IPL

  • associate partner
HOME » NEWS » Ipl » IPL 2020 RR VS RCB LIVE CRICKET SCORE RAJASTHAN ROYALS VS ROYAL CHALLENGERS BANGALORE RR 177 5 VB

IPL 2020, RR vs RCB: ಮೊರೀಸ್ 4 ವಿಕೆಟ್: ಸ್ಮಿತ್ ನಾಯಕನ ಆಟ: ಆರ್​ಸಿಬಿಗೆ ಕಠಿಣ ಟಾರ್ಗೆಟ್

IPL 2020, Rajasthan Royals vs Royal Challengers Bangalore: ಈ ಸಂದರ್ಭ ಜೊತೆಯಾದ ನಾಯಕ ಸ್ಟೀವ್ ಸ್ಮಿತ್ ಹಾಗೂ ಜೋಸ್ ಬಟ್ಲರ್ ಅಮೋಘ ಆಟ ಪ್ರದರ್ಶಿಸಿದರು. ಕುಸಿದ ತಂಡಕ್ಕೆ ಆಸರೆಯಾದ ಈ ಜೋಡಿ ಅರ್ಧಶತಕದ ಜೊತೆಯಾಟ ಆಡಿತು.

news18-kannada
Updated:October 17, 2020, 5:14 PM IST
IPL 2020, RR vs RCB: ಮೊರೀಸ್ 4 ವಿಕೆಟ್: ಸ್ಮಿತ್ ನಾಯಕನ ಆಟ: ಆರ್​ಸಿಬಿಗೆ ಕಠಿಣ ಟಾರ್ಗೆಟ್
ಸ್ಟೀವ್ ಸ್ಮಿತ್
  • Share this:
ದುಬೈ (ಅ. 17): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ನ 33ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಸವಾಲಿನ ಮೊತ್ತ ಕಲೆಹಾಕಿದೆ. ನಾಯಕ ಸ್ಟೀವ್ ಸ್ಮಿತ್ ಅವರ ಭರ್ಜರಿ ಆಟದ ನೆರವಿನಿಂದ ಆರ್​ಆರ್​ ತಂಡ 20 ಓವರ್​ನಲ್ಲಿ 177 ರನ್ ಬಾರಿಸಿದೆ.

ಟಾಸ್ ಗೆದ್ದು ರಾಜಸ್ಥಾನ್ ಪರ ಬ್ಯಾಟಿಂಗ್​ಗೆ ಇಳಿದ ರಾಬಿನ್ ಉತ್ತಪ್ಪ ಹಾಗೂ ಬೆನ್ ಸ್ಟೋಕ್ಸ್ ಉತ್ತಮವಾಗಿ ಬ್ಯಾಟ್ ಬೀಸಿದರು. ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡ ಇವರಿಬ್ಬರು ರನ್ ಮಳೆಯನ್ನ ಸುರಿಸಿದರು. ಅದರಲ್ಲೂ ಉತ್ತಪ್ಪ ಸ್ಫೋಟಕ ಆಟವಾಡಿದರು. ಆದರೆ ಸ್ಟೋಕ್ಸ್(15)​ 6ನೇ ಓವರ್​ನ ಕ್ರಿಸ್ ಮೊರೀಸ್ ಬೌಲಿಂಗ್​ನಲ್ಲಿ ಔಟ್ ಆದರು. ಇವರಿಬ್ಬರು ಅರ್ಧಶತಕದ ಜೊತೆಯಾಟ ಆಡಿದರು.

ಸ್ಟೋಕ್ಸ್​ ಬೆನ್ನಲ್ಲೇ 22 ಎಸೆತಗಳಲ್ಲಿ 41 ರನ್ ಬಾರಿಸಿದ್ದ ಉತ್ತಪ್ಪ ಕೂಡ ನಿರ್ಗಮಿಸಿದರು. ಸಂಜು ಸ್ಯಾಮ್ಸನ್(9) ಕೂ ನಿರಾಸೆ ಮೂಡಿಸಿದರು. ಈ ಸಂದರ್ಭ ಜೊತೆಯಾದ ನಾಯಕ ಸ್ಟೀವ್ ಸ್ಮಿತ್ ಹಾಗೂ ಜೋಸ್ ಬಟ್ಲರ್ ಅಮೋಘ ಆಟ ಪ್ರದರ್ಶಿಸಿದರು. ಕುಸಿದ ತಂಡಕ್ಕೆ ಆಸರೆಯಾದ ಈ ಜೋಡಿ ಅರ್ಧಶತಕದ ಜೊತೆಯಾಟ ಆಡಿತು.ಆದರೆ, 16ನೇ ಓವರ್​ನಲ್ಲಿ ಡೇಂಜರಸ್ ಬಟ್ಲರ್ ಔಟ್ ಆದರು. ಬಟ್ಲರ್ 25 ಎಸೆತಗಳಲ್ಲಿ 24 ರನ್ ಗಳಿಸಿದರು. ಅಂತಿಮ ಹಂತದಲ್ಲಿ ಸ್ಮಿತ್ ಆಕರ್ಷಕ ಅರ್ಧಶತಕ ಸಿಡಿಸಿ ನಾಯಕನ ಆಟವಾಡಿದರೆ, ರಾಹುಲ್ ತೇವಾಟಿಯ ತಮ್ಮ ಶೈಲಿಯಲ್ಲಿ ಬ್ಯಾಟ್ ಬೀಸಿದರು. ಎದುರಾಳಿಗೆ ಕಠಿಣ ಟಾರ್ಗೆಟ್ ನೀಡಲು ಪ್ರಮುಖ ಪಾತ್ರವಹಿಸಿದರು.

ಸ್ಮಿತ್ 36 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಬಾರಿಸಿ 57 ರನ್ ಚಚ್ಚಿದರು. ತೇವಾಟಿಯ ಕೇವಲ 11 ಎಸೆತಗಳಲ್ಲಿ ಅಜೇಯ 19 ರನ್ ಗಳಿಸಿದರು. ಅಂತಿಮವಾಗಿ ಆರ್​ಆರ್​ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಬಾರಿಸಿತು. ಆರ್​ಸಿಬಿ ಪರ ಕ್ರಿಸ್ ಮೊರೀಸ್ 4 ವಿಕೆಟ್ ಕಿತ್ತರೆ, ಯಜುವೇಂದ್ರ ಚಹಾಲ್ ತಲಾ 2 ವಿಕೆಟ್ ಪಡೆದರು.

ಇಂದಿನ ಪಂದ್ಯಕ್ಕೆ ಆರ್​ಸಿಬಿ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಮೊಹಮ್ಮದ್ ಸಿರಾಜ್ ಬದಲು ಗುರುಕೀರತ್ ಮನ್​ ಸಿಂಗ್ ಹಾಗೂ ಶಿವಂ ದುವೆ ಬದಲು ಶಹ್ಬಾಜ್ ಅಹ್ಮದ್ ಕಣಕ್ಕಿಳಿಯುತ್ತಿದ್ದಾರೆ. ಇತ್ತ ಆರ್​ಆರ್​ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರೇ ಆಡುತ್ತಿದ್ದಾರೆ.

ರಾಜಸ್ಥಾನ್ ರಾಯಲ್ಸ್: ಜಾಸ್ ಬಟ್ಲರ್, ಬೆನ್ ಸ್ಟೋಕ್ಸ್, ರಾಬಿನ್ ಉತ್ತಪ್ಪ, ಸ್ಟೀವ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ರಾಹುಲ್ ತೇವಾಟಿಯಾ, ಶ್ರೇಯಸ್ ಗೋಪಾಲ್, ಜೋಫ್ರಾ ಆರ್ಚರ್, ಕಾರ್ತಿಕ್ ತ್ಯಾಗಿ, ಜಯದೇವ್ ಉನಾದ್ಕಟ್.

ರಾಯಲ್ ಚಾಲೆಂಜರ್ಸ್​ ಬೆಂಗಳೂರು: ದೇವದತ್ ಪಡಿಕ್ಕಲ್, ಆ್ಯರೋನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್‌ (ವಿ.ಕೀ), ಗುರುಕೀರತ್ ಮನ್​ ಸಿಂಗ್, ಕ್ರಿಸ್ ಮೊರೀಸ್, ವಾಷಿಂಗ್ಟನ್ ಸುಂದರ್, ಇಸುರು ಉದಾನ, ಶಹ್ಬಾಜ್ ಅಹ್ಮದ್, ನವದೀಪ್ ಸೈನಿ, ಯಜುವೇಂದ್ರ ಚಾಹಲ್.
Published by: Vinay Bhat
First published: October 17, 2020, 5:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories