IPL

  • associate partner

RR vs RCB: ಎಬಿಡಿ ಅಬ್ಬರದ ಮುಂದೆ ಮರೆಯದಿರಿ ಚೊಚ್ಚಲ ಪಂದ್ಯದಲ್ಲೇ ಆರ್​ಸಿಬಿ ಹುಡುಗನ ರೋಚಕ ಕ್ಯಾಚ್

IPL 2020, RR vs RCB: ಅಂತಿಮ ಓವರ್​ನ ಕ್ರಿಸ್ ಮೊರೀಸ್ ಅವರ 2ನೇ ಎಸೆತದಲ್ಲಿ ಸ್ಮಿತ್(57) ಔಟ್ ಆಗುವ ಮೂಲಕ ತಮ್ಮ ಇನ್ನಿಂಗ್ಸ್​ ಅಂತ್ಯಗೊಳಿಸಿದರು. ಸ್ಮಿತ್ ಔಟ್ ಆಗಲು ಪ್ರಮುಖ ಕಾರಣ ಐಪಿಎಲ್​ನಲ್ಲಿ ತನ್ನ ಚೊಚ್ಚಲ ಪಂದ್ಯವನ್ನಾಡಿದ ಶಹ್ಬಾಜ್ ಅಹ್ಮದ್ ಹಿಡಿದ ಕ್ಯಾಚ್.

news18-kannada
Updated:October 18, 2020, 1:00 PM IST
RR vs RCB: ಎಬಿಡಿ ಅಬ್ಬರದ ಮುಂದೆ ಮರೆಯದಿರಿ ಚೊಚ್ಚಲ ಪಂದ್ಯದಲ್ಲೇ ಆರ್​ಸಿಬಿ ಹುಡುಗನ ರೋಚಕ ಕ್ಯಾಚ್
ಶಹ್ಬಾಜ್ ಅಹ್ಮದ್ ಹಿಡಿದ ಅದ್ಭುತ ಕ್ಯಾಚ್.
  • Share this:
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ನಡುವಣ ಐಪಿಎಲ್ ಪಂದ್ಯ ನಿಜಕ್ಕೂ ರೋಚಕವಾಗಿತ್ತು. ಆರ್​ಆರ್ ಕಡೆ ವಾಲಿದ್ದ ಗೆಲುವನ್ನ ಎಬಿ ಡಿವಿಲಿಯರ್ಸ್​ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಆರ್​​ಸಿಬಿ ಕಡೆ ತಿರುಗಿಸಿದರು. ಕೊನೆಯ ಎರಡು ಓವರ್​ಗಳಲ್ಲಿ ಎಬಿಡಿ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಕೊಹ್ಲಿ ಪಡೆ 7 ವಿಕೆಟ್​ಗಳ ಬೊಂಬಾಟ್ ಜಯದೊಂದಿಗೆ ತನ್ನ ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ಬಲಿಷ್ಠಗೊಳಿಸಿತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರ್​ಆರ್​ ಉತ್ತಮ ಆರಂಭ ಪಡೆದುಕೊಂಡರು ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡಿತು. ಆದರೆ, ತಂಡದ ನಾಯಕ ಸ್ಟೀವ್ ಸ್ಮಿತ್ ಕ್ರೀಸ್ ಕಚ್ಚಿ ಆಡಿ ತಂಡಕ್ಕೆ ನೆರವಾದರು. ಕೊನೆಯ ಹಂತದವರೆಗೂ ತಂಡಕ್ಕೆ ಆಸರೆಯಾದರು.

IPL 2020, RR vs RCB: ಸೋಲುವ ಪಂದ್ಯವನ್ನು ಗೆಲ್ಲಿಸಿ ಕೊಟ್ಟ ಡಿವಿಲಿಯರ್ಸ್​: ಆರ್​ಸಿಬಿಗೆ 7 ವಿಕೆಟ್​ಗಳ ಭರ್ಜರಿ ಜಯ

ಆದರೆ, ಅಂತಿಮ ಓವರ್​ನ ಕ್ರಿಸ್ ಮೊರೀಸ್ ಅವರ 2ನೇ ಎಸೆತದಲ್ಲಿ ಸ್ಮಿತ್(57) ಔಟ್ ಆಗುವ ಮೂಲಕ ತಮ್ಮ ಇನ್ನಿಂಗ್ಸ್​ ಅಂತ್ಯಗೊಳಿಸಿದರು. ಸ್ಮಿತ್ ಔಟ್ ಆಗಲು ಪ್ರಮುಖ ಕಾರಣ ಐಪಿಎಲ್​ನಲ್ಲಿ ತನ್ನ ಚೊಚ್ಚಲ ಪಂದ್ಯವನ್ನಾಡಿದ ಶಹ್ಬಾಜ್ ಅಹ್ಮದ್ ಹಿಡಿದ ಕ್ಯಾಚ್. ಬೌಂಡರಿ ಲೈನ್ ಬಳಿ ಡೈ ಹೊಡೆದು ಶಹ್ಬಾಜ್ ಅವರು ರೋಚಕ ಕ್ಯಾಚ್ ಹಿಡಿದರು.




ಆರ್​ಸಿಬಿ ಪರ ಐಪಿಎಲ್​ಗೆ ಇಂದು ಪದಾರ್ಪಣೆ ಮಾಡಿದ ಶಹ್ಬಾಜ್ ಬೌಲಿಂಗ್​ನಲ್ಲಿ ಅಷ್ಟೊಂದು ಕಮಾಲ್ ಮಾಡಲಿಲ್ಲ. 2 ಓವರ್​ನಲ್ಲಿ 18 ನೀಡಿದರು. ಆದರೆ, ಫೀಲ್ಡಿಂಗ್​ನಲ್ಲಿ ಅದ್ಭುತ ಪ್ರದರ್ಶನ ತೋರಿದ ಇವರು ಮೊದಲ ಪಂದ್ಯದಲ್ಲೇ ಆರ್​ಸಿಬಿ ಅಭಿಮಾನಿಗಳ ಮನಗೆದ್ದರು. ಸದ್ಯ ಇವರ ಈ ರೋಚಕ ಕ್ಯಾಚ್​ನ ವಿಡಿಯೋ ವೈರಲ್ ಆಗುತ್ತಿದೆ.

ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಆರ್​ಆರ್ ರಾಬಿನ್ ಉತ್ತಪ್ಪ ಅವರ 41 ಹಾಗೂ ಸ್ಟೀವ್ ಸ್ಮಿತ್ 57 ರನ್​ಗಳ ನೆರವಿನಿಂದ 20 ಓವರ್​​ನಲ್ಲಿ 177 ರನ್ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟಿದ ಆರ್​ಸಿಬಿ ನಿಧಾಗತಿಯ ಆರಂಭ ಪಡೆದುಕೊಂಡಿತು. ಮೊದಲ 10 ಓವರ್​ನಲ್ಲಿ ಆರ್​ಸಿಬಿ ರನ್ ಕಲೆಹಾಕಲು ಪರದಾಡಿತು.

IPL 2020 Live Score, DC vs CSK

ಕೊಹ್ಲಿ ವಿಕೆಟ್ ಕಳೆದುಕೊಂಡ ಬಳಿಕ ಆರ್​ಸಿಬಿ ಸೋಲಿನ ಸುಳಿಗೆ ಸಿಲುಕಿತು. ಈ ಪಂದ್ಯದಲ್ಲಿ ಆರ್​ಸಿಬಿ ಸೋಲುವುದು ಖಚಿತ ಎಂದೇ ನಂಬಲಾಗಿತ್ತು. ಕೊನೆಯ 2 ಓವರ್​ನಲ್ಲಿ ಆರ್​ಸಿಬಿ ಗೆಲ್ಲಲು ಬರೋಬ್ಬರಿ 35 ರನ್​ಗಳ ಅವಶ್ಯಕತೆಯಿತ್ತು. ಆದರೆ, ಜಯದೇವ್ ಉನಾದ್ಕಟ್ ಮಾಡಿದ 19ನೇ ಓವರ್ ಇಡೀ ಪಂದ್ಯದ ಗತಿಯನ್ನೇ ಬದಲಾಯಿಸಿತು. ಎಬಿಡಿ ಹ್ಯಾಟ್ರಿಕ್ ಸಿಕ್ಸ್​ ಸಿಡಿಸಿ ಈ ಓವರ್​ನಲ್ಲಿ 25 ರನ್ ಮೂಡಿಬಂತು.

ಡಿವಿಲಿಯರ್ಸ್​ ಅವರ ಸ್ಫೋಟಕ ಬ್ಯಾಟಿಂಗ್​ನ ಸಂಪೂರ್ಣ ವಿಡಿಯೋ:



ಈ ಮೂಲಕ ಆರ್​ಸಿಬಿ ಗೆಲುವು ಸಾಧಿಸಿ ಸದ್ಯ  12 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ. ಡಿವಿಲಿಯರ್ಸ್ ಕೇವಲ 22 ಎಸೆತಗಳಲ್ಲಿ 1 ಬೌಂಡರಿ, 6 ಮನಮೋಹಕ ಸಿಕ್ಸರ್ ಸಿಡಿಸಿ ಅಜೇಯ 55 ರನ್ ಚಚ್ಚಿದರು. ಜೊತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಬಾಜಿಕೊಂಡರು.
Published by: Vinay Bhat
First published: October 17, 2020, 8:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading