IPL 2020: ಸಂಜು ಸ್ಯಾಮ್ಸನ್ ಸ್ಟನ್ನಿಂಗ್ ಕ್ಯಾಚ್ ವಿಡಿಯೋ ವೈರಲ್

ಸಿಎಸ್​ಕೆ ವಿರುದ್ಧ 32  ಎಸೆತಗಳಲ್ಲಿ 74 ರನ್ ಬಾರಿಸಿದ್ದ ಸಂಜು, ಕಿಂಗ್ಸ್​ ಇಲೆವೆನ್ ವಿರುದ್ಧ ಕೇವಲ 42 ಎಸೆತಗಳಲ್ಲಿ 85 ರನ್ ಸಿಡಿಸಿ ರಾಜಸ್ಥಾನ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. 

Sanju Samson

Sanju Samson

 • Share this:
  ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಣ ಪಂದ್ಯವು ಅದ್ಭುತ ಕ್ಯಾಚ್​ವೊಂದಕ್ಕೆ ಸಾಕ್ಷಿಯಾಯಿತು. ಆರ್​ಆರ್​ ತಂಡದ ಯುವ ಆಟಗಾರ ಸಂಜು ಸ್ಯಾಮ್ಸನ್ ಅತ್ಯುತ್ತಮ ಫೀಲ್ಡರ್ ಎಂಬುದನ್ನು ಅನೇಕ ಬಾರಿ ಸಾರಿದ್ದಾರೆ. ಇದೀಗ 13ನೇ ಆವೃತ್ತಿ ಐಪಿಎಲ್​ನಲ್ಲೂ ಫೀಲ್ಡಿಂಗ್ ಮೂಲಕ ಸಂಜು ಜಾದೂ ಮೆರೆದರು.

  ಒಂದೆಡೆ ರಾಜಸ್ಥಾನ ಫೀಲ್ಡರ್‌ಗಳು ಕ್ಯಾಚ್‌ಗಳನ್ನು ಕೆಚೆಲ್ಲುತ್ತಿದ್ದರೆ ಇನ್ನೊಂದೆಡೆ ಅತ್ಯುತ್ತಮವಾಗಿ ಕ್ಯಾಚ್​ ಹಿಡಿಯುವ ಮೂಲಕ ಗಮನ ಸೆಳೆದರು. 18ನೇ ಟಾಮ್ ಕರನ್ ಎಸೆದ 18ನೇ ಓವರ್​ನಲ್ಲಿ ಪ್ಯಾಟ್ ಕಮಿನ್ಸ್ ಭರ್ಜರಿಯಾಗಿಯೇ ಬ್ಯಾಟ್ ಬೀಸಿದ್ದರು. ಆದರೆ ಎತ್ತರದಿಂದ ತೂರಿ ಬಂದ ಬಾಲನ್ನು ಗುರುತಿಸಿದ ಸಂಜು ಸ್ಯಾಮ್ಸನ್ ಹಿಂದಕ್ಕೆ ಡೈವ್ ಹೊಡೆಯುವ ಮೂಲಕ ಹಿಡಿದು ಗಮನ ಸೆಳೆದರು.  ಇದೇ ವೇಳೆ ತಲೆ ಬಲವಾಗಿ ನೆಲಕ್ಕೆ ಬಡಿದಿದ್ದರಿಂದ ಸಹ ಆಟಗಾರರು ಆತಂಕಗೊಂಡರು. ಏಕೆಂದರೆ ರಾಜಸ್ಥಾನ್ ರಾಯಲ್ಸ್ ತಂಡದ ಪರ ಸಂಜು ಸ್ಯಾಮ್ಸನ್ ಅತ್ಯುತ್ತಮ ಫಾರ್ಮ್​​ನಲ್ಲಿದ್ದಾರೆ. ಸಿಎಸ್​ಕೆ ವಿರುದ್ಧ 32  ಎಸೆತಗಳಲ್ಲಿ 74 ರನ್ ಬಾರಿಸಿದ್ದ ಸಂಜು, ಕಿಂಗ್ಸ್​ ಇಲೆವೆನ್ ವಿರುದ್ಧ ಕೇವಲ 42 ಎಸೆತಗಳಲ್ಲಿ 85 ರನ್ ಸಿಡಿಸಿ ರಾಜಸ್ಥಾನ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಕೆಕೆಆರ್ ವಿರುದ್ಧ ಕೇವಲ 8 ರನ್​ಗೆ ಔಟಾಗಿ ಸ್ಯಾಮ್ಸನ್ ನಿರಾಸೆ ಮೂಡಿಸಿದರು.

  ಇದೀಗ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಅದ್ಭುತ ಫೀಲ್ಡಿಂಗ್ ಮೂಲಕ ಮಿಂಚುತ್ತಿದ್ದು, ತಂಡದಲ್ಲಿ ಪರಿಪೂರ್ಣ ಆಟಗಾರನಾಗಿ ಯುವ ಕ್ರಿಕೆಟಿಗ ಗುರುತಿಸಿಕೊಂಡಿದ್ದಾರೆ.

  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  KL Rahul: ಕನ್ನಡಿಗನ ಕಮಾಲ್: ಸಿಡಿಲಬ್ಬರದ ಒಂದು ಸೆಂಚುರಿಗೆ 8 ದಾಖಲೆಗಳು ಉಡೀಸ್
  Published by:zahir
  First published: