IPL 2020 Live Score, RR vs CSK: ಗೆಲುವಿಗಾಗಿ ಚೆನ್ನೈ ಹೋರಾಟ: ರೋಚಕ ಘಟ್ಟದತ್ತ ಪಂದ್ಯ

Dream11 IPL 2020, RR vs CSK Live Score: ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ಈವರೆಗೆ ಐಪಿಎಲ್​ನಲ್ಲಿ ಒಟ್ಟು 21 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಸಿಎಸ್​ಕೆ 14 ಹಾಗೂ ರಾಜಸ್ಥಾನ್ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ರಾಜಸ್ಥಾನ್ ರಾಯಲ್ಸ್.

ರಾಜಸ್ಥಾನ್ ರಾಯಲ್ಸ್.

 • Share this:
  ಶಾರ್ಜಾ (ಸೆ.22): ಇಲ್ಲಿನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2020 ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಭರ್ಜರಿ ರನ್ ಕಲೆಹಾಕಿದೆ. ಸಂಜು ಸ್ಯಾಮ್ಸನ್ ಹಾಗೂ ಜೋಫ್ರಾ ಆರ್ಚರ್ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ನಾಯಕ ಸ್ಟೀವ್ ಸ್ಮಿತ್ ಅವರ ಮನಮೋಹಕ ಅರ್ಧಶತಕದ ನೆರವಿನಿಂದ ಆರ್ಆರ್ತಂಡ 20 ಓವರ್ನಲ್ಲಿ ಬರೋಬ್ಬರಿ 216 ರನ್ ಗಳಿಸಿದೆ.

  ಸದ್ಯ ಟಾರ್ಗೆಟ್ ಬೆನ್ನಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್​ ದಿಢೀರ್ 4 ವಿಕೆಟ್ ಕಳೆದುಕೊಂಡಿದೆ. ಸಿಎಸ್​ಕೆ ಉತ್ತಮ ಆರಂಭ ಪಡೆದುಕೊಂಡಿತಾದರೂ ಬಳಿಕ 4 ಪ್ರಮುಖ ವಿಕೆಟ್ ಕಳೆದುಕೊಂಡಿತು. ಓಪನರ್​ಗಳಾದ ಶೇನ್ ವಾಟ್ಸನ್ ಹಾಗೂ ಮುರಳಿ ವಿಜಯ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್​ಗೆ ಅರ್ಧಶತಕದ ಜೊತೆಯಾಟ ಆಡಿದರು.

  ಆದರೆ, 7ನೇ ಓವರ್​ನಲ್ಲಿ 21 ಎಸೆತಗಳಲ್ಲಿ 33 ರನ್ ಬಾರಿಸಿದ್ದ ವಾಟ್ಸನ್ ತೇವಾಟಿಯ ಬೌಲಿಂಗ್​ನಲ್ಲಿ ಬೌಲ್ಡ್ ಆದರು. ಇದರ ಬೆನ್ನಲ್ಲೇ 21 ರನ್ ಗಳಿಸಿದ್ದ ವಿಜಯ್ ಕೂಡ ನಿರ್ಗಮಿಸಿ ಶಾಕ್ ನೀಡಿದರು. ಸ್ಯಾಮ್ ಕುರ್ರನ್ 2 ಸಿಕ್ಸರ್ ಸಿಡಿಸಿ 17 ರನ್​ಗೆ ಸುಸ್ತಾದರು. ಚೊಚ್ಚಲ ಐಪಿಎಲ್ ಆಡುತ್ತಿರುವ ಋತುರಾಜ್ ಗಾಯಕ್ವಾಡ್ ಸೊನ್ನೆ ಸುತ್ತಿದರು.

  ಕೇದರ್ ಜಾಧವ್ ಆಟ 22 ರನ್​ಗೆ ಅಂತ್ಯವಾಯಿತು. ಸದ್ಯ ಡುಪ್ಲೆಸಿಸ್ ಹಾಗೂ ಎಂಎಸ್ ಧೋನಿ ಕ್ರೀಸ್​ನಲ್ಲಿದ್ದಾರೆ.

  ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಆರ್​ ತಂಡ ಆರಂಭದಲ್ಲೇ ಆಘಾತ ಅನುಭವಿಸಿತು. ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡುತ್ತಿರುವ ಯಶಸ್ವಿ ಜೈಸ್ವಾಲ್ ಕೇವಲ 6 ರನ್​ಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು.

  ನಂತರ ನಾಯಕ ಸ್ಟೀವ್ ಸ್ಮಿತ್ ಜೊತೆಯಾದ ಸಂಜು ಸ್ಯಾಮ್ಸನ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಸ್ಫೋಟಕ ಆಟ ಪ್ರದರ್ಶಿಸಿದ ಸ್ಯಾಮ್ಸನ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮನಬಂದಂತೆ ಬ್ಯಾಟ್ ಬೀಸಿದ ಸ್ಯಾಮ್ಸನ್ ನೀರುಕುಡಿದಂತೆ ಚೆಂಡನ್ನು ಸಿಕ್ಸರ್​ಗೆ ಅಟ್ಟಿದರು.

  ಈ ಜೋಡಿ ಕೇವಲ 9 ಓವರ್​​ನಲ್ಲೇ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು. ಆದರೆ 12ನೇ ಓವರ್​ನಲ್ಲಿ ಸ್ಯಾಮ್ಸನ್ ಮತ್ತೊಂದು ಸಿಕ್ಸ್ ಸಿಡಿಸಲು ಹೋಗಿ ಔಟ್ ಆದರು. ಸಂಜು ಕೇವಲ 32 ಎಸೆತಗಳಲ್ಲಿ 1 ಬೌಂಡರಿ ಹಾಗೂ ಬರೋಬ್ಬರಿ 9 ಸಿಕ್ಸರ್ ಸಿಡಿಸಿ 74 ರನ್ ಚಚ್ಚಿದರು. ಈ ಮೂಲಕ ಇವರಿಬ್ಬರ 121 ರನ್​​ಗಳ ಅಮೋಘ ಜೊತೆಯಾಟಕ್ಕೆ ಬ್ರೇಕ್ ಬಿತ್ತು.

  ಬಂದ ಬೆನ್ನಲ್ಲೇ ಡೇವಿಡ್ ಮಿಲ್ಲರ್ ರನೌಟ್ ಆಗುವ ಮೂಲಕ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು. ರಾಬಿನ್ ಉತ್ತಪ್ಪ(5) ಕೂಡ ನಿರಾಸೆ ಮೂಡಿಸಿದರು. ಆದರೆ, ಅಂತಿಮ ಹಂತದ ವರೆಗೆ ಬ್ಯಾಟ್ ಬೀಸಿದ ನಾಯಕ ಸ್ಮಿತ್ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು ಏರಿಸಿದರು.

  ಸ್ಮಿತ್ 47 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಿಡಿಸಿ 69 ರನ್ ಬಾರಿಸಿದರು. ಕೊನೆಯ ಓವರ್​ನಲ್ಲಿ ಜೋಫ್ರಾ ಆರ್ಚರ್ ಆರ್ಭಟಿಸಿದರು. ಮೊದಲ ಸತತ 4 ಸಿಕ್ಸರ್ ಸಿಡಿಸಿ ತಂಡದ ಮೊತ್ತ 200ರ ಗಡಿ ದಾಟಿಸಿದರು. ಆರ್ಚರ್ ಕೇವಲ 7 ಎಸೆತಗಳಲ್ಲಿ 27 ರನ್ ಕಲೆಹಾಕಿದರು

  ಅಂತಿಮವಾಗಿ ರಾಜಸ್ಥಾನ್ ತಂಡ 20 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿತು. ಚೆನ್ನೈ ಪರ ಸ್ಯಾಮ್ ಕುರ್ರನ್ 3 ವಿಕೆಟ್ ಕಿತ್ತರೆ ದೀಪಕ್ ಚಹಾರ್, ಲುಂಗಿ ಎನ್​ಗಿಡಿ, ಹಾಗೂ ಪಿಯೂಷ್ ಚಾವ್ಲಾ ತಲಾ 1 ವಿಕೆಟ್ ಪಡೆದರು.

  ಇಂದಿನ  ಪಂದ್ಯಕ್ಕೆ ಉಭಯ ತಂಡಗಳು ಬಲಿಷ್ಠ ಆಟಗಾರರನ್ನೇ ಕಣಕ್ಕಿಳಿಸಿದೆ. ಚೆನ್ನೈ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು ಇಂಜುರಿಯಿಂದ ಬಳಲುತ್ತಿರುವ ಅಂಬಟಿ ರಾಯುಡು ಬದಲು ಋತುರಾಜ್ ಗಾಯಕ್ವಾಡ್ ಅವಕಾಶ ಪಡೆದುಕೊಂಡಿದ್ದಾರೆ.

  ಚೆನ್ನೈ ಸೂಪರ್ಕಿಂಗ್ಸ್: ಶೇನ್ವ್ಯಾಟ್ಸನ್‌, ಮುರಳಿ ವಿಜಯ್‌, ಫಾಪ್ ಡುಪ್ಲೆಸಿಸ್, ಋತುರಾಜ್ ಗಾಯಕ್ವಾಡ್, ಕೇದಾರ್ಜಾಧವ್‌, ಎಂಎಸ್ಧೋನಿ (ನಾಯಕ, ವಿಕೆಟ್ಕೀಪರ್‌), ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ದೀಪಕ್ಚಹರ್‌, ಪಿಯೂಷ್ ಚಾವ್ಲಾ, ಲುಂಗಿ ಎನ್​ಗಿಡಿ.

  IPL 2020: RCB ವಿರುದ್ಧ ತನ್ನದೇ ದಾಖಲೆಯನ್ನು ಅಳಿಸಿ ಹಾಕಿದ ವಿಜಯ್ ಶಂಕರ್

  ರಾಜಸ್ಥಾನ್ ರಾಯಲ್ಸ್: ಸ್ಟೀವ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಾಬಿನ್ ಉತ್ತಪ್ಪ, ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ಶ್ರೇಯಸ್ ಗೋಪಾಲ್, ಟಾಮ್ ಕುರ್ರನ್, ರಾಹುಲ್ ತೇವಾಟಿಯಾ, ಜೋಫ್ರಾ ಆರ್ಚರ್, ಜಯದೇವ್ ಉನಾದ್ಕಟ್.
  Published by:Vinay Bhat
  First published: