ಶಾರ್ಜಾ (ಸೆ.22): ಇಲ್ಲಿನಶಾರ್ಜಾಕ್ರಿಕೆಟ್ಕ್ರೀಡಾಂಗಣದಲ್ಲಿನಡೆಯುತ್ತಿರುವಐಪಿಎಲ್ 2020ರನಾಲ್ಕನೇಪಂದ್ಯದಲ್ಲಿಚೆನ್ನೈಸೂಪರ್ಕಿಂಗ್ಸ್ ವಿರುದ್ಧರಾಜಸ್ಥಾನ್ರಾಯಲ್ಸ್ತಂಡಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ನಲ್ಲಿ ಸಂಜು ಸ್ಯಾಮ್ಸನ್ ಹಾಗೂ ನಾಯಕ ಸ್ಟೀವ್ ಸ್ಮಿತ್ ಅಬ್ಬರಿಸಿದರೆ, ಬೌಲರ್ಗಳ ಸಂಘಟಿತ ಹೋರಾಟದ ನೆರವಿನಿಂದ ಆರ್ ಆರ್ ತಂಡ 16 ರನ್ಗಳ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ರಾಜಸ್ಥಾನ್ ರಾಯಲ್ಸ್ ನೀಡಿದ್ದ 217 ರನ್ಗಳ ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟಿದ ಸಿಎಸ್ಕೆ ಉತ್ತಮ ಆರಂಭ ಪಡೆದುಕೊಂಡಿದ್ದು ಬಿಟ್ಟರೆ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡಿತು. ಓಪನರ್ಗಳಾದ ಶೇನ್ ವಾಟ್ಸನ್ ಹಾಗೂ ಮುರಳಿ ವಿಜಯ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ ಅರ್ಧಶತಕದ ಜೊತೆಯಾಟ ಆಡಿದರು.
ಆದರೆ, 7ನೇ ಓವರ್ನಲ್ಲಿ 21 ಎಸೆತಗಳಲ್ಲಿ 33 ರನ್ ಬಾರಿಸಿದ್ದ ವಾಟ್ಸನ್ ತೇವಾಟಿಯ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಇದರ ಬೆನ್ನಲ್ಲೇ 21 ರನ್ ಗಳಿಸಿದ್ದ ವಿಜಯ್ ಕೂಡ ನಿರ್ಗಮಿಸಿ ಶಾಕ್ ನೀಡಿದರು. ಸ್ಯಾಮ್ ಕುರ್ರನ್ 2 ಸಿಕ್ಸರ್ ಸಿಡಿಸಿ 17 ರನ್ಗೆ ಸುಸ್ತಾದರು. ಚೊಚ್ಚಲ ಐಪಿಎಲ್ ಆಡಿದ ಋತುರಾಜ್ ಗಾಯಕ್ವಾಡ್ ಸೊನ್ನೆ ಸುತ್ತಿದರು.
ಇತ್ತ ಡುಪ್ಲೆಸಿಸ್ ಅವರು ಧೋನಿ ಜೊತೆಗೂಡಿ ತಂಡದ ಗೆಲುವಿಗೆ ಕಠಿಣ ಹೋರಾಟ ನಡೆಸಿದರಾರೂ ಯಾವುದೇ ಪ್ರಯೋಜನವಾಗಲಿಲ್ಲ. ಡುಪ್ಲೆಸಿಸ್ 37 ಎಸೆತಗಳಲ್ಲಿ 1 ಬೌಂಡರಿ, 7 ಸಿಕ್ಸರ್ ಸಿಡಿಸಿ 72 ರನ್ ಸಿಡಿಸಿ ಔಟ್ ಆದರು. ಧೋನಿ 4 ಸಿಕ್ಸರ್ ಚಚ್ಚಿ ಅಜೇಯ 29 ರನ್ ಗಳಿಸಿದರು.
ಅಂತಿಮವಾಗಿ ಚೆನ್ನೈ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಆರ್ಆರ್ ಪರ ರಾಹುಲ್ ತೇವಾಟಿಯ 3 ವಿಕೆಟ್ ಕಿತ್ತು ಮಿಂಚಿದರೆ, ಟಾಮ್ ಕುರ್ರನ್, ಶ್ರೇಯಸ್ ಗೋಪಾಲ್ ಹಾಗೂ ಜೋಫ್ರಾ ಆರ್ಚೆರ್ ತಲಾ 1 ವಿಕೆಟ್ ಪಡೆದರು.
16 ರನ್ಗಳ ಭರ್ಜರಿ ಜಯದೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡ ಉತ್ತಮ ಶುಭಾರಂಭ ಮಾಡಿದೆ. ಜೊತೆಗೆ ತನ್ನ ಖಾತೆಗೆ 2 ಅಂಕ ಸೇರಿಸಿಕೊಂಡಿದೆ.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಆರ್ಆರ್ ತಂಡ ಆರಂಭದಲ್ಲೇ ಆಘಾತ ಅನುಭವಿಸಿತು. ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡಿದ ಯಶಸ್ವಿ ಜೈಸ್ವಾಲ್ ಕೇವಲ 6 ರನ್ಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು.
ನಂತರ ನಾಯಕ ಸ್ಟೀವ್ ಸ್ಮಿತ್ ಜೊತೆಯಾದ ಸಂಜು ಸ್ಯಾಮ್ಸನ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಸ್ಫೋಟಕ ಆಟ ಪ್ರದರ್ಶಿಸಿದ ಸ್ಯಾಮ್ಸನ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮನಬಂದಂತೆ ಬ್ಯಾಟ್ ಬೀಸಿದ ಸ್ಯಾಮ್ಸನ್ ನೀರುಕುಡಿದಂತೆ ಚೆಂಡನ್ನು ಸಿಕ್ಸರ್ಗೆ ಅಟ್ಟಿದರು.
ಈ ಜೋಡಿ ಕೇವಲ 9 ಓವರ್ನಲ್ಲೇ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು. ಆದರೆ 12ನೇ ಓವರ್ನಲ್ಲಿ ಸ್ಯಾಮ್ಸನ್ ಮತ್ತೊಂದು ಸಿಕ್ಸ್ ಸಿಡಿಸಲು ಹೋಗಿ ಔಟ್ ಆದರು. ಸಂಜು ಕೇವಲ 32 ಎಸೆತಗಳಲ್ಲಿ 1 ಬೌಂಡರಿ ಹಾಗೂ ಬರೋಬ್ಬರಿ 9 ಸಿಕ್ಸರ್ ಸಿಡಿಸಿ 74 ರನ್ ಚಚ್ಚಿದರು. ಈ ಮೂಲಕ ಇವರಿಬ್ಬರ 121 ರನ್ಗಳ ಅಮೋಘ ಜೊತೆಯಾಟಕ್ಕೆ ಬ್ರೇಕ್ ಬಿತ್ತು.
ಬಂದ ಬೆನ್ನಲ್ಲೇ ಡೇವಿಡ್ ಮಿಲ್ಲರ್ ರನೌಟ್ ಆಗುವ ಮೂಲಕ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು. ರಾಬಿನ್ ಉತ್ತಪ್ಪ(5) ಕೂಡ ನಿರಾಸೆ ಮೂಡಿಸಿದರು. ಆದರೆ, ಅಂತಿಮ ಹಂತದ ವರೆಗೆ ಬ್ಯಾಟ್ ಬೀಸಿದ ನಾಯಕ ಸ್ಮಿತ್ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು ಏರಿಸಿದರು.
ಸ್ಮಿತ್ 47 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಿಡಿಸಿ 69 ರನ್ ಬಾರಿಸಿದರು. ಕೊನೆಯ ಓವರ್ನಲ್ಲಿ ಜೋಫ್ರಾ ಆರ್ಚರ್ ಆರ್ಭಟಿಸಿದರು. ಮೊದಲ ಸತತ 4 ಸಿಕ್ಸರ್ ಸಿಡಿಸಿ ತಂಡದ ಮೊತ್ತ 200ರ ಗಡಿ ದಾಟಿಸಿದರು. ಆರ್ಚರ್ ಕೇವಲ 7 ಎಸೆತಗಳಲ್ಲಿ 27 ರನ್ ಕಲೆಹಾಕಿದರು
ಅಂತಿಮವಾಗಿ ರಾಜಸ್ಥಾನ್ ತಂಡ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿತು. ಚೆನ್ನೈ ಪರ ಸ್ಯಾಮ್ ಕುರ್ರನ್ 3 ವಿಕೆಟ್ ಕಿತ್ತರೆ ದೀಪಕ್ ಚಹಾರ್, ಲುಂಗಿ ಎನ್ಗಿಡಿ, ಹಾಗೂ ಪಿಯೂಷ್ ಚಾವ್ಲಾ ತಲಾ 1 ವಿಕೆಟ್ ಪಡೆದರು.
Published by:Vinay Bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ