RR vs SRH, IPL 2020 Live Score: ಪಾಂಡೆ-ಶಂಕರ್ ಶತಕದ ಜೊತೆಯಾಟ: ಗೆಲುವಿನತ್ತ ಎಸ್​ಆರ್​ಹೆಚ್

IPL 2020, Rajasthan Royals vs Sunrisers Hyderabad Live Score: ಉಭಯ ತಂಡಗಳು 12 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 6 ಪಂದ್ಯಗಳಲ್ಲಿ ಸನ್​ರೈಸರ್ಸ್​ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ಕೂಡ 6 ಪಂದ್ಯಗಳಲ್ಲಿ ಜಯ ಸಾಧಿಸಿದೆ.

RR vs SRH Live Score Updates

RR vs SRH Live Score Updates

 • Share this:
  ದುಬೈ (ಅ. 22): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಐಪಿಎಲ್​ನ 40ನೇ ಪಂದ್ಯ ನಡೆಯುತ್ತಿದ್ದು ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಸಾಧಾರಣ ಮೊತ್ತ ಕಲೆಹಾಕಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಉತ್ತಮ ಪ್ರದರ್ಶನ ನೀಡಿದ ಪರಿಣಾಮ ಆರ್​ಆರ್​ 20 ಓವರ್​ಗಳಲ್ಲಿ 154 ರನ್ ಗಳಿಸಿದೆ.

  ಸದ್ಯ ಟಾರ್ಗೆಟ್ ಬೆನ್ನಟ್ಟಿರುವ ಹೈದರಾಬಾದ್ ಆರಂಭದಲ್ಲೇ ಪ್ರಮುಖ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ನಾಯಕ ಡೇವಿಡ್ ವಾರ್ನರ್ ಮೊದಲ ಓವರ್​ನಲ್ಲೇ ಒಂದು ಬೌಂಡರಿ ಬಾರಿಸಿ ಔಟ್ ಆದರೆ, ಜಾನಿ ಬೈರ್​ಸ್ಟೋ 10 ರನ್​​ಗೆ ಬ್ಯಾಟ್ ಕೆಳಗಿಟ್ಟರು.

  ಈ ಸಂದರ್ಭ ಒಂದಾದ ಮನೀಶ್ ಪಾಂಡೆ ಹಾಗೂ ವಿಜಯ್ ಶಂಕರ್ ಸದ್ಯ ಭರ್ಜರಿ ಆಟ ಪ್ರದರ್ಶಿಸುತ್ತಿದ್ದಾರೆ. ಅದರಲ್ಲೂ ಪಾಂಡೆ ಆಕರ್ಷಕ ಅರ್ಧಶತಕ ಸಿಡಿಸಿ ಬ್ಯಾಟ್ ಬೀಸುತ್ತಿದ್ದಾರೆ. ಈ ಜೋಡಿ ಶತಕದ ಜೊತೆಯಾಟ ಆಡಿದೆ.

  ಇದಕ್ಕೂ ಮೊದಲು ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಆರ್​ ತಂಡದ ಆರಂಭದಲ್ಲೇ ಆಘಾತ ಅನುಭವಿಸಿತು. ಬೆನ್ ಸ್ಟೋಕ್ಸ್ ಜೊತೆ ಓಪನರ್ ಆಗಿ ಕಣಕ್ಕಿಳಿದ ರಾಬಿನ್ ಉತ್ತಪ್ಪ 13 ಎಸೆತಗಳಲ್ಲಿ 19 ರನ್ ಬಾರಿಸಿ ಔಟ್ ಆದರು. ಆದರೆ, ಎರಡನೇ ವಿಕೆಟ್​ಗೆ ಸ್ಟೋಕ್ಸ್​ ಹಾಗೂ ಸಂಜು ಸ್ಯಾಮ್ಸನ್ ಉತ್ತಮ ಜೊತೆಯಾಟ ಆಡಿದರು. ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಈ ಜೋಡಿ 56 ರನ್​ಗಳ ಕಾಣಿಕೆ ನೀಡಿತು.

  ಈ ಸಂದರ್ಭ ಬೌಲಿಂಗ್​ಗೆ ಇಳಿದ ಹೋಲ್ಡರ್ 36 ರನ್ ಬಾರಿಸಿದ್ದ ಸ್ಯಾಮ್ಸನ್ ಅವರನ್ನು ಬೌಲ್ಡ್ ಮಾಡಿದರು. ಇದರ ಬೆನ್ನಲ್ಲೆ 30 ರನ್ ಗಳಿಸಿದ್ದ ಸ್ಟೋಕ್ಸ್ ಕೂಡ ನಿರ್ಗಮಿಸಿದರು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಜೋಸ್ ಬಟ್ಲರ್ ಈ ಬಾರಿ ಕೇವಲ 9 ರನ್​ಗೆ ಸುಸ್ತಾದರು. ಸ್ಟೀವ್ ಸ್ಮಿತ್ 19 ರನ್ ಗಳಿಸಿದರಷ್ಟೆ. ಪ್ರಿಯಂ ಗರ್ಗ್​ 12 ಎಸೆತಗಳಲ್ಲಿ 20 ರನ್ ಚಚ್ಚಿದರು.

  ಅಂತಿಮವಾಗಿ ಆರ್​ಆರ್​ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. ಹೈದರಾಬಾದ್ ಪರ ಜೇಸನ್ ಹೋಲ್ಡರ್ 3 ವಿಕೆಟ್ ಕಿತ್ತರೆ, ರಶೀದ್ ಖಾನ್, ವಿಜಯ್ ಶಂಕರ್ ತಲಾ 1 ವಿಕೆಟ್ ಪಡೆದರು.

  ಸನ್​ರೈಸರ್ಸ್​ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಜಾನಿ ಬೇರ್‌ಸ್ಟೋ (ವಿಕೆಟ್‌ ಕೀಪರ್‌), ಮನೀಷ್ ಪಾಂಡೆ, ವಿಜಯ್ ಶಂಕರ್, ಪ್ರಿಯಂ ಗಾರ್ಗ್, ಜೇಸನ್ ಹೋಲ್ಡರ್, ರಶೀದ್ ಖಾನ್, ಅಬ್ದುಲ್ ಸಮದ್, ಶಹ್ಬಾಜ್ ನದೀಮ್, ಸಂದೀಪ್ ಶರ್ಮಾ, ಟಿ. ನಟರಾಜನ್.

  ರಾಜಸ್ಥಾನ್ ರಾಯಲ್ಸ್: ಜಾಸ್ ಬಟ್ಲರ್, ಬೆನ್ ಸ್ಟೋಕ್ಸ್, ರಾಬಿನ್ ಉತ್ತಪ್ಪ, ಸ್ಟೀವ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ರಾಹುಲ್ ತೇವಾಟಿಯಾ, ಶ್ರೇಯಸ್ ಗೋಪಾಲ್, ಜೋಫ್ರಾ ಆರ್ಚರ್, ಕಾರ್ತಿಕ್ ತ್ಯಾಗಿ, ಅಂಕಿತ್ ರಜಪೂತ್.
  Published by:Vinay Bhat
  First published: