IPL

  • associate partner
HOME » NEWS » Ipl » IPL 2020 RR VS RCB LIVE CRICKET SCORE SUNRISERS HYDERABAD VS KOLKAT KNIGHT RIDERS KKR 163 5 VB

IPL 2020, SRH vs KKR: ಕಾರ್ತಿಕ್-ಮಾರ್ಗನ್ ಜೊತೆಯಾಟ: ಹೈದರಾಬಾದ್​ಗೆ 164 ರನ್ಸ್ ಟಾರ್ಗೆಟ್

IPL 2020, Sunrisers Hyderabad vs Kolkata Knight Riders: ಉಭಯ ತಂಡಗಳು ಈವರೆಗೆ 18 ಬಾರಿ ಮುಖಾಮುಖಿ ಆಗಿದ್ದು, ಸನ್​ರೈಸರ್ಸ್​ ಹೈದರಾಬಾದ್ 7 ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್​ 11 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಇತಿಹಾಸವಿದೆ.

news18-kannada
Updated:October 18, 2020, 5:22 PM IST
IPL 2020, SRH vs KKR: ಕಾರ್ತಿಕ್-ಮಾರ್ಗನ್ ಜೊತೆಯಾಟ: ಹೈದರಾಬಾದ್​ಗೆ 164 ರನ್ಸ್ ಟಾರ್ಗೆಟ್
KKR
  • Share this:
ಅಬುಧಾಬಿ (ಅ. 18): ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 13ನೇ ಆವೃತ್ತಿ ಐಪಿಎಲ್​ನ 35ನೇ ಪಂದ್ಯದಲ್ಲಿ ಡೇವಿಡ್ ವಾರ್ನರ್ ನೇತೃತ್ವದ ಸನ್​ರೈಸರ್ಸ್​ ಹೈದರಾಬಾದ್ ಹಾಗೂ ಇಯಾನ್ ಮಾರ್ಗನ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡಗಳು ಸೆಣೆಸಾಟ ನಡೆಸುತ್ತಿವೆ. ಕೆಕೆಆರ್ ತನ್ನ ಕಳಪೆ ಬ್ಯಾಟಿಂಗ್ ಮುಂದುವರೆಸಿದ್ದು, ಅಂತಿಮ ಹಂತದಲ್ಲಿ ಮಾರ್ಗನ್-ಕಾರ್ತಿಕ್ ಜೊತೆಯಾಟದ ನೆರವಿನಿಂದ 20 ಓವರ್​​ಗಳಲ್ಲಿ 163 ರನ್ ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್​ ಆರಂಭಿಸಿದ ಕೆಕೆಆರ್​ಗೆ ಓಪನರ್​​ಗಳಾದ ಶುಭ್ಮನ್ ಗಿಲ್ ಹಾಗೂ ರಾಹುಲ್ ತ್ರಿಪಾಠಿ ತಂಡಕ್ಕೆ ಸಾಧಾರಣ ಆರಂಭ ಒದಗಿಸಿದರಷ್ಟೆ. ಮೊದಲ 6 ಓವರ್​ನಲ್ಲಿ ಈ ಜೋಡಿ 48 ರನ್ ಕಲೆಹಾಕಿತು.

ತ್ರಿಪಾಠಿ 16 ಎಸೆತಗಳಲ್ಲಿ 23 ರನ್ ಬಾರಿಸಿ ಔಟ್ ಆದರು. ನಂತರ ನಿತೀಶ್ ರಾಣ ಜೊತೆಯಾದ ಗಿಲ್ ಒಂದಿಷ್ಟು ರನ್ ಗಳಿಸಿದರು. ಆದರೆ, ದೊಡ್ಡ ಮೊತ್ತ ಗಳಿಸುವಲ್ಲಿ ಎಡವಿದರು. ಗಿಲ್ 37 ಎಸೆತಗಳಲ್ಲಿ 36 ರನ್ ಬಾರಿಸಿ ನಿರ್ಗಮಿಸಿದರು. ರಾಣ 20 ಎಸೆತಗಳಲ್ಲಿ 29 ರನ್ ಸಿಡಿಸಿದರು.

ಆ್ಯಂಡ್ರೋ ರಸೆಲ್ ಈ ಬಾರಿಯೂ ವೈಫಲ್ಯ ಅನುಭವಿಸಿ ಕೇವಲ 9 ರನ್​ಗೆ ಬ್ಯಾಟ್ ಕೆಳಗಿಟ್ಟರು. ಅಂತಿಮ ಹಂತದಲ್ಲಿ ನಾಯಕ ಇಯಾನ್ ಮಾರ್ಗನ್ ಹಾಗೂ ದಿನೇಶ್ ಕಾರ್ತಿಕ್ ಜೊತೆಯಾಗಿ ಬ್ಯಾಟ್ ಬೀಸಿದ ಪರಿಣಾಮ ತಂಡದ ಮೊತ್ತ 150ರ ಗಡಿ ದಾಟಿತು.

ಮಾರ್ಗನ್ 23 ಎಸೆತಗಳಲ್ಲಿ 34 ರನ್ ಗಳಿಸಿದರೆ, ಕಾರ್ತಿಕ್ 14 ಎಸೆತಗಳಲ್ಲಿ ಅಜೇಯ 29 ರನ್ ಬಾರಿಸಿದರು. ಕೆಕೆಆರ್ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಹೈದರಾಬಾದ್ ಪರ ಟಿ. ನಟರಾಜನ್ 2 ವಿಕೆಟ್ ಕಿತ್ತರೆ, ಬಸಿಲ್ ಥಂಪಿ, ವಿಜಯ್ ಶಂಕರ್ ಹಾಗೂ ರಶೀದ್ ಖಾನ್ ತಲಾ 1 ವಿಕೆಟ್ ಪಡೆದರು.

ಇಂದಿನ ಪಂದ್ಯಕ್ಕೆ ಕೆಕೆಆರ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಕ್ರಿಸ್ ಗ್ರೀನ್ ಹಾಗೂ ಪ್ರಸಿದ್ಧ್ ಕೃಷ್ಣ ಬದಲು, ಕುಲ್ದೀಪ್ ಯಾದವ್ ಮತ್ತು ಲೂಕಿ ಫರ್ಗಿನ್​ಸನ್ ಸ್ಥಾನ ಪಡೆದುಕೊಂಡಿದ್ದಾರೆ. ಇತ್ತ ಹೈದರಾಬಾದ್ ತಂಡದಲ್ಲೂ ಎರಡು ಬದಲಾವಣೆ ಮಾಡಲಾಗಿದೆ. ಖಲೀಲ್ ಬದಲು ಬಸಿಲ್ ಥಂಪಿ ಹಾಗೂ ಶಹ್ಬಾಜ್ ನದೀಂ ಬದಲು ಅಬ್ದುಲ್ ಸಮದ್ ಕಣಕ್ಕಿಳಿಯುತ್ತಿದ್ದಾರೆ.

ಕೆಕೆಆರ್: ಶುಭ್ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿಕೀ), ಇಯಾನ್ ಮಾರ್ಗನ್ (ನಾಯಕ), ಆಂಡ್ರೆ ರಸೆಲ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ವರುಣ್ ಚಕ್ರವರ್ತಿ, ವರಣ್ ಚಕ್ರವರ್ತಿ, ಲೂಕಿ ಫರ್ಗಿನ್​ಸನ್.

ಸನ್​ರೈಸರ್ಸ್​ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಜಾನಿ ಬೇರ್‌ಸ್ಟೋ (ವಿಕೆಟ್‌ ಕೀಪರ್‌), ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್, ವಿಜಯ್ ಶಂಕರ್, ಪ್ರಿಯಂ ಗಾರ್ಗ್, ರಶೀದ್ ಖಾನ್, ಅಬ್ದುಲ್ ಸಮದ್, ಸಂದೀಪ್ ಶರ್ಮಾ, ಟಿ. ನಟರಾಜನ್, ಬಸಿಲ್ ಥಂಪಿ.
Published by: Vinay Bhat
First published: October 18, 2020, 5:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories