ಅಂದುಕೊಂಡಂತೆ ಇಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 19 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಈ ಹಿಂದಿನ ವೇಳಾಪಟ್ಟಿಯಲ್ಲಿರುವಂತೆ ಕಳೆದ ವರ್ಷದ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಗುರುವಾರ ನಡೆಸಿದ ಕೊರೋನಾ ವೈರಸ್ ಪರೀಕ್ಷೆಯಲ್ಲಿ ಯಾವುದೇ ಪ್ರಕರಣಗಳು ಸಿಎಸ್‌ಕೆ ಪಾಳಯದಲ್ಲಿ ಪತ್ತೆಯಾಗದ ಕಾರಣ ಮುಂಬೈ- ಚೆನ್ನೈ ಮೊದಲ ಪಂದ್ಯದಲ್ಲಿ ಕಾದಾಟ ನಡೆಸಲಿದೆ. ಈ ಉದ್ಘಾಟನಾ ಪಂದ್ಯ ಸೆ. 19 ರಂದು ಸಂಜೆ 7:30ಕ್ಕೆ ಅಬುದಾಬಿಯಲ್ಲಿ ನಡೆಯಲಿದೆ.
ಸೆಪ್ಟೆಂಬರ್ 20 ರಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಸೆಣೆಸಾಟ ನಡೆಸಲಿವೆ. ಈ ಪಂದ್ಯ ಸಂಜೆ 7:30ಕ್ಕೆ ದುಬೈನಲ್ಲಿ ನಡೆಯಲಿದೆ.
ಕಳೆದ ವರ್ಷ ಐಪಿಎಲ್ ಪಂದ್ಯಗಳು 44 ದಿನದಲ್ಲಿ ಮುಕ್ತಾಯವಾಗಿತ್ತು. ಆದರೆ, ಈ ಬಾರಿ ಒಂದಿಷ್ಟು ಹೆಚ್ಚು ದಿನಗಳ ಕಾಲ ಟೂರ್ನಿ ನಡೆಯಲಿದೆ. ನವೆಂಬರ್ 3ರವರೆಗೆ ನಡೆಯಲಿರುವ ಲೀಗ್ ಹಂತದ ಎಲ್ಲ 56 ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಲಾಗಿದೆ. ಪ್ಲೇ ಆಫ್ ಹಂತದ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.
IPL 2020: ಅಂದು ಯುಎಇನಲ್ಲಿ ನಡೆದ ಐಪಿಎಲ್ನಲ್ಲಿ ಅಬ್ಬರಿಸಿದ್ದು ಕೊಹ್ಲಿ-ರೋಹಿತ್ ಅಲ್ಲ; ಮತ್ಯಾರು?
🚨 #Dream11IPL 2020 Schedule Announced.
For fixtures and more details, click here 👉 https://t.co/0mj5LBXeah pic.twitter.com/dNPvxMZFVu
— IndianPremierLeague (@IPL) September 6, 2020
ಇನ್ನೂ ಈ ಬಾರಿಯ ಡ್ರಿಮ್11 ಐಪಿಎಲ್ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿರುವ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 21 ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಈ ಮೂಲಕ ಬಲಿಷ್ಠ ತಂಡದ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
#IPL2020Schedule
Rohit Sharma's #MumbaiIndians to take on MS Dhoni's #ChennaiSuperKings in opener
Indian Premier League (#IPL) Governing Council releases the complete fixtures for the league stage of the #Dream11IPL2020 to be held in UAE#IPL2020 #MI #CSK #RohitSharma #MSDhoni pic.twitter.com/zvH0fpJxnv
— Indian Cricket Team (@IndianCricNews) September 6, 2020
ಈ ನಡುವೆ ಐಪಿಎಲ್ ವೇಳಾಪಟ್ಟಿ ವಿಳಂಬಗೊಳ್ಳಲು ಕಾರಣ ಕೊಟ್ಟಿರುವ ಬಿಸಿಸಿಐ, ಹೊಂದಾಣಿಕೆಯ ವೇಳಾಪಟ್ಟಿಗಾಗಿ ಕಾಯುತ್ತಿದ್ದೆವು ಎಂದಿದೆ. ಅಂದರೆ ಒಂದು ವೇಳೆ, ವೇಳಾಪಟ್ಟಿ ಬದಲಿಸಬೇಕಾಗಿ ಬಂದರೆ ನಿಧಾನವಾಗಿಯಾದರೂ ಬದಲಾಯಿಸಲು ಅವಕಾಶವಿರುವ ವೇಳಾಪಟ್ಟಿ. ಕಳೆದ ಆಗಸ್ಟ್‌ನಲ್ಲೇ ಐಪಿಎಲ್ ವೇಳಾಪಟ್ಟಿ ಪ್ರಟಕವಾಗಬೇಕಿತ್ತು. ಆದರೆ, ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿದ್ದರಿಂದ ಬಿಸಿಸಿಐ ಇನ್ನಷ್ಟು ಸಮಯ ತೆಗೆದುಕೊಂಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ