IPL

  • associate partner

SRH vs KKR, IPL 2020 Live Score: ಕೆಕೆಆರ್ ಮತ್ತೆ ಕಳಪೆ ಆಟ

IPL 2020, Sunrisers Hyderabad vs Kolkata Knight Riders Live Score: ಉಭಯ ತಂಡಗಳು ಈವರೆಗೆ 18 ಬಾರಿ ಮುಖಾಮುಖಿ ಆಗಿದ್ದು, ಸನ್​ರೈಸರ್ಸ್​ ಹೈದರಾಬಾದ್ 7 ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್​ 11 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಇತಿಹಾಸವಿದೆ.

news18-kannada
Updated:October 18, 2020, 5:01 PM IST
SRH vs KKR, IPL 2020 Live Score: ಕೆಕೆಆರ್ ಮತ್ತೆ ಕಳಪೆ ಆಟ
SRH vs KKR Live Score Updates
  • Share this:
ಅಬುಧಾಬಿ (ಅ. 18): ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 13ನೇ ಆವೃತ್ತಿ ಐಪಿಎಲ್​ನ 35ನೇ ಪಂದ್ಯದಲ್ಲಿ ಡೇವಿಡ್ ವಾರ್ನರ್ ನೇತೃತ್ವದ ಸನ್​ರೈಸರ್ಸ್​ ಹೈದರಾಬಾದ್ ಹಾಗೂ ಇಯಾನ್ ಮಾರ್ಗನ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡಗಳು ಮುಖಾಮುಖಿ ಆಗುತ್ತಿವೆ.

ಈಗಾಗಲೇ ಟಾಸ್ ಸೋತು ಬ್ಯಾಟಿಂಗ್​ಗೆ ನಡೆಸುತ್ತಿರುವ ಕೆಕೆಆರ್ ಉತ್ತಮ ಮೊತ್ತದತ್ತ ದಾಪುಗಾಲಿಡುತ್ತಿದೆ. ಓಪನರ್​​ಗಳಾದ ಶುಭ್ಮನ್ ಗಿಲ್ ಹಾಗೂ ರಾಹುಲ್ ತ್ರಿಪಾಠಿ ತಂಡಕ್ಕೆ ಸಾಧಾರಣ ಆರಂಭ ಒದಗಿಸಿದರಷ್ಟೆ. ಮೊದಲ 6 ಓವರ್​ನಲ್ಲಿ ಈ ಜೋಡಿ 48 ರನ್ ಕಲೆಹಾಕಿತು.

ತ್ರಿಪಾಠಿ 16 ಎಸೆತಗಳಲ್ಲಿ 23 ರನ್ ಬಾರಿಸಿ ಔಟ್ ಆದರು. ನಂತರ ನಿತೀಶ್ ರಾಣ ಜೊತೆಯಾದ ಗಿಲ್ ಒಂದಿಷ್ಟು ರನ್ ಗಳಿಸಿದರು. ಆದರೆ, ದೊಡ್ಡ ಮೊತ್ತ ಗಳಿಸುವಲ್ಲಿ ಎಡವಿದರು. ಗಿಲ್ 37 ಎಸೆತಗಳಲ್ಲಿ 36 ರನ್ ಬಾರಿಸಿ ನಿರ್ಗಮಿಸಿದರು. ರಾಣ 20 ಎಸೆತಗಳಲ್ಲಿ 29 ರನ್ ಸಿಡಿಸಿದರು.

ಸದ್ಯ ಇಯಾನ್ ಮಾರ್ಗನ್ ಹಾಗೂ ಆ್ಯಂಡ್ರೋ ರಸೆಲ್ ಕ್ರೀಸ್​ನಲ್ಲಿದ್ದಾರೆ.

ಇಂದಿನ ಪಂದ್ಯಕ್ಕೆ ಕೆಕೆಆರ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಕ್ರಿಸ್ ಗ್ರೀನ್ ಹಾಗೂ ಪ್ರಸಿದ್ಧ್ ಕೃಷ್ಣ ಬದಲು, ಕುಲ್ದೀಪ್ ಯಾದವ್ ಮತ್ತು ಲೂಕಿ ಫರ್ಗಿನ್​ಸನ್ ಸ್ಥಾನ ಪಡೆದುಕೊಂಡಿದ್ದಾರೆ. ಇತ್ತ ಹೈದರಾಬಾದ್ ತಂಡದಲ್ಲೂ ಎರಡು ಬದಲಾವಣೆ ಮಾಡಲಾಗಿದೆ. ಖಲೀಲ್ ಬದಲು ಬಸಿಲ್ ಥಂಪಿ ಹಾಗೂ ಶಹ್ಬಾಜ್ ನದೀಂ ಬದಲು ಅಬ್ದುಲ್ ಸಮದ್ ಕಣಕ್ಕಿಳಿಯುತ್ತಿದ್ದಾರೆ.

ಕೆಕೆಆರ್: ಶುಭ್ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿಕೀ), ಇಯಾನ್ ಮಾರ್ಗನ್ (ನಾಯಕ), ಆಂಡ್ರೆ ರಸೆಲ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ವರುಣ್ ಚಕ್ರವರ್ತಿ, ವರಣ್ ಚಕ್ರವರ್ತಿ, ಲೂಕಿ ಫರ್ಗಿನ್​ಸನ್.

ಸನ್​ರೈಸರ್ಸ್​ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಜಾನಿ ಬೇರ್‌ಸ್ಟೋ (ವಿಕೆಟ್‌ ಕೀಪರ್‌), ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್, ವಿಜಯ್ ಶಂಕರ್, ಪ್ರಿಯಂ ಗಾರ್ಗ್, ರಶೀದ್ ಖಾನ್, ಅಬ್ದುಲ್ ಸಮದ್, ಸಂದೀಪ್ ಶರ್ಮಾ, ಟಿ. ನಟರಾಜನ್, ಬಸಿಲ್ ಥಂಪಿ.


Aaron Finch: ಅತ್ತ ಎಬಿಡಿ ಗೆಲುವಿಗೆ ಹೋರಾಡುತ್ತಿದ್ದರೆ ಇತ್ತ ಸಿಗರೇಟ್ ಸೇದುತ್ತಿದ್ದ ಫಿಂಚ್: ವೈರಲ್ ವಿಡಿಯೋ ಇಲ್ಲಿದೆ

ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಎಸ್​ಆರ್​ಹೆಚ್ ಹಾಗೂ ಕೆಕೆಆರ್​ಗೆ ಈ ಪಂದ್ಯ ಮುಖ್ಯವಾಗಿದೆ. ಕೋಲ್ಕತ್ತಾ ತಂಡದಲ್ಲಿ ನಾಯಕತ್ವದ ಬದಲಾವಣೆ ಆದರೂ ತಂಡದ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಓಪನರ್​ಗಳು ಸೇರಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲ ತುಂಬಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ.

ಆ್ಯಂಡ್ರೊ ರಸೆಲ್​ಗೆ ಎಷ್ಟೇ ಅವಕಾಶ ಸಿಕ್ಕರು ಉಪಯೋಗಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಮೇಲೆ ಹೆಚ್ಚು ಗಮನ ಹರಿಸಬೇಕೆಂದು ನಾಯಕತ್ವದಿಂದ ಕೆಳಗಿಳಿದಿದ್ದರು. ಆದರೆ, ಕಳೆದ ಪಂದ್ಯದಲ್ಲಿ ಯಾವುದೇ ಕಮಾಲ್ ಮಾಡಲಿಲ್ಲ. ಇಯಾನ್ ಮಾರ್ಗನ್ ಏಕಾಂಗಿ ಹೋರಾಟಕ್ಕೆ ಯಾವೊಬ್ಬ ಬ್ಯಾಟ್ಸ್​ಮನ್​ ಸಾತ್ ನೀಡುತ್ತಿಲ್ಲ.

ಇತ್ತ ಕೆಕೆಆರ್ ರೀತಿಯಲ್ಲೇ ಹೈದರಾಬಾದ್ ಸ್ಥಿತಿ ಕೂಡ ಇದೆ. ಜಾನಿ ಬೈರ್​ಸ್ಟೋ, ಮನೀಶ್ ಪಾಂಡೆ ಯಶಸ್ಸು ಸಾಧಿಸುವಲ್ಲಿ ವಿಫಲರಾಗುತ್ತಿದ್ದಾರೆ. ಬೌಲಿಂಗ್​ನಲ್ಲಿ ರಶೀದ್ ಖಾನ್, ನಟರಾಜನ್ ಹೊರತುಪಡಿಸಿ ಬೇರೆಯವರಿಂದ ಸ್ಥಿರ ನಿರ್ವಹಣೆ ಕಾಣುತ್ತಿಲ್ಲ.

ಉಭಯ ತಂಡಗಳು ಈವರೆಗೆ 18 ಬಾರಿ ಮುಖಾಮುಖಿ ಆಗಿದ್ದು ಸನ್​ರೈಸರ್ಸ್​ ಹೈದರಾಬಾದ್ 7 ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ 11 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಇತಿಹಾಸವಿದೆ.
Published by: Vinay Bhat
First published: October 18, 2020, 3:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading