IPL 2020, RR vs CSK: ಇಂದು ರಾಜಸ್ಥಾನಕ್ಕೆ ಚೆನ್ನೈ ಸವಾಲು; ತಂಡದಲ್ಲಿಲ್ಲ ಪ್ರಮುಖರು
Dream11 IPL 2020, RR v/s CSK: ಚೆನ್ನೈ ತಂಡಕ್ಕೆ ಎಂಎಸ್ ಧೋನಿ ನೇತೃತ್ವ ಇದೆ.ಈ ತಂಡದಲ್ಲಿ ಅನುಭವಿ ಆಟಗಾರರ ಸಂಖ್ಯೆ ಹೆಚ್ಚಿದೆ. ಡೇನ್ ಬ್ರಾವೋ ಗಾಯಗೊಂಡಿದ್ದು, ಈ ಪಂದ್ಯಕ್ಕೆ ಅವರು ಲಭ್ಯವಿಲ್ಲ. ಸುರೇಶ್ ರೈನಾ ಭಾರತಕ್ಕೆ ವಾಪಾಸಾಗಿದ್ದಾರೆ. ಹೀಗಾಗಿ, ಚೆನ್ನೈಗೆ ಗೆಲುವು ಸುಲಭದ ತುತ್ತಲ್ಲ.
ಮಾಜಿ ಚಾಂಪಿಯನ್ಸ್ ರಾಜಸ್ಥಾನ ರಾಯಲ್ಸ್ ಐಪಿಎಲ್ನಲ್ಲಿ ಮೊದಲು ಗೆಲುವನ್ನು ದಾಖಲಿಸಿರುವ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈಗಾಗಲೇ ಚೆನ್ನೈ ಮುಂಬೈ ವಿರುದ್ಧ ಮೊದಲು ಗೆಲುವು ಸಾಧಿಸಿದ್ದು, ಈಗ ರಾಜಸ್ಥಾನವನ್ನು ಸೋಲಿಸಿ ಎರಡನೇ ಗೆಲುವು ಸಾಧಿಸಿಕೊಳ್ಳುವ ತವಕದಲ್ಲಿದೆ. ಅತ್ತ ರಾಜಸ್ಥಾನ್ ರಾಯಲ್ಸ್ ಮೊದಲ ಪಂದ್ಯದಲ್ಲಿ ಶುಭಾರಂಭ ಮಾಡುವ ತವಕದಲ್ಲಿದೆ. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಆರ್ಆರ್ ಕಣಕ್ಕೆ ಇಳಿಯುತ್ತಿದೆ. ಜೋಸ್ ಬಟ್ಲರ್ ಹಾಗೂ ಬೆನ್ ಸ್ಟೋಕ್ಸ್ ಇಂದಿನ ಪಂದ್ಯಕ್ಕೆ ಲಭ್ಯವಾಗುತ್ತಿಲ್ಲ. ಇದು ರಾಜಸ್ಥಾನ ರಾಯಲ್ಸ್ ತಂಡದ ದೊಡ್ಡ ಮೈನಸ್ ಪಾಯಿಂಟ್ ಆಗಲಿದೆ. ಬಟ್ಲರ್ ಇಂಗ್ಲೆಂಡ್ನಿಂದ ಯುಎಇಗೆ ಆಗಮಿಸಿದ್ದಾರೆ. ಅವರು 6 ದಿನ ಕ್ವಾರಂಟೈನ್ನಲ್ಲಿರುವುದು ಕಡ್ಡಾಯವಾಗಿದೆ. ಆಲ್ ರೌಂಡರ್ ಬೆನ್ ಸ್ಟೋಕ್ಸ್ ಇನ್ನೂ ನ್ಯೂಜಿಲೆಂಡ್ನಿಂದ ಆಗಮಿಸಿಲ್ಲ. ಕನ್ನಡಿಗ ರಾಬಿನ್ ಉತ್ತಪ್ಪ, ಶ್ರೇಯಸ್ ಗೋಪಾಲ್ ಹಾಗೂ ಅನಿರುದ್ಧ ಜೋಷಿ ತಂಡದ ಪ್ರಮುಖರು.
ಇನ್ನು, ಚೆನ್ನೈ ತಂಡಕ್ಕೆ ಎಂಎಸ್ ಧೋನಿ ನೇತೃತ್ವ ಇದೆ.ಈ ತಂಡದಲ್ಲಿ ಅನುಭವಿ ಆಟಗಾರರ ಸಂಖ್ಯೆ ಹೆಚ್ಚಿದೆ. ಡೇನ್ ಬ್ರಾವೋ ಗಾಯಗೊಂಡಿದ್ದು, ಈ ಪಂದ್ಯಕ್ಕೆ ಅವರು ಲಭ್ಯವಿಲ್ಲ. ಸುರೇಶ್ ರೈನಾ ಭಾರತಕ್ಕೆ ವಾಪಾಸಾಗಿದ್ದಾರೆ. ಹೀಗಾಗಿ, ಚೆನ್ನೈಗೆ ಗೆಲುವು ಸುಲಭದ ತುತ್ತಲ್ಲ.