• Home
 • »
 • News
 • »
 • ipl
 • »
 • IPL 2020: ಮಯಾಂಕ್ ಅಗರ್ವಾಲ್ ಪಂದ್ಯದಿಂದ ಹೊರಗುಳಿದಿರುವ ಕಾರಣ ಇಲ್ಲಿದೆ

IPL 2020: ಮಯಾಂಕ್ ಅಗರ್ವಾಲ್ ಪಂದ್ಯದಿಂದ ಹೊರಗುಳಿದಿರುವ ಕಾರಣ ಇಲ್ಲಿದೆ

mayank agarwal

mayank agarwal

mayank agarwal: ಇದೇ ಕಾರಣದಿಂದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಿಂದಲೂ ಕನ್ನಡಿಗ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ ಅವಕಾಶ ಪಡೆದಿರುವ ಮಂದೀಪ್ ಸಿಂಗ್ ನಾಯಕ ಕೆಎಲ್ ರಾಹುಲ್ ಜೊತೆ ಇನಿಂಗ್ಸ್​ ಆರಂಭಿಸಲಿದ್ದಾರೆ.

 • Share this:

  ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಸ್ಟಾರ್ ಆಟಗಾರ ಮಯಾಂಕ್ ಅಗರ್ವಾಲ್ ಕೊಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧದ ಪಂದ್ಯದಿಂದಲೂ ಹೊರಗುಳಿದಿದ್ದಾರೆ. ಶನಿವಾರ ನಡೆದ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಪ್ರಮುಖ ಪಂದ್ಯಕ್ಕೂ ಅಲಭ್ಯರಾಗಿದ್ದರು. ಅತ್ಯುತ್ತಮ ಫಾರ್ಮ್​ನಲ್ಲಿ ಮಯಾಂಕ್ ಮಹತ್ವದ ಪಂದ್ಯದಿಂದ ಹೊರಗುಳಿದಿದ್ದು ಅಚ್ಚರಿಗೆ ಕಾರಣವಾಗಿದೆ. ಆದರೆ ಅದರ ಹಿಂದಿನ ಕಾರಣವೇನು ಎಂದು ಕೆದಕಿದಾಗ ಸಿಗುವ ಉತ್ತರ ಗಾಯದ ಸಮಸ್ಯೆ.


  ಹೌದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ವಿಕೆಟ್ ನಡುವಿನ ಓಟದ ವೇಳೆ ಪೂರನ್ ಜೊತೆಗಿನ ಗೊಂದಲದಿಂದಾಗಿ ರನೌಟ್​ಗೆ ಬಲಿಯಾಗಿದ್ದರು. ಈ ವೇಳೆ ಅವರ ಕಾಲಿಗೆ ಗಾಯವಾಗಿತ್ತು. ಮೈದಾನದಿಂದ ಕುಂಟುತ್ತಲೇ ಡ್ರೆಸ್ಸಿಂಗ್ ರೂಂ ನತ್ತ ಹೆಜ್ಜೆ ಹಾಕಿದ್ದರು. ಆ ಗಾಯದಿಂದ ಮಯಾಂಕ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಇದೇ ಕಾರಣದಿಂದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಿಂದಲೂ ಕನ್ನಡಿಗ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ ಅವಕಾಶ ಪಡೆದಿರುವ ಮಂದೀಪ್ ಸಿಂಗ್ ನಾಯಕ ಕೆಎಲ್ ರಾಹುಲ್ ಜೊತೆ ಇನಿಂಗ್ಸ್​ ಆರಂಭಿಸಲಿದ್ದಾರೆ.


  ಇನ್ನು ಮಯಾಂಕ್ ಈ ಗಾಯದ ಸಮಸ್ಯೆ ಪಂಜಾಬ್ ತಂಡಕ್ಕೆ ಮಾತ್ರವಲ್ಲ, ಟೀಮ್ ಇಂಡಿಯಾಗೂ ಆಯ್ಕೆದಾರರಿಗೂ ತಲೆನೋವು ಉಂಟು ಮಾಡಲಿದೆ. ಏಕೆಂದರೆ ಮುಂಬರುವ ಆಸ್ಟ್ರೇಲಿಯಾ ಸರಣಿಗೆ ಯುವ ಆಟಗಾರರ ಆಯ್ಕೆಯಾಗುವ ಸಾಧ್ಯೆತೆ ಹೆಚ್ಚಿತ್ತು. ಹೀಗಾಗಿ ಆದಷ್ಟು ಬೇಗ ಮಯಾಂಕ್ ಚೇತರಿಸಿಕೊಂಡರೆ ಅನುಭವಿ ದಾಂಡಿಗರ ಪಡೆಯೊಂದಿಗೆ ಟೀಮ್ ಇಂಡಿಯಾ ಆಸೀಸ್ ಪ್ರವಾಸ ಕೈಗೊಳ್ಳಲಿದೆ.
  POINTS TABLE:  SCHEDULE TIME TABLE:  ORANGE CAP:  PURPLE CAP:  RESULT DATA:  MOST SIXES:  ಇದನ್ನೂ ಓದಿ: IPL 2020: ಬೆನ್ ಸ್ಟೋಕ್ಸ್ ಬೆರಳು ಮಡಚಿದ್ದರ ಹಿಂದಿದೆ ಮತ್ತೊಂದು ಕಹಾನಿ..!

  Published by:zahir
  First published: