Rishabh Pant: ಈ ಬಾರಿ ರಿಷಭ್ ಪಂತ್ ಬ್ಯಾಟ್​ನಿಂದ ನೋಡಲಿದ್ದೀರಿ ವಿಶಿಷ್ಟ ಶಾಟ್: ಇಲ್ಲಿದೆ ವಿಡಿಯೋ

ಐಪಿಎಲ್ ಆರಂಭವಾದ ಮುಂದಿನ ದಿನವೇ ಅಂದರೆ ಸೆಪ್ಟೆಂಬರ್ 20, ಭಾನುವಾರದಂದು ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

news18-kannada
Updated:September 16, 2020, 2:51 PM IST
Rishabh Pant: ಈ ಬಾರಿ ರಿಷಭ್ ಪಂತ್ ಬ್ಯಾಟ್​ನಿಂದ ನೋಡಲಿದ್ದೀರಿ ವಿಶಿಷ್ಟ ಶಾಟ್: ಇಲ್ಲಿದೆ ವಿಡಿಯೋ
Rishabh Pant
  • Share this:
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭ ಹತ್ತಿರವಾಗುತ್ತಿದ್ದಂತೆ ಆಟಗಾರರ ಅಭ್ಯಾಸ ಕೂಡ ಭರ್ಜರಿ ಆಗಿಯೇ ಸಾಗುತ್ತಿದೆ. ಕಳೆದ ಬಾರಿಯ ಟೂರ್ನಿಯಲ್ಲಿ ವಿಶ್ವದ ಶ್ರೇಷ್ಠ ಆಟಗಾರರನ್ನು ಹೊಂದಿದ್ದ ಚೆನ್ನೈ ಸೂಪರ್ ಕಿಂಗ್ಸ್​, ಮುಂಬೈ ಇಂಡಿಯನ್ಸ್ ತಂಡಕ್ಕೆ ಕಠಿಣ ಪೈಪೋಟಿ ನೀಡಿದ್ದ ತಂಡ ಎಂದರೆ ಡೆಲ್ಲಿ ಕ್ಯಾಪಿಟಲ್ಸ್​. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಡೆಲ್ಲಿ ತಂಡ ಕ್ವಾರ್ಟರ್ ಫೈನಲ್ ವರೆಗೆ ಎದುರಾಳಿಗೆ ಸವಾಲು ನೀಡಿತ್ತು.

ತಂಡ ಅಷ್ಟರ ಮಟ್ಟಿಗೆ ಅತ್ಯುತ್ತಮ ಪ್ರದರ್ಶನ ನೀಡಲು ಓಪನರ್​ಗಳಾದ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಒಂದು ಕಡೆಯಾದರೆ, ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಸ್ಫೋಟಕ ಫಿನಿಶಿಂಗ್ ನೀಡುತ್ತಿದ್ದ ರಿಷಭ್ ಪಂತ್ ಕಾರ್ಯ ಮಹತ್ವದ್ದು.

IPL 2020: ಈ ಆರ್​ಸಿಬಿ ಆಟಗಾರ ನನ್ನಂತೆಯೇ ಬ್ಯಾಟ್ ಬೀಸುತ್ತಾನೆ: ಎಬಿ ಡಿವಿಲಿಯರ್ಸ್ ಹೇಳಿದ್ದು ಯಾರನ್ನು?

ಈ ಬಾರಿ ಕೂಡ ಡೆಲ್ಲಿ ಕ್ಯಾಪಿಟಲ್ಸ್​ ಬಲಿಷ್ಠವಾಗಿದ್ದು ಕಪ್ ಗೆಲ್ಲುವ ನೆಚ್ಚಿನ ತಂಡ ಎಂದರೆ ತಪ್ಪಾಗಲಾರದು. ಇತ್ತೀಚೆಗಷ್ಟೆ ತಂಡದ ನಾಯಕ ಅಯ್ಯರ್, ಈ ಬಾರಿಯ ಐಪಿಎಲ್​ನಲ್ಲಿ ನಾನು ನಾಯಕನಾಗಿ ಒಂದೇ ಒಂದು ಪಂದ್ಯ ಸೋಲದೆ ದಾಖಲೆ ಮಾಡಬೇಕು ಎಂದು ಹೇಳಿದ್ದರು.

ಇದಕ್ಕಾಗಿ ಡೆಲ್ಲಿ ಬಾಯ್ಸ್​ ಭರ್ಜರಿ ಅಭ್ಯಾಸದಲ್ಲೂ ನಿರತರಾಗಿದ್ದಾರೆ. ಅದರಲ್ಲೂ ಸ್ಫೋಟಕ ಬ್ಯಾಟ್ಸ್​ಮನ್​ ರಿಷಭ್ ಪಂತ್ ತಮ್ಮ ವಿಶಿಷ್ಠ ಶೈಲಿಯ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅಭ್ಯಾಸ ನಡೆಸುತ್ತಿರುವ ವೇಳೆ ಪಂತ್ ಅವರು ಇಶಾಂತ್ ಶರ್ಮಾ ಬೌಲಿಂಗ್​ನಲ್ಲಿ ತಮ್ಮದೆ ಆದ ವಿಚಿತ್ರ ಶೈಲಿಯಲ್ಲಿ ಚೆಂಡನ್ನು ಸಿಕ್ಸರ್​​ಗೆ ಅಟ್ಟಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೆಚ್ಚು ಯುವ ಆಟಗಾರರಿಂದಲೇ ಕೂಡಿದೆ. ಇದೇ ಈ ತಂಡಕ್ಕೆ ಪ್ಲಸ್ ಪಾಯಿಂಟ್. ಯಾಕೆಂದರೆ ಯುವಕರಿಗೆ ಗೆಲುವಿನೆಡೆಗಿನ ಹಪಹಪಿ ಹೆಚ್ಚು. ಅಲ್ಲದೆ ಉತ್ತಮ ಪ್ರದರ್ಶನ ಮೂಲಕ ಗಮನ ಸೆಳೆಯುವ ಆಯೋಚನೆಯೂ ಆಟಗಾರರಲ್ಲಿರುತ್ತದೆ.

ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಪೃಥ್ವಿ ಶಾ, ಶಿಮ್ರನ್ ಹೆಟ್ಮೈಯರ್, ಸಂದೀಪ್ ಲಮಿಚಾನೆ ಇಂಥ ಯುವಕರಲ್ಲದೆ ಶಿಖರ್ ಧವನ್, ಅಜಿಂಕ್ಯ ರಹಾನೆ, ಆರ್‌ ಅಶ್ವಿನ್, ಕಗಿಸೊ ರಬಾಡ, ಮಾರ್ಕಸ್ ಸ್ಟೋಯ್ನಿಸ್ ನಂಥ ಅನುಭವಿಗಳೂ ಈ ತಂಡದಲ್ಲಿದ್ದಾರೆ. ಅಲ್ಲದೆ ಹೆಡ್ ಕೋಚ್ ಆಗಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಜವಾಬ್ದಾರಿಯಲ್ಲಿದ್ದಾರೆ.

IPL 2020: ಚೆನ್ನೈ ಸೂಪರ್ ಕಿಂಗ್ಸ್​ಗಿಂತ​ ಮುಂಬೈ ಇಂಡಿಯನ್ಸ್ ಬಲಿಷ್ಠ: ಗೌತಮ್ ಗಂಭೀರ್

ಐಪಿಎಲ್ ಆರಂಭವಾದ ಮುಂದಿನ ದಿನವೇ ಅಂದರೆ ಸೆಪ್ಟೆಂಬರ್ 20, ಭಾನುವಾರದಂದು ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
Published by: Vinay Bhat
First published: September 16, 2020, 2:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading