IPL

  • associate partner
HOME » NEWS » Ipl » IPL 2020 RR VS MI HEAD TO HEAD RECORD PLAYERS TO WATCH OUT FOR MATCH ZP

IPL 2020: RR vs MI: ಮುಂಬೈ vs ರಾಜಸ್ಥಾನ್: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ? ಇಲ್ಲಿದೆ ಮಾಹಿತಿ

ರಾಜಸ್ಥಾನ್ ರಾಯಲ್ಸ್ ಕೊನೆಯ ಐದು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆದ್ದಿದ್ದು, ಮೂರರಲ್ಲಿ ಸೋಲನುಭವಿಸಿದೆ. ಮುಂಬೈ ಇಂಡಿಯನ್ಸ್ ಉತ್ತಮ ಫಾರ್ಮ್‌ನಲ್ಲಿದ್ದು, ಕೊನೆಯ ಐದು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದುಕೊಂಡಿದೆ.

news18-kannada
Updated:October 25, 2020, 4:10 PM IST
IPL 2020: RR vs MI: ಮುಂಬೈ vs ರಾಜಸ್ಥಾನ್: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ? ಇಲ್ಲಿದೆ ಮಾಹಿತಿ
mi vs rr
  • Share this:
ಭಾನುವಾರ ನಡೆಯಲಿರುವ ಐಪಿಎಲ್​ನ 45ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ. ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಆರ್​ಆರ್ ಪ್ಲೇ ಆಫ್ ಆಸೆಯನ್ನು ಜೀವಂತವಿರಿಸಿಕೊಳ್ಳಬಹುದು. ಹಾಗೆಯೇ ಮುಂಬೈ ಇಂಡಿಯನ್ಸ್​ ಇಂದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಪ್ಲೇ ಆಫ್​ ಅನ್ನು ಖಚಿತಪಡಿಸಿಕೊಳ್ಳಲಿದೆ. 

ಐಪಿಎಲ್‌ನಲ್ಲಿ ಇದುವರೆಗೆ ಉಭಯ ತಂಡಗಳು 21 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಅದರಲ್ಲಿ ಮುಂಬೈ 11 ಪಂದ್ಯಗಳನ್ನು ಗೆದ್ದರೆ, ರಾಜಸ್ಥಾನ್ ರಾಯಲ್ಸ್ 10 ರಲ್ಲಿ ವಿಜಯ ಸಾಧಿಸಿದೆ.

ಈ ಸೀಸನ್​ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ರಾಜಸ್ಥಾನ್ ವಿರುದ್ದ 20 ಓವರ್‌ಗಳಲ್ಲಿ 193 ರನ್​ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ಸ್ಮಿತ್ ಪಡೆ ಕೇವಲ 18.1 ಓವರ್‌ಗಳಲ್ಲಿ 136 ರನ್​ಗಳಿಗೆ ಆಲೌಟ್ ಆಗುವ ಮೂಲಕ 57 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಇದೇ ಆತ್ಮ ವಿಶ್ವಾಸದಲ್ಲಿ ಇಂದು ಕೂಡ ರೋಹಿತ್ ಪಡೆ ಕಣಕ್ಕಿಳಿಯಲಿದೆ.

ಐಪಿಎಲ್ 2020 ಉಭಯ ತಂಡಗಳ ಕೊನೆಯ ಪಂದ್ಯಗಳ ಫಾರ್ಮ್ ಗೈಡ್
ರಾಜಸ್ಥಾನ್ ರಾಯಲ್ಸ್ ಕೊನೆಯ ಐದು ಪಂದ್ಯಗಳಲ್ಲಿ ಎರಡನ್ನು ಗೆದ್ದಿದ್ದು, ಹಾಗೆಯೇ ಮೂರರಲ್ಲಿ ಸೋಲನುಭವಿಸಿದೆ.
ಮುಂಬೈ ಇಂಡಿಯನ್ಸ್ ಉತ್ತಮ ಫಾರ್ಮ್‌ನಲ್ಲಿದ್ದು, ಕೊನೆಯ ಐದು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದುಕೊಂಡಿದೆ.

ಅಂಕಪಟ್ಟಿಯಲ್ಲಿ ಪ್ರಸ್ತುತ ಸ್ಥಾನ:ರಾಜಸ್ಥಾನ್ ರಾಯಲ್ಸ್​: 11 ಪಂದ್ಯಗಳಿಂದ ನಾಲ್ಕರಲ್ಲಿ ಜಯ ಸಾಧಿಸಿ, 7 ರಲ್ಲಿ ಸೋತಿರುವ ರಾಯಲ್ಸ್​ ಎಂಟು ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಏಳನೇ ಸ್ಥಾನದಲ್ಲಿದೆ.

ಮುಂಬೈ ಇಂಡಿಯನ್ಸ್​: 10 ಪಂದ್ಯಗಳಿಂದ ಏಳು ಗೆಲುವುಗಳು ಮತ್ತು ಮೂರು ಸೋಲುಗಳನ್ನು ಕಂಡಿರುವ ಮುಂಬೈ ಇಂಡಿಯನ್ಸ್​ 14 ಅಂಕಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದೆ.

ರಾಜಸ್ಥಾನ್ ರಾಯಲ್ಸ್​ ಆಟಗಾರರ ಪ್ರಸ್ತುತ ಫಾರ್ಮ್​:

ಹೆಚ್ಚು ರನ್​ ಗಳಿಸಿದವರು;-

ಸಂಜು ಸ್ಯಾಮ್ಸನ್ (272 ರನ್ಸ್)

ಜೋಸ್ ಬಟ್ಲರ್ (271  ರನ್ಸ್)

ಸ್ಟೀವ್ ಸ್ಮಿತ್ (265  ರನ್ಸ್)

ಹೆಚ್ಚು ವಿಕೆಟ್ ಪಡೆದವರು

ಜೋಫ್ರಾ ಆರ್ಚರ್ (15 ವಿಕೆಟ್ಸ್)

ರಾಹುಲ್ ತೆವಾಟಿಯಾ (7 ವಿಕೆಟ್ಸ್)

ಶ್ರೇಯಸ್ ಗೋಪಾಲ್ (7 ವಿಕೆಟ್ಸ್)

ಮುಂಬೈ ಇಂಡಿಯನ್ಸ್ ಆಟಗಾರರ ಪ್ರಸ್ತುತ ಫಾರ್ಮ್​:

ಹೆಚ್ಚು ರನ್​ ಗಳಿಸಿದವರು
ಕ್ವಿಂಟನ್ ಡಿ ಕಾಕ್ (368 ರನ್ಸ್​)

ಇಶಾನ್ ಕಿಶನ್ (261 ರನ್ಸ್)

ಹೆಚ್ಚು ವಿಕೆಟ್ ಪಡೆದವರು
ಜಸ್ಪ್ರಿತ್ ಬುಮ್ರಾ (17 ವಿಕೆಟ್ಸ್​)
ಟ್ರೆಂಟ್ ಬೌಲ್ಟ್ (16 ವಿಕೆಟ್ಸ್​)
ರಾಹುಲ್ ಚಹರ್ (13 ವಿಕೆಟ್ಸ್​)

POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: IPL 2020: 3ನೇ ವರ್ಷಕ್ಕೆ CSK ಸುಸ್ತು: ಡ್ಯಾಡಿಸ್ ಆರ್ಮಿ ವಿರುದ್ಧ ಕಿಡಿಕಾರಿದ ಕೋಚ್​
Published by: zahir
First published: October 25, 2020, 3:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories