ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿರುವ ತಂಡಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಮುಖವಾದೂದು ಎನ್ನಬಹುದು. ಇದಕ್ಕೆ ಮುಖ್ಯ ಕಾರಣ ತಂಡದಲ್ಲಿರುವ ಆಟಗಾರರು ಮತ್ತು ಫ್ರಾಂಚೈಸಿಯ ಮೆಚ್ಚುಗೆಯ ನಡೆ. ಹೌದು, ಈ ಬಾರಿ ಕೂಡ ಆರ್ಸಿಬಿ ತಂಡ ಅಭಿಮಾನಿಗಳು ಹೆಮ್ಮೆ ಪಡುವಂತಹ ಕಾರ್ಯವೊಂದನ್ನು ಮಾಡಿದೆ. ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡ, ಕೋವಿಡ್-19 ಹತ್ತಿಕ್ಕಲು ನೆರವು ನೀಡಿದ ಹೀರೋಗಳಿಗೆ ಗೌರವ ಸಲ್ಲಿಸಲಿದೆ. ಆರ್ಸಿಬಿ ಈಗಾಗಲೇ 'ಮೈ ಕೋವಿಡ್ ಹೀರೋಸ್' (ನನ್ನ ಕೋವಿಡ್ ವೀರರು) ಎಂಬ ಹೆಸರಿನ ಜೆರ್ಸಿ ಹೊರ ತಂದಿದೆ.
ಐಪಿಎಲ್ ಅಭ್ಯಾಸದ ವೇಳೆ ಮತ್ತು ಇಡೀ ಟೂರ್ನಿಯುದ್ದಕ್ಕೂ ಆರ್ಸಿಬಿ ಈ ವಿಭಿನ್ನ ಜೆರ್ಸಿ ಧರಿಸಲಿದೆ. ಜೆರ್ಸಿಯ ಹಿಂಬಾಗ ಆಟಗಾರರ ಸಂಖ್ಯೆ ಇರುವ ಭಾಗದಲ್ಲಿ 'ಮೈ ಕೋವಿಡ್ ಹೀರೋಸ್' ಎಂದು ಪ್ರಿಂಟ್ ಹಾಕಲಾಗಿದೆ.
ಕ್ರಿಕೆಟ್ ಹೇಗೆ ಆಡಬೇಕೆಂಬುದನ್ನು ಸ್ಟಾರ್ಕ್ ನೋಡಿ ಕಲಿಯಿರಿ: ಮತ್ತೆ ಸುದ್ದಿಯಲ್ಲಿ ಮಂಕಡ್ ರನೌಟ್
ಆರ್ಸಿಬಿಯ ಆಟಗಾರರು ಮೊದಲ ಪಂದ್ಯದಲ್ಲಿ ಧರಿಸಿದ್ದ ಜೆರ್ಸಿಯನ್ನು ಹರಾಜು ಹಾಕಿ ಅದರಿಂದ ಬರುವ ಹಣವನ್ನು ಗೀವ್ ಇಂಡಿಯಾ ಫೌಂಡೇಶನ್ಗೆ ನೀಡಲಾಗುತ್ತದೆ. ಕೊರೋನಾ ವೀರರಿಗೆ ಗೌರವ ಸಲ್ಲಿಸುವ ಸಲುವಾಗಿ ಹೊರ ತರಲಾಗಿರುವ ಜೆರ್ಸಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್ಸಿಬಿ ಅಧ್ಯಕ್ಷ ಸಂಜೀವ್ ಚೂರಿವಾಲ, 'ಆರ್ಸಿಬಿ ತಂಡ ಯಾವತ್ತಿಗೂ ಪ್ರತಿಕೂಲ ಪರಿಸ್ಥಿತಿಯಲ್ಲಿ ಆಡುವುದಕ್ಕೋಸ್ಕರ ನಿಂತಿದೆ. ನಮ್ಮ ಕೋವಿಡ್ ಹೀರೋಗಳು ಪಟ್ಟು ಬಿಡದೆ ಶ್ರಮಿಸುವ ಮೂಲಕ ಕೋವಿಡ್ ಹತ್ತಿಕ್ಕುವ ಉದ್ದೇಶ ಸಾಕಾರಗೊಳಿಸುತ್ತಿದ್ದಾರೆ ಎಂದು ನಾವು ಭಾವಿಸಿದ್ದೇವೆ,' ಎಂದರು.
ಈ ಘೋಷಣಾ ಕಾರ್ಯಕ್ರಮದ ವರ್ಚ್ಯುಯಲ್ ಉದ್ಘಾಟನೆಯಲ್ಲಿ ಸಂಜೀವ್ ಚುರಿವಾಲ, ನಾಯಕ ವಿರಾಟ್ ಕೊಹ್ಲಿ, ಪಾರ್ಥಿವ್ ಪಟೇಲ್ ಹಾಗೂ ಪ್ರಾರಂಭಿಕ ಆಟಗಾರ ದೇವ್ ದತ್ ಪಡ್ಡಿಕಲ್ ಇದ್ದರು.
ಇನ್ನೂ ಐಪಿಎಲ್ ಕುರಿತು ಮಾತನಾಡಿದ ನಾಯಕ ವಿರಾಟ್ ಕೊಹ್ಲಿ, ಖಾಲಿ ಕ್ರೀಡಾಂಗಣದಲಲ್ಲಿ ಆಡುವುದರ ಬಗ್ಗೆ ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಅನುಪಸ್ಥಿತಿಯಲ್ಲೂ ತಮ್ಮ ತಂಡದ ಸಾಮರ್ಥ್ಯ ಕುಗ್ಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾವೆಲ್ಲರೂ ಖಾಲಿ ಕ್ರೀಡಾಂಗಣಗಳ ಮುಂದೆ ಆಡುವ ಬಗ್ಗೆ ಈಗಾಗಲೇ ಯೋಚಿಸಿದ್ದೇವೆ. ಇದೊಂದು ವಿಚಿತ್ರ ಭಾವನೆಯನ್ನುಂಟು ಮಾಡಲಿದೆ. ಆದರೆ ನಾವು ಅದನ್ನು ಖಂಡಿತ ಅಲ್ಲಗಳೆಯಲು ಸಾಧ್ಯವಿಲ್ಲ ಎಂದಿದ್ದಾರೆ.
IPL 2020: 7 ವಿದೇಶಿ ಕೋಚ್ಗಳ ತಂತ್ರಕ್ಕೆ ಕನ್ನಡಿಗನ ರಣತಂತ್ರ..!
ದಿನದ ಕೊನೆಯಲ್ಲಿ ನೀವು ಏಕೆ ಕ್ರೀಡೆಯನ್ನು ಆಡಲು ಪ್ರಾಂರಂಭಿಸಿದ್ದೀರಿ ಎಂಬುದು ನಿಮಗೆ ಅರ್ಥವಾಗುತ್ತದೆ. ಜೊತೆಗೆ ಈ ಸಂದರ್ಭದಲ್ಲಿ ನೀವು ಆಟವನ್ನು ಎಷ್ಟರಮಟ್ಟಿಗೆ ಇಷ್ಟಪಡುತ್ತೀರಿ ಎಂಬುದನ್ನು ತೋರಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಯಾವುದೇ ಕ್ರೀಡಾಗಾದರೂ ಅಭಿಮಾನಿಗಳು ಒಂದು ಪ್ರಮುಖ ಭಾಗವಾಗಿರುತ್ತಾರೆ. ಈಗ ಅದು ಆಟಕ್ಕೆ ಪ್ರಮುಖ ವಿಷಯವಲ್ಲ. ಈ ಪರಿಸ್ಥಿತಿಯಲ್ಲೂ ನಾವು ಸಾವಿರಾರು ಜನರಿಗೆ ಸಂತೋಷವನ್ನು ತರುವ ಅವಕಾಶವಿದೆ. ಪ್ರೇಕ್ಷಕರ ಅನುಪಸ್ಥಿತಿಯಿಂದ ನಮ್ಮಲ್ಲಿರುವ ಸಾಮರ್ಥ್ಯ ಮತ್ತು ಉತ್ಸಾಹದ ಮಟ್ಟ ಇಳಿಯುವುದಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ