IPL

  • associate partner
HOME » NEWS » Ipl » IPL 2020 RR VS DC LIVE SCORE RAJASTHAN ROYALS VS DELHI CAPITALS DELHI CAPITALS 184 8 VB

IPL 2020, RR vs DC: ರಾಜಸ್ಥಾನಕ್ಕೆ ಗೆಲ್ಲಲು 185 ರನ್​ಗಳ ಟಾರ್ಗೆಟ್ ನೀಡಿದ ಡೆಲ್ಲಿ

IPL 2020, Rajasthan vs Delhi: ಉಭಯ ತಂಡಗಳು ಈವರೆಗೆ 20 ಬಾರಿ ಮುಖಾಮುಖಿಯಾಗಿದ್ದು, ರಾಜಸ್ಥಾನ್ ರಾಯಲ್ಸ್ ತಂಡ 11 ಪಂದ್ಯದಲ್ಲಿ ಜಯ ಗಳಿಸಿದ್ರೆ, ಡೆಲ್ಲಿ ಕ್ಯಾಪಿಟಲ್ಸ್ 9 ಪಂದ್ಯಗಳನ್ನು ಗೆದ್ದು ಬೀಗಿದೆ.

news18-kannada
Updated:October 9, 2020, 9:16 PM IST
IPL 2020, RR vs DC: ರಾಜಸ್ಥಾನಕ್ಕೆ ಗೆಲ್ಲಲು 185 ರನ್​ಗಳ ಟಾರ್ಗೆಟ್ ನೀಡಿದ ಡೆಲ್ಲಿ
DC vs RR
  • Share this:
ಶಾರ್ಜಾ (ಅ. 09): ಇಲ್ಲಿನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 13ನೇ ಆವೃತ್ತಿಯ 23ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ  ಡೆಲ್ಲಿ ಕ್ಯಾಪಿಟಲ್ಸ್ ತಂಡ ಸವಾಲಿನ  ಮೊತ್ತ ಕಲೆಹಾಕಿದೆ. ಶಿಮ್ರೋನ್ ಹೆಟ್ಮೇರ್ ಹಾಗೂ ಮಾರ್ಕಸ್ ಸ್ಟಾಯಿನಿಸ್ ಅವರ ಉತ್ತಮ ಆಟದ ನೆರವಿನಿಂದ ಡೆಲ್ಲಿ 20 ಓವರ್​ನಲ್ಲಿ 184 ರನ್ ಬಾರಿಸಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಡೆಲ್ಲಿ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ತನ್ನ ಮೊದಲ ಓವರ್​​ನಲ್ಲೇ ಜೋಫ್ರಾ ಆರ್ಚರ್ ಅವರು ಶಿಖರ್ ಧವನ್(5) ಅವರನ್ನು ಪೆವಿಲಿಯನ್​ಗೆ ಅಟ್ಟುವಲ್ಲಿ ಯಶಸ್ವಿಯಾದರು.

ಬಳಿಕ 19 ರನ್ ಬಾರಿಸಿದ್ದ ಪೃಥ್ವಿ ಶಾ ಅವರನ್ನೂ ಔಟ್ ಮಾಡಿದರು. ತಂಡಕ್ಕೆ ಆಸರೆಯಾಗಬೇಕಿದ್ದ ನಾಯಕ ಶ್ರೇಯಸ್ ಅಯ್ಯರ್ 22 ರನ್​ಗೆ ಹಾಗೂ ರಿಷಭ್ ಪಂತ್ ಕೇವಲ 5 ಗಳಿಸಿರುವಾಗ ರನೌಟ್​ಗೆ ಬಲಿಯಾದರು.


ಮಾರ್ಕಸ್ ಸ್ಟಾಯಿನಿಸ್ ಏಕಾಂಗಿಯಾಗಿ ಬ್ಯಾಟ್ ಬೀಸಿದರಾದರೂ ಅಂತಿಮ ಹಂತದ ವರೆಗೆ ಕ್ರೀಸ್​ನಲ್ಲಿ ನಿಲ್ಲಲಿಲ್ಲ. 30 ಎಸೆತಗಳಲ್ಲಿ 4 ಸಿಕ್ಸರ್ ಸಿಡಿಸಿ 39 ರನ್​ಗೆ ಔಟ್ ಆದರು. ಬಳಿಕ ಸ್ಫೋಟಕ ಆಟಕ್ಕೆ ಮುಂದಾದ ಶಿಮ್ರೋನ್ ಹೆಟ್ಮೇರ್ ತಂಡದ ಮೊತ್ತವನ್ನು 150ರ ಅಂಚಿಗೆ ತಂದಿಟ್ಟು ನಿರ್ಗಮಿಸಿದರು. ಹೆಟ್ಮೇರ್ ಕೇವಲ 24 ಎಸೆತಗಳಲ್ಲಿ 1 ಬೌಂಡರಿ, 5 ಸಿಕ್ಸರ್ ಬಾರಿಸಿ 45 ರನ್ ಚಚ್ಚಿದರು.

ಕೊನೆಯ ಹಂತದಲ್ಲು ಅಕ್ಷರ್ ಪಟೇಲ್ (17) ಹಾಗೂ ಹರ್ಷಲ್ ಪಟೇಲ್ (16) ಬ್ಯಾಟ್ ಬೀಸಿ ತಂಡದ ರನ್ ಗತಿಯನ್ನು ಏರಿಸಿದರು. ಅಂತಿಮವಾಗಿ ಡೆಲ್ಲಿ 20 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು. ಆರ್​ಆರ್​ ಪರ ಜೋಫ್ರಾ ಆರ್ಚರ್ 3 ವಿಕೆಟ್ ಕಿತ್ತರೆ, ಕಾರ್ತಿಕ್ ತ್ಯಾಗಿ, ಆ್ಯಂಡ್ರೋ ಟೈ, ಹಾಗೂ ರಾಹುಲ್ ತೇವಾಟಿಯಾ ತಲಾ 1 ವಿಕೆಟ್ ಪಡೆದರು.

ರಾಜಸ್ಥಾನ್ ರಾಯಲ್ಸ್: ಜಾಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸ್ಟೀವ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಾಹುಲ್ ತೇವಾಟಿಯಾ, ಮಾಹಿಪಾಲ್ ಲಮ್ರೋರ್, ಶ್ರೇಯಸ್ ಗೋಪಾಲ್, ಆ್ಯಂಡ್ರೋ ಟೈ, ಜೋಫ್ರಾ ಆರ್ಚರ್, ಕಾರ್ತಿಕ್ ತ್ಯಾಗಿ, ವರುಣ್ ಆರುಣ್.

ದೆಹಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್ , ಶಿಮ್ರಾನ್ ಹೆಟ್ಮಿಯರ್, ಮಾರ್ಕಸ್ ಸ್ಟೊಯಿನಿಸ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಡಾ, ಅನ್ರಿಕ್ ನಾರ್ಟ್ಜೆ, ಹರ್ಷಲ್ ಪಟೇಲ್.
Published by: Vinay Bhat
First published: October 9, 2020, 9:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories