IPL

  • associate partner

IPL 2020, SRH vs KKR: ಎಸ್​ಆರ್​​ಹೆಚ್-ಕೆಕೆಆರ್ ರೋಚಕ ಪಂದ್ಯ: ಸೂಪರ್ ಓವರ್​​ನಲ್ಲಿ ಗೆದ್ದು ಬೀಗಿದ ಕೋಲ್ಕತ್ತಾ

IPL 2020, Sunrisers Hyderabad vs Kolkata Knight Riders: ಕೊನೆಯ ಓವರ್​ನಲ್ಲಿ ಗೆಲ್ಲಲು 19 ರನ್​ಗಳ ಅವಶ್ಯಕತೆಯಿತ್ತು. ರಸೆಲ್ ಬೌಲಿಂಗ್​ನಲ್ಲಿ ವಾರ್ನರ್ ಬೌಂಡರಿಗಳ ಮಳೆ ಸುರಿಸಿದರು. ಕೊನೆಯ ಎಸೆತದಲ್ಲಿ 2 ರನ್​ಗಳ ಅವಶ್ಯಕತೆಯಿತ್ತು. ವಾರ್ನರ್ ಒಂದು ರನ್ ಕಲೆಹಾಕಷ್ಟೇ ಶಕ್ತವಾಗಿ ಪಂದ್ಯ ಟೈ ಆಯಿತು.

news18-kannada
Updated:October 18, 2020, 7:50 PM IST
IPL 2020, SRH vs KKR: ಎಸ್​ಆರ್​​ಹೆಚ್-ಕೆಕೆಆರ್ ರೋಚಕ ಪಂದ್ಯ: ಸೂಪರ್ ಓವರ್​​ನಲ್ಲಿ ಗೆದ್ದು ಬೀಗಿದ ಕೋಲ್ಕತ್ತಾ
KKR
  • Share this:
ಅಬುಧಾಬಿ (ಅ. 18): ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ  ಸನ್​ರೈಸರ್ಸ್​ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಣ 13ನೇ ಆವೃತ್ತಿ ಐಪಿಎಲ್​ನ 35ನೇ ಪಂದ್ಯ ಟೈ ಆದ ಕಾರಣ ಸೂಪರ್ ಓವರ್ ನಡೆಯಿತು. ಇದರಲ್ಲಿ ಕೆಕೆಆರ್ ತಂಡ ಸುಲಭ ಜಯ ಸಾಧಿಸಿತು. ಲೂಕಿ ಫರ್ಗಿಸನ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ವಾರ್ನರ್ ಪಡೆ ಟೂರ್ನಿಯಲ್ಲಿ 6ನೇ ಸೋಲುಕಂಡಿತು. ಇತ್ತ ಕೆಕೆಆರ್ ಕೊನೆಗೂ ಸೋಲಿನ ಸುಳಿಯಿಂದ ಹೊರಬಂದಿದೆ.

ಕೆಕೆಆರ್ ನೀಡಿದ್ದ 164 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ಸ್ಫೋಟಕ ಆರಂಭ ಪಡೆದುಕೊಂಡಿತಾದರೂ ಬಳಿಕ ದಿಢೀರ್ ಕುಸಿತ ಕಂಡಿತು. ಓಪನರ್​ಗಳಾಗಿ ಕಣಕ್ಕಿಳಿದ ಕೇನ್ ವಿಲಿಯಮ್ಸನ್ ಹಾಗೂ ಜಾನಿ ಬೈರ್​​ಸ್ಟೋ ಬಿರುಸಿನ ಬ್ಯಾಟಿಂಗ್ ನಡೆಸಿದರು. ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡ ಇವರು, 5 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 50ರ ಅಂಚಿಗೆ ತಂದಿಟ್ಟಿರು.

ಆದರೆ, 7ನೇ ಓವರ್​ನಲ್ಲಿ ಕೇನ್ ವಿಲಿಯಮ್ಸನ್ (19 ಬಾಲ್, 29 ರನ್) ಔಟ್ ಆದರು. ಬಂದ ಬೆನ್ನಲ್ಲೇ ಪ್ರಿಯಂ ಗರ್ಗ್​(4) ನಿರ್ಗಮಿಸಿದರು. ಚೆನ್ನಾಗಿಯೇ ಆಡುತ್ತಿದ್ದ ಬೈರ್​ಸ್ಟೋ ಕೂಡ 28 ಎಸೆತಗಳಲ್ಲಿ 36 ರನ್ ಬಾರಿಸಿ ಔಟ್ ಆದರೆ ಮನೀಶ್ ಪಾಂಡೆ ಆಟ 6 ರನ್​ಗೆ ಅಂತ್ಯವಾಯಿತು. ಹೀಗೆ 57 ರನ್​ಗೆ ಮೊದಲ ವಿಕೆಟ್ ಕಳೆದುಕೊಂಡ ಹೈದರಾಬಾದ್ 82 ರನ್ ಆಗುವ ಹೊತ್ತಿಗೆ 4 ವಿಕೆಟ್ ಕೈಚೆಲ್ಲಿತು.




ವಾರ್ನರ್ ಜೊತೆಗೂಡಿ ಇನ್ನಿಂಗ್ಸ್​ ಕಟ್ಟಲು ಹೊರಟ ವಿಜಯ್ ಶಂಕರ್ 7 ರನ್​ಗೆ ಔಟ್ ಆದರು. ಅಂತಿಮ ಹಂತದಲ್ಲಿ ಅಬ್ಧುಲ್ ಸಮದ್(23) ಜೊತೆಗೂಡಿ ವಾರ್ನರ್ ಗೆಲುವಿಗೆ ಹೋರಾಟ ನಡೆಸಿದರು. ಕೊನೆಯ ಓವರ್​ನಲ್ಲಿ ಗೆಲ್ಲಲು 19 ರನ್​ಗಳ ಅವಶ್ಯಕತೆಯಿತ್ತು. ರಸೆಲ್ ಬೌಲಿಂಗ್​ನಲ್ಲಿ ವಾರ್ನರ್ ಬೌಂಡರಿಗಳ ಮಳೆ ಸುರಿಸಿದರು. ಕೊನೆಯ ಎಸೆತದಲ್ಲಿ 2 ರನ್​ಗಳ ಅವಶ್ಯಕತೆಯಿತ್ತು. ಕ್ರೀಸ್​ನಲ್ಲಿದ್ದ ವಾರ್ನರ್ ಒಂದು ರನ್ ಕಲೆಹಾಕಷ್ಟೇ ಶಕ್ತವಾಗಿ ಪಂದ್ಯ ಟೈ ಆಯಿತು. ಹೈದರಾಬಾದ್ ಕೂಡ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಕೆಕೆಆರ್ ಪರ ಲೂಕಿ ಫರ್ಗಿಸನ್ 3 ವಿಕೆಟ್ ಕಿತ್ತರೆ, ಪ್ಯಾಟ್ ಕಮಿನ್ಸ್ ಹಾಗೂ ವರುಣ್ ಚಕ್ರವರ್ತಿ, ಶಿವಂ ಮಾವಿ ತಲಾ 1 ವಿಕೆಟ್ ಪಡೆದರು.

ಸೂಪರ್ ಓವರ್:

ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್​ಆರ್​ ಕೇವಲ 2 ರನ್​ಗೆ ಆಲೌಟ್ ಆಯಿತು. ಲೂಕಿ ಫರ್ಗಿಸನ್ ಬೌಲಿಂಗ್​ನ ಮೊದಲ ಎಸೆತದಲ್ಲೇ ವಾರ್ನರ್ ಬೌಲ್ಡ್​ ಆದರು. 2ನೇ ಎಸೆತದಲ್ಲಿ ಸಮದ್ 2 ರನ್ ಕಲೆಹಾಕಿದರು. 3ನೇ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಹೈದರಾಬಾದ್ ಆಲೌಟ್ ಆಯಿತು.

3 ರನ್​ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿದ ಕೆಕೆಆರ್ ಪರ ಇಯಾನ್ ಮಾರ್ಗನ್ ಹಾಗೂ ದಿನೇಶ್ ಕಾರ್ತಿಕ್ ಕಣಕ್ಕಿಳಿದರು. ರಶೀದ್ ಖಾನ್ ಅವರ ಮೊದಲ ಎಸೆತ ಡಾಟ್ ಆದರೆ, ಎರಡನೇ ಎಸೆತದಲ್ಲಿ ಮಾರ್ಗನ್ ಸಿಂಗಲ್ ತೆಗೆದರು. ಮೂರನೇ ಎಸೆತದಲ್ಲಿ ಕಾರ್ತಿಕ್ ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. 4ನೇ ಎಸೆತದಲ್ಲಿ ಕಾರ್ತಿಕ್ 2 ರನ್ ಬಾರಿಸಿ ಕೆಕೆಆರ್ ರೋಚಕ ಗೆಲುವು ಕಂಡಿತು.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​ ಆರಂಭಿಸಿದ ಕೆಕೆಆರ್​ಗೆ ಓಪನರ್​​ಗಳಾದ ಶುಭ್ಮನ್ ಗಿಲ್ ಹಾಗೂ ರಾಹುಲ್ ತ್ರಿಪಾಠಿ ತಂಡಕ್ಕೆ ಸಾಧಾರಣ ಆರಂಭ ಒದಗಿಸಿದರಷ್ಟೆ. ಮೊದಲ 6 ಓವರ್​ನಲ್ಲಿ ಈ ಜೋಡಿ 48 ರನ್ ಕಲೆಹಾಕಿತು.

ತ್ರಿಪಾಠಿ 16 ಎಸೆತಗಳಲ್ಲಿ 23 ರನ್ ಬಾರಿಸಿ ಔಟ್ ಆದರು. ನಂತರ ನಿತೀಶ್ ರಾಣ ಜೊತೆಯಾದ ಗಿಲ್ ಒಂದಿಷ್ಟು ರನ್ ಗಳಿಸಿದರು. ಆದರೆ, ದೊಡ್ಡ ಮೊತ್ತ ಗಳಿಸುವಲ್ಲಿ ಎಡವಿದರು. ಗಿಲ್ 37 ಎಸೆತಗಳಲ್ಲಿ 36 ರನ್ ಬಾರಿಸಿ ನಿರ್ಗಮಿಸಿದರು. ರಾಣ 20 ಎಸೆತಗಳಲ್ಲಿ 29 ರನ್ ಸಿಡಿಸಿದರು.





ಆ್ಯಂಡ್ರೋ ರಸೆಲ್ ಈ ಬಾರಿಯೂ ವೈಫಲ್ಯ ಅನುಭವಿಸಿ ಕೇವಲ 9 ರನ್​ಗೆ ಬ್ಯಾಟ್ ಕೆಳಗಿಟ್ಟರು. ಅಂತಿಮ ಹಂತದಲ್ಲಿ ನಾಯಕ ಇಯಾನ್ ಮಾರ್ಗನ್ ಹಾಗೂ ದಿನೇಶ್ ಕಾರ್ತಿಕ್ ಜೊತೆಯಾಗಿ ಬ್ಯಾಟ್ ಬೀಸಿದ ಪರಿಣಾಮ ತಂಡದ ಮೊತ್ತ 150ರ ಗಡಿ ದಾಟಿತು.

ಮಾರ್ಗನ್ 23 ಎಸೆತಗಳಲ್ಲಿ 34 ರನ್ ಗಳಿಸಿದರೆ, ಕಾರ್ತಿಕ್ 14 ಎಸೆತಗಳಲ್ಲಿ ಅಜೇಯ 29 ರನ್ ಬಾರಿಸಿದರು. ಕೆಕೆಆರ್ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಹೈದರಾಬಾದ್ ಪರ ಟಿ. ನಟರಾಜನ್ 2 ವಿಕೆಟ್ ಕಿತ್ತರೆ, ಬಸಿಲ್ ಥಂಪಿ, ವಿಜಯ್ ಶಂಕರ್ ಹಾಗೂ ರಶೀದ್ ಖಾನ್ ತಲಾ 1 ವಿಕೆಟ್ ಪಡೆದರು.
Published by: Vinay Bhat
First published: October 18, 2020, 7:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading