IPL

  • associate partner
HOME » NEWS » Ipl » IPL 2020 RR VS SRH PREVIEW BUTTLER RASHIDTHE MEN IN FOCUS IN BATTLE FOR PLAY OFFS VB

IPL 2020, RR vs SRH: ಸ್ಮಿತ್-ವಾರ್ನರ್ ನಡುವೆ ಕಾದಾಟ: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಯಾರಿಗೆ ಗೆಲುವು?

ಮಧ್ಯಮ ಕ್ರಮಾಂಕದಲ್ಲಿ ಜೋಸ್ ಬಟ್ಲರ್ ಅವರನ್ನು ಕಣಕ್ಕಿಳಿಸಿ ಯಶಸ್ಸಯ ಕಂಡಿರುವ ಸ್ಮಿತ್, ಸನ್‌ರೈಸರ್ಸ್‌ ವಿರುದ್ಧವೂ ಇದೇ ಮಾರ್ಗ ಅನುಸರಿಸುವ ಸಾಧ್ಯತೆಗಳಿವೆ.

news18-kannada
Updated:October 22, 2020, 2:02 PM IST
IPL 2020, RR vs SRH: ಸ್ಮಿತ್-ವಾರ್ನರ್ ನಡುವೆ ಕಾದಾಟ: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಯಾರಿಗೆ ಗೆಲುವು?
RR vs SRH
  • Share this:
ದುಬೈ (ಅ. 22): ಐಪಿಎಲ್​ನಲ್ಲಿ ಇಂದು ನಡೆಯಲಿರುವ 40ನೇ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಹಾಗೂ ಡೇವಿಡ್ ವಾರ್ನರ್ ನೇತೃತ್ವದ ಸನ್​ರೈಸರ್ಸ್​ ಹೈದರಾಬಾದ್ ತಂಡಗಳು ಸೆಣೆಸಾಟ ನಡೆಸಲಿವೆ. ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಮುಂದಿನ ಹಂತಕ್ಕೆ ತಲುಪಲು ಉಭಯ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದೆ.

ಹೈದರಾಬಾದ್ ಆಡಿರುವ 9 ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯಗಳಲ್ಲಿ ಗೆದ್ದು ಆರರಲ್ಲಿ ಸೋಲು ಕಂಡಿದೆ. ಹೀಗಾಗಿ 6 ಅಂಕದೊಂದಿಗೆ 7ನೇ ಸ್ಥಾನದಲ್ಲಿದೆ. ಇತ್ತ ರಾಜಸ್ಥಾನ್ ಸ್ಥಿತಿ ಕೂಡ ಭಿನ್ನವಾಗಿಲ್ಲ. ಆಡಿರುವ 10 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಆರರಲ್ಲಿ ಸೋತಿದೆ. 8 ಅಂಕದೊಂದಿಗೆ 6ನೇ ಸ್ಥಾನದಲ್ಲಿದೆ.

IPL 2020 Points Table: ಆರ್​ಸಿಬಿಗೆ ಪ್ಲೇಆಫ್​ ಖಚಿತವಾಗಲು ಸಾಕು ಇನ್ನೊಂದೇ ಗೆಲುವು!

ಕಳೆದ ಪಂದ್ಯದಲ್ಲಿ ಹೈದರಾಬಾದ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ಸೂಪರ್ ಓವರ್​​ನಲ್ಲಿ ಸೋತಿತ್ತು. ಹೀಗಾಗಿ ಗೆಲುವಿನ ಲಯಕ್ಕೆ ಮರಳಬೇಕಾದ ಅನಿವಾರ್ಯತೆ ಇದೆ. ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯಿಸಿ ಗೆಲುವಿನ ಲಯಕ್ಕೆ ಮರಳಿರುವ ಸ್ಮಿತ್ ಪಡೆ ಮತ್ತೊಂದು ಗೆಲುವವನ್ನು ಎದುರುನೋಡುತ್ತಿದೆ.

ಮಧ್ಯಮ ಕ್ರಮಾಂಕದಲ್ಲಿ ಜೋಸ್ ಬಟ್ಲರ್ ಅವರನ್ನು ಕಣಕ್ಕಿಳಿಸಿ ಯಶಸ್ಸಯ ಕಂಡಿರುವ ಸ್ಮಿತ್, ಸನ್‌ರೈಸರ್ಸ್‌ ವಿರುದ್ಧವೂ ಇದೇ ಮಾರ್ಗ ಅನುಸರಿಸುವ ಸಾಧ್ಯತೆಗಳಿವೆ. ಮಧ್ಯಮ ಕ್ರಮಾಂಕದಿಂದ ಆರಂಭಿಕನಾಗಿ ಬಡ್ತಿ ನೀಡಿದರೂ ರಾಬಿನ್ ಉತ್ತಪ್ಪ ಅವರಿಂದ ನಿರೀಕ್ಷಿತ ನಿರ್ವಹಣೆ ಬಂದಿಲ್ಲ. ಜತೆಗೆ ಆಲ್ರೌಂಡರ್ ಬೆನ್ ಸ್ಟೋಕ್ಸ್ ಕೂಡ ಸಿಡಿದಿಲ್ಲ. ಆರಂಭಿಕ 2 ಪಂದ್ಯಗಳಲ್ಲಿ ಸಿಡಿದಿದ್ದ ಸಂಜು ಸ್ಯಾಮ್ಸನ್ ಬಳಿಕ ಸತತ ವೈಫಲ್ಯರಾಗುತ್ತಿದ್ದಾರೆ.

ಬೌಲಿಂಗ್​ನಲ್ಲಿ ಜೋಫ್ರಾ ಆರ್ಚರ್​, ಶ್ರೇಯಸ್ ಗೋಪಾಲ್, ರಾಹುಲ್ ತೆವಾಟಿಯಾ, ಕಾರ್ತಿಕ್ ತ್ಯಾಗಿ ಉತ್ತಮವಾಗಿ ಸ್ಪೆಲ್ ಮಾಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಸಿಎಸ್​ಕೆ ಆಟಗಾರರನ್ನು ಕೇವಲ 125 ರನ್​ಗಳಿಗೆ ಕಟ್ಟಿಹಾಕಿದ್ದರು.

ಎರಡು ಮೇಡಿನ್​, ಮೂರು ವಿಕೆಟ್​; ಟ್ರೋಲ್​ ಮಾಡುವವರಿಗೆ ಉತ್ತರ ಕೊಟ್ಟ ಸಿರಾಜ್​ ಬೆಳೆದು ಬಂದಿದ್ದು ಕೊಳಗೇರಿಯಲ್ಲಿ!

ಸನ್​​ ರೈಸರ್ಸ್​ ಹೈದರಾಬಾದ್​ ಬ್ಯಾಟಿಂಗ್​ ಹಾಗೂ ಬೌಲಿಂಗ್​ ವಿಭಾಗದಲ್ಲಿ ಸಮತೋಲನದಿಂದ ಕೂಡಿದೆ. ಆದರೆ, ಟಾಪ್​ ಆರ್ಡರ್​ ಬ್ಯಾಟ್ಸಮನ್​ಗಳು ಆರ್ಭಟಿಸಿದಾಗ ಮಾತ್ರ ದೊಡ್ಡ ಮಟ್ಟದ ರನ್​ ಕಲೆಹಾಕಬಹುದಾಗಿದೆ. ತಂಡಕ್ಕೆ ವಾರ್ನರ್​ ನಾಯಕನ ಆಟವಾಡುತ್ತಿದ್ದರೆ, ಬೈರ್​ ಸ್ಟೋವ್​​, ಮನೀಷ್​ ಪಾಂಡೆ ಹಾಗೂ ಕೇನ್ ವಿಲಿಯಮ್ಸನ್​​​ ತಮ್ಮ ಬ್ಯಾಟಿಂಗ್​ ಶಕ್ತಿ ತೋರಬೇಕಿದೆ. ಟಿ.ನಟರಾಜನ್ ಮತ್ತು ರಶೀದ್ ಖಾನ್ ಹೊರತುಪಡಿಸಿ ಉಳಿದ ಬೌಲರ್‌ಗಳು ನಿರೀಕ್ಷೆ ಉಳಿಸಿಕೊಳ್ಳುತ್ತಿಲ್ಲ.
Youtube Video

ಉಭಯ ತಂಡಗಳು ಇಲ್ಲಿಯವರೆಗೆ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 6 ಪಂದ್ಯಗಳಲ್ಲಿ ಹೈದರಾಬಾದ್ ತಂಡ ಗೆಲುವು ಕಂಡಿದ್ದರೆ, 6 ಪಂದ್ಯಗಳಲ್ಲಿ ರಾಜಸ್ಥಾನ ತಂಡ ಜಯ ಸಾಧಿಸಿದೆ.
Published by: Vinay Bhat
First published: October 22, 2020, 2:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories