IPL

  • associate partner

Aaron Finch: ಅತ್ತ ಎಬಿಡಿ ಗೆಲುವಿಗೆ ಹೋರಾಡುತ್ತಿದ್ದರೆ ಇತ್ತ ಸಿಗರೇಟ್ ಸೇದುತ್ತಿದ್ದ ಫಿಂಚ್: ವೈರಲ್ ವಿಡಿಯೋ ಇಲ್ಲಿದೆ

ಇಂತಹ ರೋಚಕ ಘಟ್ಟದ ಸ್ಥಿತಿಯಲ್ಲಿ ಎಲ್ಲರೂ ತುದಿಗಾಲಿನಲ್ಲಿ ನಿಂತು ಪಂದ್ಯ ನೋಡುತ್ತಿದ್ದರು. ಆದರೆ, ಆ್ಯರೋನ್ ಫಿಂಚ್ ಮಾತ್ರ ಯಾವುದೇ ಟೆನ್ಶನ್ ಇಲ್ಲದೆ ಡ್ರೆಸಿಂಗ್ ರೂಮ್​ನಲ್ಲಿ ಇ-ಸಿಗರೇಟ್ ಸೇದುತ್ತಿದ್ದರು.

news18-kannada
Updated:October 18, 2020, 2:03 PM IST
Aaron Finch: ಅತ್ತ ಎಬಿಡಿ ಗೆಲುವಿಗೆ ಹೋರಾಡುತ್ತಿದ್ದರೆ ಇತ್ತ ಸಿಗರೇಟ್ ಸೇದುತ್ತಿದ್ದ ಫಿಂಚ್: ವೈರಲ್ ವಿಡಿಯೋ ಇಲ್ಲಿದೆ
ಆ್ಯರೋನ್ ಫಿಂಚ್
  • Share this:
ಶನಿವಾರ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್​ನ 33ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ 7 ವಿಕೆಟ್​ಗಳ ಗೆಲುವು ದಾಖಲಿಸಿತು. ಎಬಿ ಡಿವಿಲಿಯರ್ಸ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೊಹ್ಲಿ ಪಡೆ ಟೂರ್ನಿಯಲ್ಲಿ 6ನೇ ಜಯ ತನ್ನದಾಗಿಸಿ ಪ್ಲೇ ಆಫ್ ಹಂತಕ್ಕೇರುವ ಸೂಚನೆ ನೀಡಿತು. ಈ ಪಂದ್ಯ ಕೊನೆಯ ಓವರ್​ ವರೆಗೂ ನಡೆದು ಸಾಕಷ್ಟು ರೋಚಕತೆ ಸೃಷ್ಟಿಸಿತ್ತು.

ಆರ್​ಸಿಬಿಗೆ ಕೊನೆಯ ಎರಡು ಓವರ್​ಗಳಲ್ಲಿ ಗೆಲ್ಲಲು ಬರೋಬ್ಬರಿ 35 ರನ್​ಗಳ ಅವಶ್ಯಕತೆಯಿತ್ತು. ರಾಜಸ್ಥಾನ್ ತಂಡ ಗೆಲುವು ನಮ್ಮದೇ ಎಂಬ ವಿಶ್ವಾಸದಲ್ಲಿದ್ದರೆ ಇತ್ತ ಆರ್​ಸಿಬಿ ಡಿವಿಲಿಯರ್ಸ್​ ಕ್ರೀಸ್​ನಲ್ಲಿದ್ದ ಕಾರಣ ಸಣ್ಣದೊಂದು ಹೋಪ್ ಇಟ್ಟುಕೊಂಡಿತ್ತು. ಆದರೆ, 19ನೇ ಓವರ್​ನಲ್ಲಿ ನಡೆದಿದ್ದು ಯಾರೂ ಊಹಿಸಲಾಗದ ಘಟನೆ.

IPL 2020: ಐಪಿಎಲ್​ನಲ್ಲಿಂದು ಡಬಲ್ ಧಮಾಕ: ಹೈದರಾಬಾದ್​ಗೆ ಕೋಲ್ಕತ್ತಾ ಸವಾಲ್: ಮುಂಬೈ-ಪಂಜಾಬ್ ಮುಖಾಮುಖಿ

ಜಯದೇವ್ ಉನಾದ್ಕಟ್ ಅವರ ಮೊದಲ ಮೂರು ಎಸೆತಗಳಲ್ಲಿ ಎಬಿಡಿ ಮೂರು ಸಿಕ್ಸರ್ ಸಿಡಿಸಿದರು. ಈ ಒಂದೇ ಓವರ್​ನಲ್ಲಿ ಬರೋಬ್ಬರಿ 25 ರನ್​ಗಳು ಹರಿದುಬಂತು. ಹೀಗಾಗಿ ಕೊನೆಯ ಓವರ್​​ನಲ್ಲಿ ಓವರ್​ನಲ್ಲಿ ಆರ್​ಸಿಬಿ ಗೆಲ್ಲಲು 10 ರನ್​ಗಳ ಅವಶ್ಯಕತೆಯಿತ್ತು. ತಂಡದ ಗೆಲುವಿಗೆ ಜೋಫ್ರಾ ಆರ್ಚರ್ ಬೌಲಿಂಗ್ ಮಾಡಲು ಸಿದ್ಧರಿದ್ದರೆ, ಇತ್ತ ಆರ್​ಸಿಬಿ ಪರ ಎಬಿಡಿ ವಿನ್ನಿಂಗ್ ಶಾಟ್ ಹೊಡೆಯಲು ಕಾತುರರಾಗಿದ್ದರು.

ಇಂತಹ ರೋಚಕ ಘಟ್ಟದ ಸ್ಥಿತಿಯಲ್ಲಿ ಎಲ್ಲರೂ ತುದಿಗಾಲಿನಲ್ಲಿ ನಿಂತು ಪಂದ್ಯ ನೋಡುತ್ತಿದ್ದರು. ಆದರೆ, ಆರ್​ಸಿಬಿ ಓಪನರ್, ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್ ಮಾತ್ರ ನಮ್ಮ ತಂಡ ಗೆದ್ದೇ ಗೆಲ್ಲುತ್ತೆ ಎಂದು ಯಾವುದೇ ಟೆನ್ಶನ್ ಇಲ್ಲದೆ ಡ್ರೆಸಿಂಗ್ ರೂಮ್​ನಲ್ಲಿ ಇ-ಸಿಗರೇಟ್ ಸೇದುತ್ತಿದ್ದರು. ಫಿಂಚ್ ಇ-ಸಿಗರೇಟ್ ಸೇದುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.





ಈ ಬಗ್ಗೆ ಅನೇಕರು ಕಮೆಂಟ್ ಮಾಡುತ್ತಿದ್ದು, ಐಪಿಎಲ್‌ ನಿಯಮಗಳು ಇಷ್ಟೊಂದು ಸಡಿಲವಾಗಿದೆಯೇ? ಎಂದೆಲ್ಲಾ ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಐಪಿಎಲ್ ಟೂರ್ನಿ ವೇಳೆ ಡ್ರೆಸಿಂಗ್‌ ರೂಮ್‌ನಲ್ಲಿ ಏನೆಲ್ಲಾ ಮಾಡುತ್ತಾರೆ ಎಂಬುದಕ್ಕೆ ಇದು ಉದಾಹರಣೆ, ಈ ರೀತಿ ಮಾಡಬಹುದಾ? ಎಂದು ಟ್ವೀಟ್‌ ಮಾಡಿದ್ದಾರೆ.

ಬ್ರಾವೋಗಿಂತ ಜಡೇಜಾ ಮೇಲೆಕೆ ಅಷ್ಟು ನಂಬಿಕೆ ಎಂದು ಪ್ರಶ್ನಿಸಿದವರಿಗೆ ಧೋನಿ ಕೊಟ್ರು ಉತ್ತರ





ಈ ಪಂದ್ಯದಲ್ಲಿ ಆರ್​ಸಿಬಿ 7 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಎಬಿ ಡಿವಿಲಿಯರ್ಸ್ ಕೇವಲ 22 ಎಸೆತಗಳಲ್ಲಿ 1 ಬೌಂಡರಿ, 6 ಮನಮೋಹಕ ಸಿಕ್ಸರ್ ಸಿಡಿಸಿ ಅಜೇಯ 55 ರನ್ ಚಚ್ಚಿದರು. ಜೊತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿದರು.
Published by: Vinay Bhat
First published: October 18, 2020, 2:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading