IPL 2020: RR vs MI: ಉಭಯ ಟೀಮ್​ನಲ್ಲೂ ಒಂದು ಬದಲಾವಣೆ ಸಾಧ್ಯತೆ: ಇಂದು ಕಣಕ್ಕಿಳಿಯುವ ತಂಡ ಹೀಗಿರಲಿದೆ

ರಾಜಸ್ಥಾನ್ ಪಾಳಯದಲ್ಲಿ ಅನುಭವಿ ಜೋಸ್ ಬಟ್ಲರ್ ಬಿಟ್ಟರೆ, ಉಳಿದವರಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಮೂಡಿ ಬರುತ್ತಿಲ್ಲ. ಆರಂಭಿಕರಾಗಿ ರಾಬಿನ್ ಉತ್ತಪ್ಪಗೆ ಅವಕಾಶ ನೀಡಿದರು ಮಿಂಚುತ್ತಿಲ್ಲ. ಸ್ಮಿತ್-ಸ್ಟೋಕ್ಸ್ ಅಬ್ಬರಿಸಿದರೂ ಅದನ್ನು ದೊಡ್ಡ ಮೊತ್ತವಾಗಿಸುವಲ್ಲಿ ಎಡವುತ್ತಿದ್ದಾರೆ.

MI vs RR

MI vs RR

 • Share this:
  ಐಪಿಎಲ್​ನಲ್ಲಿ ಇಂದು ನಡೆಯಲಿರುವ 2ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಹಾಗೂ ಸ್ಟೀವ್ ಸ್ಮಿತ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಅಬುಧಾಬಿಯ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ರಾಜಸ್ಥಾನ್ ಪ್ಲೇ ಆಫ್ ಭವಿಷ್ಯ ನಿರ್ಧಾರವಾಗಲಿದೆ. ಹಾಗೆಯೇ ಇಂದು ಮುಂಬೈ ಗೆದ್ದರೆ ಪ್ಲೇ ಆಫ್ ಪ್ರವೇಶಿಸುವುದು ಅಧಿಕೃತಗೊಳ್ಳಲಿದೆ. ಸಿಎಸ್​ಕೆ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಆತ್ಮವಿಶ್ವಾಸದಲ್ಲಿರುವ ರೋಹಿತ್ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸುವ ತವಕದಲ್ಲಿದ್ದರೆ, ಇತ್ತ ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್​ಆರ್​ ತಂಡ ಗೆಲುವು ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

  ಮುಂಬೈ ಇಂಡಿಯನ್ಸ್ ಈವರೆಗೆ ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಗೆದ್ದು 3 ಪಂದ್ಯಗಳಲ್ಲಿ ಮಾತ್ರ ಸೋಲುಂಡಿದೆ. ಅದರಲ್ಲಿ 2 ಸೋಲು ಸೂಪರ್ ಓವರ್​ನಲ್ಲಿ ಮೂಡಿಬಂದಿರುವುದು ವಿಶೇಷ. ಆದರೆ ರಾಜಸ್ಥಾನ್ ರಾಯಲ್ಸ್​ ತಂಡ 11 ಮ್ಯಾಚ್​ನಲ್ಲಿ 7 ರಲ್ಲಿ ಸೋಲುಂಡಿದ್ದು, 4 ರಲ್ಲಿ ಮಾತ್ರ ಜಯಗಳಿಸಲು ಸಾಧ್ಯವಾಗಿದೆ.

  ಇತ್ತ ಮುಂಬೈ ಇಂಡಿಯನ್ಸ್ ತಂಡ ಆರಂಭಿಕ ಕ್ವಿಂಟನ್ ಡಿ ಕಾಕ್ ಭರ್ಜರಿ ಫಾರ್ಮ್​ನಲ್ಲಿದ್ದು, ಉಳಿದ ಬ್ಯಾಟ್ಸ್‌ಮನ್‌ಗಳು ಉತ್ತಮ ಲಯದೊಂದಿಗೆ ತಂಡಕ್ಕೆ ನೆರವಾಗುತ್ತಿದ್ದಾರೆ. ಹಾಗೆಯೇ ಬೌಲಿಂಗ್ ವಿಭಾಗದಲ್ಲೂ ಮುಂಬೈ ಅತ್ಯುತ್ತಮ ಪ್ರದರ್ಶನವನ್ನು ನೀಡುವಲ್ಲಿ ಸಫಲವಾಗುತ್ತಿದೆ. ಜಸ್​ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್ ಭರ್ಜರಿ ದಾಳಿ ನಡೆಸುತ್ತಿದ್ದರೆ, ರಾಹುಲ್ ಚಹರ್ ಹಾಗೂ ಕೃನಾಲ್ ಪಾಂಡ್ಯ ಸ್ಪಿನ್ ಮೂಲಕ ಉತ್ತಮ ಕಾಣಿಕೆ ನೀಡುತ್ತಿದ್ದಾರೆ.

  ಆದರೆ ರಾಜಸ್ಥಾನ್ ಪಾಳಯದಲ್ಲಿ ಅನುಭವಿ ಜೋಸ್ ಬಟ್ಲರ್ ಬಿಟ್ಟರೆ, ಉಳಿದವರಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಮೂಡಿ ಬರುತ್ತಿಲ್ಲ. ಆರಂಭಿಕರಾಗಿ ರಾಬಿನ್ ಉತ್ತಪ್ಪಗೆ ಅವಕಾಶ ನೀಡಿದರು ಮಿಂಚುತ್ತಿಲ್ಲ. ಸ್ಮಿತ್-ಸ್ಟೋಕ್ಸ್ ಅಬ್ಬರಿಸಿದರೂ ಅದನ್ನು ದೊಡ್ಡ ಮೊತ್ತವಾಗಿಸುವಲ್ಲಿ ಎಡವುತ್ತಿದ್ದಾರೆ. ಇನ್ನು ಸಂಜು ಸ್ಯಾಮ್ಸನ್ ಬಂದ ವೇಗದಲ್ಲೇ ಹಿಂತಿರುಗಿ ನಿರಾಸೆ ಮೂಡಿಸುವುದನ್ನು ಮುಂದುವರೆಸಸಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಆರ್​ಆರ್​ ತಂಡದ ಬ್ಯಾಟಿಂಗ್​ ಲೈನ್​ಅಪ್ ಬದಲಾವಣೆ ಆಗಬಹುದು.

  ಬೌಲಿಂಗ್​ನಲ್ಲಿ ಜೋಫ್ರಾ ಆರ್ಚರ್ ಉತ್ತಮ ಪ್ರದರ್ಶನ ನೀಡಿದರೂ, ಮತ್ತೊಂದು ಬದಿಯಲ್ಲಿ ಉಳಿದ ಬೌಲರುಗಳಿಂದ ಸಾಥ್ ಸಿಗುತ್ತಿಲ್ಲ. ಇದು ಕೂಡ ತಂಡದ ಸೋಲಿಗೆ ಪ್ರಮುಖ ಕಾರಣವಾಗುತ್ತಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಅಂಕಿತ್ ರಜಪೂತ್ ಸ್ಥಾನದಲ್ಲಿ ವರುಣ್ ಆರೋನ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಹಾಗೆಯೇ ಬೆನ್ ಸ್ಟೋಕ್ಸ್ ಜಾಗದಲ್ಲಿ ಡೇವಿಡ್ ಮಿಲ್ಲರ್​ಗೆ ಅವಕಾಶ ಸಿಕ್ಕರೂ ಅಚ್ಚರಿಪಡಬೇಕಿಲ್ಲ.

  ಇನ್ನು ಕಳೆದ ಪಂದ್ಯದಲ್ಲಿ  ಹೊರಗುಳಿದಿದ್ದ ರೋಹಿತ್ ಶರ್ಮಾ ಇಂದು ಕೂಡ ವಿಶ್ರಾಂತಿ ಪಡೆಯುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಉಪನಾಯಕ ಕೀರನ್ ಪೊಲಾರ್ಡ್ ತಂಡವನ್ನು ಮುನ್ನಡೆಸಲಿದ್ದಾರೆ. ಇಂದು ಕಣಕ್ಕಿಳಿಯುವ ಸಂಭವನೀಯ ಆಟಗಾರರ ಪಟ್ಟಿ ಇಲ್ಲಿದೆ.

  ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ: ಕೀರನ್ ಪೊಲಾರ್ಡ್​ /ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಜೇಮ್ಸ್ ಪ್ಯಾಟಿನ್ಸನ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್​ಪ್ರೀತ್ ಬುಮ್ರಾ, ಸೌರಭ್ ತಿವಾರಿ

  ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ತಂಡ: ಬೆನ್ ಸ್ಟೋಕ್ಸ್ / ಡೇವಿಡ್ ಮಿಲ್ಲರ್ , ರಾಬಿನ್ ಉತ್ತಪ್ಪ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸ್ಟೀವನ್ ಸ್ಮಿತ್ (ನಾಯಕ), ಜೋಸ್ ಬಟ್ಲರ್, ರಿಯಾನ್ ಪರಾಗ್, ರಾಹುಲ್ ತೇವಟಿಯಾ, ಜೋಫ್ರಾ ಆರ್ಚರ್, ಶ್ರೇಯಾಸ್ ಗೋಪಾಲ್, ಅಂಕಿತ್ ರಜ‌ಪೂತ್/ವರುಣ್ ಆರೋನ್, ಕಾರ್ತಿಕ್ ತ್ಯಾಗಿ.

  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ: IPL 2020: 3ನೇ ವರ್ಷಕ್ಕೆ CSK ಸುಸ್ತು: ಡ್ಯಾಡಿಸ್ ಆರ್ಮಿ ವಿರುದ್ಧ ಕಿಡಿಕಾರಿದ ಕೋಚ್​
  Published by:zahir
  First published: