IPL

  • associate partner
HOME » NEWS » Ipl » IPL 2020 SACHIN TENDULKAR EXPLAINS WHY CHASING HAS BECOME EASY IN SECOND HALF ZP

Sachin Tendulkar: ಪ್ಲೇ ಆಫ್ ಪಂದ್ಯಗಳನ್ನು ಗೆಲ್ಲಲು ಸಚಿನ್ ನೀಡಿದ್ದಾರೆ ಸಿಂಪಲ್ ಸಲಹೆ

IPL 2020: ಮೊದಲಾರ್ಧದ ಡೆತ್​ ಓವರ್​ನಲ್ಲಿ ಪಿಚ್​ ಬ್ಯಾಟ್ಸ್​ಮನ್​ಗಳಿಗೆ ಸಹಕಾರಿಯಾಗಿತ್ತು ಎನ್ನಬಹುದು. ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿದ್ದೂ ಕೂಡ ತಂಡಕ್ಕೆ ಮುಳುವಾಯಿತು.

news18-kannada
Updated:November 6, 2020, 4:00 PM IST
Sachin Tendulkar: ಪ್ಲೇ ಆಫ್ ಪಂದ್ಯಗಳನ್ನು ಗೆಲ್ಲಲು ಸಚಿನ್ ನೀಡಿದ್ದಾರೆ ಸಿಂಪಲ್ ಸಲಹೆ
Sachin Tendulkar
  • Share this:
ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಹಂತ ಮುಕ್ತಾಯವಾಗಿದೆ. ಎರಡನೇ ಹಂತಕ್ಕೆ ನಾಲ್ಕು ತಂಡಗಳು ಪ್ರವೇಶಿಸಿದ್ದು, ಪ್ರಶಸ್ತಿ ಸುತ್ತಿನಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಸನ್​ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಕದನ ನಡೆಯಲಿದೆ. ಈಗಾಗಲೇ ಮೊಲದ ಕ್ಯಾಲಿಫೈಯರ್ ಗೆದ್ದಿರುವ ಮುಂಬೈ ಇಂಡಿಯನ್ಸ್ ಫೈನಲ್​ಗೆ ಲಗ್ಗೆಯಿಟ್ಟಿದೆ. ಇನ್ನುಳಿದಿರುವುದು ಎಲಿಮಿನೇಟರ್ ಹಾಗೂ 2ನೇ ಕ್ವಾಲಿಫೈಯರ್ ಪಂದ್ಯಗಳು ಮಾತ್ರ. ಇತ್ತ ನಾಲ್ಕು ತಂಡಗಳು ರಣತಂತ್ರ ಎಣೆಯುವಲ್ಲಿ ನಿರತರಾಗಿರುತ್ತಿದ್ದಂತೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಎಲ್ಲಾ ತಂಡಗಳಿಗೂ ಸೂಕ್ತ ಸಲಹೆಯೊಂದನ್ನು ನೀಡಿ ಗಮನ ಸೆಳೆದಿದ್ದಾರೆ. ಅದೇನೆಂದರೆ ಟಾಸ್ ವೇಳೆ ತೆಗೆದುಕೊಳ್ಳುವ ತೀರ್ಮಾನ.

ಹೌದು, ಪ್ಲೇ ಆಫ್ ಪಂದ್ಯದ ವೇಳೆ ಟಾಸ್ ಗೆದ್ದರೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎಂದು ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಯುಎಇ ಪಿಚ್​ಗಳು ಸೆಕೆಂಡ್ ಬ್ಯಾಟಿಂಗ್​ಗೆ ಹೊಂದಿಕೊಳ್ಳಲು ಶುರುವಾಗಿದೆ. ಹೀಗಾಗಿ ಎರಡನೇ ಇನಿಂಗ್ಸ್​​ನಲ್ಲಿ ಬೌಲಿಂಗ್ ಮಾಡುವುದು ಕಷ್ಟಕರ ಎಂದಿದ್ದಾರೆ.

ಐಪಿಎಲ್ ಟೂರ್ನಿಯ ಆರಂಭಿಕ ಹಂತದಲ್ಲಿ ಯುಎಇ ಪಿಚ್​ಗಳು ವಿರುದ್ಧ ಸ್ಥಿತಿಯಲ್ಲಿತ್ತು. ಮೊದಲು ಬ್ಯಾಟಿಂಗ್ ಮಾಡುವುದು ಎಲ್ಲಾ ತಂಡಗಳಿಗೆ ಅನುಕೂಲಕವಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಲು ಆರಂಭಿಸಿದೆ. ಅದರಂತೆ ಪರಿಸ್ಥಿತಿಯನ್ನು ಮೀರಿ ಎಲ್ಲ ತಂಡಗಳು ಚೇಸ್ ಮಾಡುವುದನ್ನು ಆಯ್ಕೆ ಮಾಡಿಕೊಂಡಿತು. ಅದರಲ್ಲಿ ಯಶಸ್ಸು ಕೂಡ ಸಾಧಿಸಿದೆ. ಇದಕ್ಕೆ ಮುಖ್ಯ ಕಾರಣ ಯುಎಇನಲ್ಲಿ ಬದಲಾಗಿರುವ ಹವಾಮಾನ ಎಂದು ಸಚಿನ್ ತಿಳಿಸಿದ್ದಾರೆ.

ಟೂರ್ನಿ ಆರಂಭದ ವೇಳೆ ಸೆಕೆಂಡ್ ಇನಿಂಗ್ಸ್​ ಬ್ಯಾಟಿಂಗ್ ವೇಳೆ ಪಿಚ್ ಹೆಚ್ಚು ಉಷ್ಣಾಂಶದಿಂದ ಕೂಡಿರುತ್ತಿತ್ತು. ಆದರೆ ಕಳೆದ 7-8 ದಿನಗಳಲ್ಲಿ ಚೇಸಿಂಗ್ ಮಾಡುತ್ತಿರುವ ತಂಡಗಳು ಯಶಸ್ವಿಯಾಗುತ್ತಿದೆ. ಇದಕ್ಕೂ ಮುನ್ನ ದುಬೈ ಹಾಗೂ ಅಬುಧಾಬಿಯಲ್ಲಿ ರನ್ ಬೆನ್ನತ್ತಲು ವಿಫಲವಾಗುತ್ತಿತ್ತು. ಇದೀಗ ಪಿಂಚ್​ಗಳು ಚೇಸಿಂಗ್​ಗೆ ಸಹಕಾರಿಯಾಗಿದೆ ಎಂದು ತೆಂಡೂಲ್ಕರ್ ವಿವರಿಸಿದ್ದಾರೆ.

ಸೂರ್ಯಾಸ್ತದಲ್ಲಿ ಬಲಾವಣೆಯಾಗಿದ್ದು, ಅದರಂತೆ ಸೂರ್ಯ ಬೇಗನೆ ಅಸ್ತಮಿಸುತ್ತಿದ್ದಾನೆ. ಹೀಗಾಗಿ ದ್ವಿತಿಯಾರ್ಧದಲ್ಲಿ ಪಿಚ್​ ಬೌಲರುಗಳಿಗೆ ಸಹಕಾರಿಯಾಗುತ್ತಿದೆ. ಅದರಲ್ಲೂ ಸೆಕೆಂಡ್ ಇನಿಂಗ್ಸ್​ನಲ್ಲಿ ತಾಪಮಾನದ ಬದಲಾವಣೆಯಿಂದ ಚೆಂಡು ಒದ್ದೆಯಾದಾಗ, ಅದು ಸ್ಕಿಡ್ ಆಗುತ್ತದೆ. ಇದರಿಂದ ಬ್ಯಾಟಿಂಗ್ ಸುಲಭವಾಗುತ್ತಿದೆ ಎಂದು ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.

ಹೀಗಾಗಿ ಪ್ಲೇ ಆಫ್ ಪಂದ್ಯಗಳಲ್ಲಿ ಚೇಸಿಂಗ್ ಅನುಕೂಲ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ಅಭಿಪ್ರಾಯಪಟ್ಟಿದ್ದಾರೆ. ಇದಾಗ್ಯೂ ಮುಂಬೈ ಇಂಡಿಯನ್ಸ್ ಹಾಗು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರೋಹಿತ್ ಪಡೆ ಜಯ ಸಾಧಿಸಿದೆ.

ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಮುಂಬೈ ಕೊನೆಯ 6 ಓವರ್​ನಲ್ಲಿ 92 ರನ್ ಕಲೆಹಾಕಿರುವುದು. ಅಂದರೆ ಮೊದಲಾರ್ಧದ ಡೆತ್​ ಓವರ್​ನಲ್ಲಿ ಪಿಚ್​ ಬ್ಯಾಟ್ಸ್​ಮನ್​ಗಳಿಗೆ ಸಹಕಾರಿಯಾಗಿತ್ತು ಎನ್ನಬಹುದು. ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿದ್ದೂ ಕೂಡ ತಂಡಕ್ಕೆ ಮುಳುವಾಯಿತು. ಇದರ ಹೊರತಾಗಿ ಒಂದು ಹಂತದಲ್ಲಿ ಸ್ಟೋಯಿನಿಸ್ ಹಾಗೂ ಅಕ್ಷರ್ ಪಟೇಲ್ ಉತ್ತಮವಾಗಿ ಬ್ಯಾಟ್ ಬೀಸಿದ್ದರು.POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: IPL 2020: ಇಲ್ಲಿವರೆಗೂ ಈತ ಹೇಳಿದ ಭವಿಷ್ಯ ನಿಜವಾಗಿದೆ: ಈ ಬಾರಿ ಕಪ್ ಗೆಲ್ಲುವ ತಂಡವನ್ನೂ ತಿಳಿಸಿದ್ದಾನೆ..!
Published by: zahir
First published: November 6, 2020, 4:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories