IPL 2020, RR vs KKR: ರಾಜಸ್ಥಾನ್ ರಾಯಲ್ಸ್​ಗೆ 175 ರನ್​ಗಳ ಟಾರ್ಗೆಟ್

Dream11 IPL 2020 : ಉಭಯ ತಂಡಗಳು ಐಪಿಎಲ್​ನಲ್ಲಿ 20 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇಲ್ಲಿ ಅಂಕಿ-ಅಂಶಗಳಲ್ಲೂ ಎರಡು ತಂಡಗಳು ಸಮಬಲ ಸಾಧಿಸಿವೆ. ಕೆಕೆಆರ್ 10 ಬಾರಿ ಗೆದ್ದಿದ್ರೆ, ಆರ್​ಆರ್ ಕೂಡ 10 ಬಾರಿ ವಿಜಯ ಸಾಧಿಸಿದೆ.

ರಾಜಸ್ಥಾನ್ ರಾಯಲ್ಸ್.

ರಾಜಸ್ಥಾನ್ ರಾಯಲ್ಸ್.

 • Share this:
  ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ನ 12ನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ನಾಯಕ ಸ್ಟೀವ್ ಸ್ಮಿತ್ ಮೊದಲು ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಬೀಸಿದ ಕೊಲ್ಕತ್ತಾ ನೈಟ್ ರೈಡರ್ಸ್​ಗೆ ಸುನೀಲ್ ನರೈನ್ ಹಾಗೂ ಶುಭ್​ಮನ್ ಗಿಲ್ ಉತ್ತಮ ಆರಂಭ ಒದಗಿಸಿದರು.

  ಆದರೆ 5ನೇ ಓವರ್​ನಲ್ಲಿ ಬಿರುಸಿ ಆಟಕ್ಕೆ ಮುಂದಾದ ಸುನೀಲ್ ನರೈನ್ (15) ಜಯದೇವ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಹೊರನಡೆದರು. ಹಾಗೆಯೇ ಆರಂಭದಿಂದಲೂ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದ ಕೆಕೆಆರ್​ ಪವರ್​ ಪ್ಲೇ ಮುಕ್ತಾಯದ ವೇಳೆಗೆ ಒಂದು ವಿಕೆಟ್ ನಷ್ಟಕ್ಕೆ 42 ರನ್​ಗಳಿಸಿತು.

  ಪವರ್ ಪ್ಲೇ ಬಳಿಕ ರಾಜಸ್ಥಾನ್ ಬೌಲರುಗಳ ವಿರುದ್ದ ತಿರುಗಿಬಿದ್ದ  ನಿತೀಶ್ ರಾಣಾ ಹಾಗೂ ಶುಭ್​ಮನ್ ಗಿಲ್ ರನ್​ ಗತಿ ಹೆಚ್ಚಿಸಿದರು. ಪರಿಣಾಮ 4 ಓವರ್​ಗಳಲ್ಲಿ ಮೂಡಿ ಬಂದಿದ್ದು 40 ರನ್​ಗಳು. ಆದರೆ 10ನೇ ಓವರ್​ನಲ್ಲಿ ಬಿಗ್ ಹಿಟ್​ ಆಗಿ ಮುಂದಾಗಿ ರಾಣಾ ತಿವಾಠಿಯಾಗೆ ವಿಕೆಟ್ ಒಪ್ಪಿಸಿದರು.

  ಮತ್ತೊಂದೆಡೆ 5 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಶುಭ್​ಮನ್​ ಗಿಲ್ (47)  ಜೋಫ್ರಾ ಆರ್ಚರ್​ಗೆ ವಿಕೆಟ್ ಒಪ್ಪಿಸಿ ಮತ್ತೊಂದು ಅರ್ಧಶತಕ ತಪ್ಪಿಸಿಕೊಂಡರು. ರಸೆಲ್ ಎಂಟ್ರಿಯೊಂದಿಗೆ ರನ್ ವೇಗ ಪಡೆದರೂ ಮತ್ತೊಂದೆಡೆ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಕೇವಲ 1 ರನ್​ಗಳಿಸಿ ಕೀಪರ್​ಗೆ ಕ್ಯಾಚ್ ನೀಡಿ ನಿರ್ಮಿಸಿದರು.

  ಇದರ ಬೆನ್ನಲೇ ಮೂರು ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದ ಆಂಡ್ರೆ ರಸೆಲ್ (24) ಕೂಡ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. 15 ಓವರ್​ ಮುಕ್ತಾಯದ ವೇಳೆಗೆ ಕೊಲ್ಕತ್ತಾ ನೈಟ್ ರೈಡರ್ಸ್ ಕಲೆಹಾಕಿದ್ದು 120 ರನ್​ಗಳು. 16ನೇ ಹಾಗೂ 17ನೇ ಓವರ್​ಗಳಿಂದ 21 ರನ್ ಕಲೆಹಾಕಿದರು. ಆದರೆ 18ನೇ ಓವರ್​ನಲ್ಲಿ ಸಿಕ್ಸ್ ಬಾರಿಸುವ ತವಕದಲ್ಲಿ ಕಮಿನ್ಸ್ ಸಂಜು ಸ್ಯಾಮ್ಸನ್ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. ಕೊನೆಯ ಎರಡು ಓವರ್​ಗಳಲ್ಲಿ 25 ರನ್ ಬಾರಿಸುವ ಮೂಲಕ ಕೆಕೆಆರ್​ ನಿಗದಿತ 20 ಓವರ್​ಗೆ 174 ರನ್ ಪೇರಿಸಿತು.

  ಕೊನೆಯವರೆಗೂ ಬ್ಯಾಟ್ ಬೀಸಿದ ಇಯಾನ್ ಮೋರ್ಗನ್ 23 ಎಸೆತಗಳಿಂದ 34 ರನ್​ಗಳಿಸಿ ಅಜೇಯರಾಗಿ ಉಳಿದರು. ರಾಜಸ್ಥಾನ್ ಪರ ಭರ್ಜರಿ ಬೌಲಿಂಗ್ ಮಾಡಿದ ಜೋಫ್ರಾ ಆರ್ಚರ್ 4 ಓವರ್​ನಲ್ಲಿ ಕೇವಲ 18 ರನ್​ ನೀಡಿ 2 ವಿಕೆಟ್ ಪಡೆದರು.  2 ಗೆಲುವಿನೊಂದಿಗೆ ಐಪಿಎಲ್​ ಟೂರ್ನಿಯನ್ನು ಭರ್ಜರಿಯಾಗಿ ಆರಂಭಿಸಿರುವ ಆರ್​ಆರ್ ತಂಡವು ಕೆಕೆಆರ್ ವಿರುದ್ಧ ಗೆಲ್ಲುವ ಮೂಲಕ ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದೆ. ಸೋಲು-ಗೆಲುವು ಎರಡನ್ನೂ ನೋಡಿರುವ ದಿನೇಶ್ ಕಾರ್ತಿಕ್ ನಾಯಕತ್ವದ ಕೆಕೆಆರ್ ಇಂದಿನ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಅಂಕ ಪಟ್ಟಿಯಲ್ಲಿ ಮೇಲೇರುವ ತವಕದಲ್ಲಿದೆ.

  ಎರಡು ತಂಡಗಳಲ್ಲಿ ದೇಶೀಯ ಹಾಗೂ ವಿದೇಶಿ ಆಟಗಾರರನ್ನು ಒಳಗೊಂಡ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದು, ಇಂದಿನ ಪಂದ್ಯದಲ್ಲಿ ಮತ್ತೊಮ್ಮೆ ರನ್​ ಮಳೆ ಹರಿಯುವ ನಿರೀಕ್ಷೆಯಿದೆ. ಇನ್ನು 2 ಪಂದ್ಯಗಳಲ್ಲೂ 200 ರನ್ ಬಾರಿಸಿರುವ ರಾಜಸ್ಥಾನ್ ರಾಯಲ್ಸ್ ಮತ್ತೊಂದು ಅಂತಹ ಸಾಹಕ್ಕೆ ಕೈ ಹಾಕಿ ಹೊಸ ದಾಖಲೆ ಬರೆಯುವ ಹುಮ್ಮಸ್ಸಿನಲ್ಲಿದೆ. ಹೀಗಾಗಿ ಕೆಕೆಆರ್ ಟಾಸ್ ಸೋತರೆ ಇಕ್ಕಟ್ಟಿಗೆ ಸಿಲುಕುವುದಂತು ಸತ್ಯ.

  ಉಭಯ ತಂಡಗಳು ಐಪಿಎಲ್​ನಲ್ಲಿ 20 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇಲ್ಲಿ ಅಂಕಿ-ಅಂಶಗಳಲ್ಲೂ ಎರಡು ತಂಡಗಳು ಸಮಬಲ ಸಾಧಿಸಿವೆ. ಕೆಕೆಆರ್ 10 ಬಾರಿ ಗೆದ್ದಿದ್ರೆ, ಆರ್​ಆರ್ ಕೂಡ 10 ಬಾರಿ ವಿಜಯ ಸಾಧಿಸಿದೆ. ಹೀಗಾಗಿ ಅಂಕಿ ಅಂಶಗಳ ಪ್ರಕಾರ ಎರಡು ಸಮಾನವಾಗಿದೆ ಎಂದೇ ಹೇಳಬಹುದು.

  ಇನ್ನು ಕಳೆದ ಸೀಸನ್​ನಲ್ಲಿನ ಪಂದ್ಯಗಳನ್ನು ಗಣನೆಗೆ ತೆಗೆದುಕೊಂಡರೆ, 2 ಮುಖಾಮುಖಿಯಲ್ಲಿ ರಾಜಸ್ಥಾನ್ ಒಂದು ಗೆದ್ದರೆ, ಮತ್ತೊಂದನ್ನು ಕೊಲ್ಕತ್ತಾ ಗೆದ್ದು ಬೀಗಿತ್ತು. ಹಾಗೆಯೇ 2014ರ ಯುಎಇ ಐಪಿಎಲ್​ನಲ್ಲೂ ಉಭಯ ತಂಡಗಳು ಒಂದು ಪಂದ್ಯವನ್ನು ಆಡಿದೆ.

  ಅಬುಧಾಬಿಯಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತನ್ನ 20 ಓವರ್‌ಗಳಲ್ಲಿ 152/5 ರನ್ ಗಳಿಸಿತ್ತು. ಇದನ್ನು ಚೇಸ್ ಮಾಡಿದ್ದ ಕೆಕೆಆರ್ ಕೂಡ 152/8 ಬಾರಿಸಿತ್ತು. ಬಳಿಕ ಸೂಪರ್ ಓವರ್​ನಲ್ಲೂ ಎರಡೂ ತಂಡಗಳು 11 ರನ್​ ಬಾರಿಸಿದ್ದವು. ಹೀಗಾಗಿ ಬೌಂಡರಿ ಎಣಿಕೆ ನಿಯಮದಲ್ಲಿ ಕೊಲ್ಕತ್ತಾ ವಿರುದ್ಧ ರಾಜಸ್ಥಾನ್​ನ್ನು ವಿಜಯಿ ಎಂದು ಘೋಷಿಸಲಾಯಿತು. ಹಾಗಾಗಿ ಇಂದಿನ ಪಂದ್ಯದಲ್ಲೂ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
  Published by:zahir
  First published: