IPL

  • associate partner
HOME » NEWS » Ipl » IPL 2020 ROHIT SHARMA BATS IN THE NETS AHEAD OF RCB CLASH ZP

IPL 2020: ಟೀಮ್ ಇಂಡಿಯಾದಿಂದ ಔಟ್ ಆದ ಬೆನ್ನಲ್ಲೇ RCB ವಿರುದ್ಧದ ಪಂದ್ಯಕ್ಕೆ ಹಿಟ್​ಮ್ಯಾನ್ ಸಜ್ಜು..!

ಕಿಂಗ್ಸ್ ಇಲೆವೆನ್ ಪಂಜಾಬ್ ಪಂದ್ಯದ ವೇಳೆ ರೋಹಿತ್ ಶರ್ಮಾ ಎಡಗಾಲ ಮಂಡಿ ನೋವಿನಿಂದ ಬಳಲುತ್ತಿದ್ದರು. ಇದೇ ಕಾರಣದಿಂದ ಸಿಎಸ್​ಕೆ ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು.

news18-kannada
Updated:October 27, 2020, 5:28 PM IST
IPL 2020: ಟೀಮ್ ಇಂಡಿಯಾದಿಂದ ಔಟ್ ಆದ ಬೆನ್ನಲ್ಲೇ RCB ವಿರುದ್ಧದ ಪಂದ್ಯಕ್ಕೆ ಹಿಟ್​ಮ್ಯಾನ್ ಸಜ್ಜು..!
Rohit sharma
  • Share this:
ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆ ಹಂತದಲ್ಲಿದೆ. ಅತ್ತ ಕಳೆದ ಎರಡು ಪಂದ್ಯಗಳಿಂದ ಫಿಟ್​ನೆಸ್ ಸಮಸ್ಯೆಯಿಂದ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಗುಳಿದಿದ್ದರು. ಇತ್ತ ಆಸ್ಟ್ರೇಲಿಯಾ ಸರಣಿಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಇದರ ಬೆನ್ನಲ್ಲೇ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಿಟ್​ಮ್ಯಾನ್​ರನ್ನು ಆಸೀಸ್​ ಸರಣಿಯಿಂದ ಹೊರಗಿಡಲಾಗಿದೆ. ಹೀಗಾಗಿ ಮುಂಬೈ ಪರ ಇನ್ನುಳಿದ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಆಡುವುದು ಅನುಮಾನ ಎನ್ನಲಾಗಿತ್ತು. ಹೀಗಾಗಿಯೇ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ ಎಂದು ಹೇಳಲಾಗಿತ್ತು.

ಆದರೆ ಆಸ್ಟ್ರೇಲಿಯಾ ಸರಣಿಗೆ ಟೀಮ್ ಇಂಡಿಯಾ ಪ್ರಕಟಗೊಂಡ ಎರಡು ಗಂಟೆಗಳ ಬಳಿಕ, ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ನೆಟ್ಸ್​ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುವ ವಿಡಿಯೋವನ್ನು ಮುಂಬೈ ಇಂಡಿಯನ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಬುಧವಾರ ನಡೆಯುವ ಪಂದ್ಯದಲ್ಲಿ ಹಿಟ್​ಮ್ಯಾನ್ ಕಣಕ್ಕಿಳಿಯುವುದು ಕನ್ಫರ್ಮ್ ಎನ್ನಲಾಗುತ್ತಿದೆ. ಆದರೆ ಇದರೊಂದಿಗೆ ರೋಹಿತ್ ಅವರ ಫಿಟ್ನೆಸ್ ಬಗ್ಗೆ ಗೊಂದಲ ಏರ್ಪಟ್ಟಿದೆ.
ಏಕೆಂದರೆ ಕಿಂಗ್ಸ್ ಇಲೆವೆನ್ ಪಂಜಾಬ್ ಪಂದ್ಯದ ವೇಳೆ ರೋಹಿತ್ ಶರ್ಮಾ ಎಡಗಾಲ ಮಂಡಿ ನೋವಿನಿಂದ ಬಳಲುತ್ತಿದ್ದರು. ಇದೇ ಕಾರಣದಿಂದ ಸಿಎಸ್​ಕೆ ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಚೇತರಿಸಿಕೊಂಡಿದ್ದು, ಮತ್ತೆ ಬ್ಯಾಟ್ ಬೀಸಲು ಅಣಿಯಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಇದೀಗ ಬಿಸಿಸಿಐ ಹಿಟ್​ಮ್ಯಾನ್​ರನ್ನು ತಂಡದಿಂದ ಕೈ ಬಿಡಲು ಗಾಯದ ಸಮಸ್ಯೆ ಒಂದು ಕಾರಣನಾ? ಅಥವಾ ಆಸ್ಟ್ರೇಲಿಯಾ ಪ್ರವಾಸಕ್ಕೆ ಇನ್ನೂ ಒಂದು ತಿಂಗಳುಗಳು ಇರುವಾಗ ರೋಹಿತ್ ಶರ್ಮಾ ಅವರ ಗಾಯವನ್ನು ಗಂಭೀರವಾಗಿ ಯಾಕೆ ಪರಿಗಣಿಸಿದರು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ.ಈ ಎಲ್ಲಾ ಪ್ರಶ್ನೆಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಕಣಕ್ಕಿಳಿಯುವ ಮೂಲಕ ಹಿಟ್​ಮ್ಯಾನ್ ಉತ್ತರ ನೀಡಲಿದ್ದಾರಾ ಕಾದು ನೋಡಬೇಕಿದೆ.
POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: IPL 2020: ಬೆನ್ ಸ್ಟೋಕ್ಸ್ ಬೆರಳು ಮಡಚಿದ್ದರ ಹಿಂದಿದೆ ಮತ್ತೊಂದು ಕಹಾನಿ..!
Published by: zahir
First published: October 27, 2020, 5:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories