೆಯಲಿದೆ. ಈ ಮ್ಯಾಚ್​ನಲ್ಲಿ ಗೆದ್ದವರು ಫೈನಲ್​ಗೆ ಹಾಗೂ ಸೋತವರು ಕ್ವಾಲಿಫೈರ್-2ಗೆ ಆಯ್ಕೆ ಆಗಲಿದ್ದಾರೆ​ ನವೆಂಬರ್​ 6ರಂದು ಅಭುದಾಬಿಯಲ್ಲಿ ಎಲಿಮಿನೇಟರ್​ ಮ್ಯಾಚ್​ ನಡೆಯಲಿದೆ. ಅಂಕಪಟ್ಟಿಯಲ್ಲಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿರುವ ಟೀಂಗಳ ಮಧ್ಯೆ ಈ ಪಂದ್ಯ ನಡೆಯಲಿದೆ.


    ನವೆಂಬರ್​ 8ರಂದು ನಡೆಯುವ ಕ್ವಾಲಿಫೈರ್​ 2ನೇ ಪಂದ್ಯ ಎಲಿಮಿನೇಟರ್​ ಮ್ಯಾಚ್​ನಲ್ಲಿ  ಗೆದ್ದವರು ಹಾಗೂ ಕ್ವಾಲಿಫೈ 1ರಲ್ಲಿ ಸೋತ ಟೀಂಗಳ ನಡುವೆ ನಡೆಯಲಿದೆ. ಈ ಪಂದ್ಯ ಕೂಡ ಅಭುದಾಬಿಯಲ್ಲಿ ನಡೆಯಲಿದೆ. ನವೆಂಬರ್ ​10ರಂದು ದುಬೈನಲ್ಲಿ ಫೈನಲ್​ ನಡೆಯಲಿದೆ. ಕ್ವಾಲಿಫೈರ್ 1-2 ​ನಲ್ಲಿ ಗೆದ್ದವರು ಫೈನಲ್​ನಲ್ಲಿ ಸೆಣೆಸಲಿದ್ದಾರೆ.



    ಮುಂಬೈ, ಡೆಲ್ಲಿ ಹಾಗೂ ಬೆಂಗಳೂರು ಫೈನಲ್​ಗೆ ಏರುವುದು ಬಹುತೇಕ ಖಚಿತವಾಗಿದೆ. ನಾಲ್ಕನೇ ಸ್ಥಾನಕ್ಕೆ ಭಾರೀ ಪೈಪೋಟಿ ನಡೆಯುತ್ತಿದೆ.

    Published by:Rajesh Duggumane
    First published: